ಕರ್ನಾಟಕ ಬ್ಯಾಂಕ್ ಎಟಿಎಂ ಕೇಂದ್ರಕ್ಕೆ ಬೆಂಕಿ

ಕೆ.ಆರ್.ನಗರ, ಏ.29:- ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿ ಇದ್ದ ಕರ್ನಾಟಕ ಬ್ಯಾಂಕ್ ಎಟಿಎಂ ಕೇಂದ್ರಕ್ಕೆ ಬೆಂಕಿ ಬಿದ್ದು ಶೇ. 90ರಷ್ಟು ಸುಟ್ಟು ಹೋಗಿದ್ದು, ನಿಲ್ದಾಣದಲ್ಲಿದ್ದ ಪ್ರಯಾಣಿಕರು ಗಂಬರಿಗೊಂಡು ಅಡ್ಡಾಗಿಡ್ಡಿ ಓಡಾಡಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಕೆಎಸ್‍ಆರ್‍ಟಿಸಿಯ ಬಸ್ ನಿಲ್ದಾಣ ನವೀಕರಣಗೊಂಡ ನಂತರ ಕರ್ನಾಟಕ ಬ್ಯಾಂಕ್ ಸೇರಿದಂತೆ ಇತರ ಮೂರು ಬ್ಯಾಂಕ್‍ಗಳ ಎಟಿಎಂ ಶಾಖೆಗಳು, ಕಂಪ್ಯೂಟರ್ ಸೆಂಟರ್ ಸೇರಿದಂತೆ ಹಲವು ವಾಣಿಜ್ಯ ಮಳಿಗೆಗಳಿದ್ದು ಕರ್ನಾಟಕ ಬ್ಯಾಂಕ್‍ನ ಎಟಿಎಂ ನಲ್ಲಿ ವಿದ್ಯುತ್ ಅವಘಡ ಸಂಭವಿಸಿ ಬೆಂಕಿ ತಗುಲಿದೆ ಎಂದು ಹೇಳಲಾಗಿದೆ.
ಎಟಿಎಂನಲ್ಲಿದ್ದ ಹಣ, ಪರಿಕರಗಳು, ಎರಡು ಹವನಿಯಂತ್ರಣ ಯಂತ್ರಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಅಗ್ನಿ ಶಾಮಕ ಠಾಣೆಯ ಸಿಬ್ಬಂದಿಗಳು ಸಕಾಲದಲ್ಲಿ ಆಗಮಿಸಿ ಬೆಂಕಿ ನಿಂದಿಸುವಲ್ಲಿ ಯಶಸ್ವಿಯಾದರು. ಇದರಿಂದ ಅಕ್ಕಪಕ್ಕದ ಮಳಿಗೆಗಳಿ ಯಾವುದೇ ರೀತಿ ತೊಂದರೆಯಾಗಿಲ್ಲ.
ಎಟಿಎಂ ಬಳಿ ಜೇನುಹುಳ ಗೂಡು ಕಟ್ಟಿತ್ತು ಬೆಂಕಿ ಬಿದ್ದ ಕೂಡಲೇ ನಿಲ್ದಾಣ ಪೂರ್ಣವಾಗಿ ಹೊಗೆಯಿಂದ ತುಂಬಿ ಹೋಗಿದ್ದು ಜೇನು ಹುಳುಗಳಿಂದ ತಪ್ಪಿಸಿಕೊಳ್ಳಲು ಪ್ರಯಾಣಿಕರು ಹರಸಾಹಸ ಪಡಬೇಕಾಯಿತು. ನಿಲ್ದಾಣದ ಎರಡು ಬದಿಯಲ್ಲೂ ವಿವಿಧ ಮಾರ್ಗಗಳಿಗೆ ತೆರಳಲು ನಿಂತಿದ್ದ ಹತ್ತಾರು ಬಸ್‍ಗಳನ್ನು ಕೂಡಲೇ ಹೊರ ಕಳುಹಿಸಲಾಯಿತು.
ಸ್ಥಳೀಯ ಪೆÇಲೀಸರು ನಿಲ್ದಾಣಕ್ಕೆ ಬರುವ ಎರಡು ಬದಿಯಲ್ಲೂ ನಿಂತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಿ ಬಸ್‍ಗಳ ಮಾರ್ಗ ಬದಲಾವಣೆ ಮಾಡಿ ಕಳುಹಿಸಲಾಯಿತು. ಪ್ರಯಾಣೀಕರು ಸೇರಿದಂತೆ ಪಟ್ಟಣದ ಜನತೆ ಸಾವಿರಾರು ಸಂಖ್ಯೆಯಲ್ಲಿ ನಿಲ್ದಾಣಕ್ಕೆ ಬರುತ್ತಿದ್ದನ್ನು ತಡೆಗಟ್ಟಲು ಪೆÇಲೀಸರು ಹರಸಾಹಸ ಪಡಬೇಕಾಯಿತು.