ಕರ್ನಾಟಕ ರಕ್ಷಣಾ ವೇದಿಕೆಯಿಂದ ಪುನೀತ ರಾಜಕುಮಾರ ಅವರಿಗೆ ಶ್ರದ್ದಾಂಜಲಿ

ವಿಜಯಪುರ, ನ.12-ಕರ್ನಾಟಕ ರಕ್ಷಣಾ ವೇದಿಕೆ ನಮ್ಮ ಬಣ ಹಾಗೂ ಪುನೀತರಾಜಕುಮಾರ ಅಭಿಮಾನಿಗಳ ಸಂಘ ಜಂಟಿಯಾಗಿ ನಗರದ ಅಮೀರ ಚಲನಚಿತ್ರ ಮಂದಿರದಲ್ಲಿ ಸಭೆ ಸೇರಿ ದಿವಂಗತ ಪವರಸ್ಟಾರ್ ಪುನೀತ ರಾಜಕುಮಾರ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶೇಷರಾವ ಮಾನೆ ಮಾತನಾಡಿ ಪುನೀತರಾಜಕುಮಾರ ಕೊಡಮಾಡಿದ ಸಾಮಾಜಿಕ ಸೇವೆ ಸಂಗೀತ, ಸಾಹಿತ್ಯ, ಕಲೆ ನೃತ್ಯ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ ಹೆಸರುವಾಸಿಯಾಗಿ ಹಲವು ಶಿಕ್ಷಣ ಸಂಸ್ಥೆಗಳಿಗೆ ಅವರು ಕೊಡಮಾಡಿದ ಸೇವೆ ಅನನ್ಯ, ಚಿಕ್ಕ ವಯಸ್ಸಿನಲ್ಲಿ ಕನ್ನಡ ಚಿತ್ರ ರಂಗದ ಅಭಿಮಾನಿಗಳನ್ನು ಬಿಟ್ಟು ಇಹಲೋಕ ತ್ಯಜಿಸಿದ ಪ್ರಯುಕ್ತ ನಾಡಿನ ಅಭಿಮಾನಿಗಳು ಶೋಕದಲ್ಲಿ ಮುಳುಗಿದೆ.
ಅವರ ಮರಣೋತ್ತರವಾಗಿ ಕರ್ನಾಟಕ ರಾಜ್ಯ ಸರಕಾರವು ಪದ್ಮಶ್ರೀ ಪ್ರಶಸ್ತಿ ನೀಡಬೇಕು ಎಂಬುದು ಇಡಿ ಕನ್ನಡ ನಾಡಿನ ಕನ್ನಡಪರ ಸಂಘಟನೆಗಳ ಹಾಗೂ ಪವರಸ್ಟಾರ ಪುನೀತರಾಜಕುಮಾರ ಅಭಿಮಾನಿಗಳ ಆಸೆಯಾಗಿದ್ದು ಮಾನ್ಯ ಮುಖ್ಯಮಂತ್ರಿಗಳು ನಾಡಿನ ಅಭಿಮಾನಿಗಳ ಕರೆಯನ್ನು ಆಲಿಸಿ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂದು ಆಗ್ರಹಿಸಿದರು.
ವೇದಿಕೆ ಜಿಲ್ಲಾ ಗೌರವಾಧ್ಯಕ್ಷ ಎಂ.ಎಂ. ಖಲಾಸಿ ಮಾತನಾಡಿ ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು, ತಂದೆಗಿಂತ ಹೆಚ್ಚಿನ ಪ್ರಮಾಣದಲ್ಲಿ ನಾಡು,ನುಡಿ, ನೆಲ, ಜಲ ಪರಿಸರ ಸಂರಕ್ಷಣೆ, ಕಲೆ ಸಂಗೀತ, ಸಂಸ್ಕøತಿಗೆ ಅಣೆಯಾಗಿ ಹಲವಾರು ಶೈಕ್ಷಣಿಕ, ಸಾಂಸ್ಕøತಿಕ ಸೇವೆಯನ್ನು ಪರಿಗಣಿಸಿ ಪದ್ಮಶ್ರೀ ಪ್ರಶಸ್ತಿ ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಹೇಳಿದರು.
ಸಭೆಯಲ್ಲಿ ಅಮೀರ ಚಿತ್ರಮಂದಿರದ ಒಡೆಯರಾದ ಶೌಕತ ಬೀಳಗಿ, ಎಚ್.ಎಸ್. ಬೀಳಗಿ, ಪ್ರದಾನ ಕಾರ್ಯದರ್ಶಿ ಕೆ.ಕೆ. ಬನ್ನಟ್ಟಿ, ಅನಿಲ ಸಾಗರ, ಬಾದಶಾಹ ಗುಲಬರ್ಗಾ, ವಸಂತ ಸಿಂಧೆ, ಅರ್ಜುನ ಕಳಸಕರ, ಆಕಾಶ ಮಾದರ, ಮನು ರಜಪುತ, ಅಸ್ಲಮ ಶೇಖ, ಮುನಿರ ಶೇಖ, ಯಾಸೀನ ಮುಲ್ಲಾ, ಹಮೀದ ಬೀಳಗಿ, ರಹೆಮಾನ ಜಮಾದಾರ, ಆನಂದ ವಾಲಿ, ಖಾಜಾಮೀನ ಶೇಖ, ಶಬ್ಬಿರ ಶೇಖ, ಶರಣಬಸಪ್ಪ ತುಂಬದ ಮುಂತಾದವರು ಉಪಸ್ಥಿತರಿದ್ದರು.