ಕರ್ನಾಟಕ ರಕ್ಷಣಾ ವೇದಿಕೆ 6 ಕೋಟಿ ಕನ್ನಡಿಗರ ಸ್ವತ್ತು : ಪ್ರವೀಣ ಶೆಟ್ಟಿ

ಬಸವನಬಾಗೇವಾಡಿ:ನ.21: ಕರ್ನಾಟಕ ರಕ್ಷಣಾ ವೇದಿಕೆ ಯಾವ ವ್ಯಕ್ತಿಯ ಸ್ವತ್ತು ಅಲ್ಲಾ. 6 ಕೋಟಿ ಕನ್ನಡಿಗರ ಕಾರ್ಯಕರ್ತರ ಸ್ವತ್ತು. ಇದು ಯಾರ ಆಸ್ತಿ ಆಗಲಿಕ್ಕೂ ಸಾಧ್ಯವಿಲ್ಲ ಎಂದು ಕರ್ನಾಟಕ ರಕ್ಷಣಾವೇದಿಕೆ ರಾಜ್ಯಧ್ಯಕ್ಷ ಪ್ರವೀಣ ಶೆಟ್ಟಿ ಹೇಳಿದರು.

ಪಟ್ಟಣದ ಆರಾಧ್ಯ ದೈವ ಮೂಲ ನಂದೀಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಮೂಲ ನಂದೇಶ್ವರನ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾವೆಲ್ಲರು ನಮ್ ಉದ್ದೋಗದೊಂದಿಗೆ ಕನ್ನಡ ಉಳಿಸುವ ಕೆಲಸವನ್ನು ಮಾಡಿದ್ದೆವೆ ಕನ್ನಡಿಗರಿಗೆ ಉದ್ದೋಗ ಸಿಗಬೇಕು, ಕರ್ನಾಟಕದಲ್ಲಿ ಕನ್ನಡ ಉಳಿಯಬೇಕು ಕರ್ನಾಟಕದಲ್ಲಿ ಕನ್ನಡಿಗನೆ ಸಾರ್ವಭೌಮ ಎಂದು ಹೋರಾಟ ಮಾಡುತ್ತ ಬಂದಿದ್ದೆವೆ, ಇತ್ತಿಚೆಗೆ ಕೋರ್ಟಿನಿಂದ ನಾರಾಯಣಗೌಡರ ಕಡೆ ಆದೇಶ ಆಗಿರುವುದು ಸತ್ಯ ನಾವು ಈ ವಿಷಯಕ್ಕೆ ಸಂಭಂದಿಸಿದಂತೆ ಹೈ ಕೋರ್ಟನಲ್ಲಿ ದಾವೆ ಹೂಡಿದ್ದೆವೆ ಅದು ಅಲ್ಲದೆ ನಾವು ಕೂಡ ಪ್ರವೀಣ ಶೆಟ್ಟಿ ಬಣ ಅಂತ ರಜಿಶೇಷನ್ ಮಾಡಿದ್ದೆವೆ, ರಕ್ಷಣಾ ವೇದಿಕೆ ನಂದು ನಂದು ಅನ್ನುವುದಕ್ಕೆ ಇದು ಯಾವುದೇ ಭೂಮಿಯ ವ್ಯಹಾರವಲ್ಲಾ ಹಣಕಾಸಿನ ವ್ಯವಹಾರವೂ ಅಲ್ಲಾ ಸೋಶಿಯಲ್ ಸರ್ವಿಸ್ ಮಾಡಲು ಇರುವ ಒಂದು ವೇದಿಕೆ ಯಾರು ಬೇಕಾದರು ಕನ್ನಡವನ್ನು ಉಳಿಸಲು ಸಂಘಟನೆ ಮಾಡಬಹುದು , ಕುವೆಂಪು ಅವರ ಭಾವ ಚಿತ್ರ ಹೊಯ್ಸಳರ ಲಾಂಛನ ಯಾರ ಸ್ವತ್ತು ಆಗಲಿಕ್ಕೆ ಸಾಧ್ಯವಿಲ್ಲ ಡಾ, ಬಾಬಾಸಾಹೇಬ ಅಂಬೇಡ್ಕರ ಅವರು ದೇಶಕ್ಕೆ ಸಂವಿಧಾನವನ್ನು ಕೊಟ್ಟಿದ್ದಾರೆ ನಾವೆಲ್ಲ ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೆವೆ ಎಂದರು.

ಈ ಸಂಧರ್ಭದಲ್ಲಿ ಕರ್ನಾಟಕ ರಕ್ಷಣಾವೇದಿಕೆ ಪ್ರವೀಣ ಶೆಟ್ಟಿ ಬಣದ ರಾಜ್ಯ ಉಪಾಧ್ಯಕ್ಷ ಶಿವರಾಜೆ ಗೌಡ, ಕಾರ್ಯದರ್ಶಿ ಲೋಕೆಶ, ದಾರವಾಡ ಅಧ್ಯಕ್ಷ ಮಂಜುನಾಥ ಲೋದಿಮಠ, ಜಿಲ್ಲಾ ಅಧ್ಯಕ್ಷ ಸಂತೋಷ ತಾಳಿಕೋಟಿ, ತಾಲೂಕಾ ಗೌರವ ಅಧ್ಯಕ್ಷ ಮಹೇಶ ಹಾರಿವಾಳ, ಅಧ್ಯಕ್ಷ ನಾತು ರಾಠೋಡ, ಉಪಾಧ್ಯಕ್ಷ ಶರಣು ಯಾತದ, ನಗರಘಟಕ ಅಧ್ಯಕ್ಷ ಸಂಗು ಮುರಾಳ, ವಿಜಯ ಕುಂಬಾರ, ಶಿವಾಜಿ ಪವಾರ, ಬಸವರಾಜ ಕಮತಗಿ, ಅಪ್ಪು ಸಂಗಮ, ಮಂಜು ಮಾಳಜಿ, ವಿಮಲ ಸೂಳಿಬಾವಿ, ಆನಂದ ಹಿರೇಮಠ ಸೇರಿದಂತೆ ಮುಂತಾದವರು ಇದ್ದರು.