ಕರ್ನಾಟಕ ಭಾವೈಕ್ಯ ಸಿರಿ ಪ್ರಶಸ್ತಿಗೆ ಸಲೀಮ್ ಪಟೇಲ್ ಮರ್ತೂರ್ ಆಯ್ಕೆ

ಸಿಂದಗಿ :ಫೆ.18: ಪತ್ರಿಕಾ ರಂಗದಲ್ಲಿ ಅನುಪಮ ಸೇವೆಯನ್ನು ಗುರುತಿಸಿ ಪಟ್ಟಣದ ವಿಶ್ವವಾಣಿ ದಿನಪತ್ರಿಕೆಯ ವರದಿಗಾರ ಸಲೀಮ್ ಪಟೇಲ್ ಮರ್ತೂರ ಅವರನ್ನು ಕರ್ನಾಟಕ ಬಾವೈಕ್ಯ ಸಿರಿ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕಲೆ ಸಾಹಿತ್ಯ ಸಂಸ್ಕøತಿ ಕನ್ನಡಮ್ಮನ ಸೇವೆಯಲ್ಲಿ ನಿರಂತರವಾಗಿ ಸಮಾಜಮುಖಿ ಸುದ್ದಿಗಳನ್ನು ಹೆಸರು ಮಾಡಿರುವುದನ್ನು ಗುರಿತಿಸಿ ಪ್ರಶಸ್ತಿ ನೀಡಲಾಗುತ್ತಿದೆ ರತ್ನ ಪವರ್ ಸ್ಟಾರ್ ಪುನೀತರಾಜಕುಮಾರ ಅವರ ಸವಿ ನೆನಪಿಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣ ಅಧ್ಯಕ್ಷರ ಪದಗ್ರಹಣ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವು ದಿನಾಂಕ 18.2.2024ರಂದು ಪಟ್ಟಣದ ಬಸವ ಮಂಟಪದಲ್ಲಿ ಸಾಯಂಕಾಲ 5 ಗಂಟೆಗೆ ಕಾರ್ಯಕ್ರಮ ಜರುಗಲಿದ್ದು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಬಾಗವಹಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.