ಕರ್ನಾಟಕ ರಕ್ಷಣಾ ವೇದಿಕೆ ಪರಿಸರ ಜಾಗೃತಿ ಅಭಿಯಾನದ ಮೂಲಕ ವಿಜಯನಗರ ಜಿಲ್ಲಾ ಘಟಕ ಉದ್ಘಾಟನೆ

ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ 02 : ಕರ್ನಾಟಕ ರಕ್ಷಣಾ ವೇದಿಕೆಯ ಸಂಘಟನೆಗಳ ಒಕ್ಕೂಟ ವಿಜಯನಗರ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕದ ಉದ್ಘಾಟನೆ ಗುರುವಾರ ಅದ್ದೂರಿಯಾಗಿ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟನೆ ನೆರವೇರಿಸಿದ ಹೊಸಪೇಟೆ ಉಪ ವಿಭಾಗಾಧಿಕಾರಿ ಸಿದ್ದರಾಮೇಶ್ವರ ಪರಿಸರ ಸಂರಕ್ಷಣೆ ನಮ್ಮ ಮುಂದಿರುವ ಉಳಿವಿನ ಮಾರ್ಗವಾಗಿದ್ದು ಇಂತಹ ಯಾವುದೇ ಕಾರ್ಯಕ್ಕೆ ಸರ್ಕಾರದ ಸಹಕಾರ ಇರುತ್ತದೆ ಎಂದರು.
ಅತಿಥಿ ಪೌರಾಯುಕ್ತ ಮನ್ಸೂರ್ ಅಲಿ ಮಾತನಾಡಿ ಪ್ರತಿಯೊಬ್ಬರು ತಮ್ಮ ಹೊಣೆ ನಿರ್ವಹಿಸಬೇಕು ಪರಿಸರ ರಕ್ಷಣೆ ಎಲ್ಲರ ಹೊಣೆ ಎಂದರು.
ಜಿಲ್ಲಾ ಘಟಕ: ಎಂ ಶಶಿಧರ ಹಾಗೂ ತಾಲೂಕು ಅಧ್ಯಕ್ಷ ವಿಶಾಲ್ ಸೋನಿ ನೇತೃತ್ವದಲ್ಲಿ ನೂತನ ಘಟಕದ ಪದಾಧಿಕಾರಿಗಳು ಪದಗೃಹಣ ಮಾಡಿದರು.
ಕಾರ್ಯಕ್ರಮದಲ್ಲಿ ಪೌರಾಯುಕ್ತ ಮನ್ಸೂರ್ ಅಲಿ, ರಾಜಾಧ್ಯಕ್ಷ  ಡಾ. ಚಲಪತಿಗೌಡ್ , ಉದ್ಯಮಿ ಪಂತರಜಯಂತ್, ಭೂಪಾಳ ಪ್ರಹ್ಲಾದ್, ಪ್ರಭಾಕರ್, ಎಂ.ಶಶಿಧರ್,  ವಿಸಾಲ್ ಸೋನಿ, ವ್ಯಾಸರಾಜ್ ಜೋಶಿ, ಪಲ್ಲವಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.