ಕರ್ನಾಟಕ ಬ್ಯಾಂಕ್ ಅಣಜಿ ಶಾಖೆಗೆ 39 ವರ್ಷದ ಸಂಭ್ರಮ

ಜಗಳೂರು.ಡಿ.೨೦: ಗ್ರಾಹಕರ ಸಹಕಾರದಿಂದ ಅಣಜಿಯಲ್ಲಿ ಕರ್ನಾಟಕ ಬ್ಯಾಂಕ್ ಶಾಖೆ 1981 ರಲ್ಲಿ ಪ್ರಾರಂಭವಾಗಿ ಇಂದಿಗೆ 39 ವರ್ಷ ತುಂಬಿದ್ದು, ಪ್ರಸ್ತುತ ವರ್ಷ 46 ಕೋಟಿ.80 ಲಕ್ಷ ರೂ. ವ್ಯವಹಾರ ನಡೆಸುತ್ತಿದೆ ಎಂದು ಕರ್ನಾಟಕ ಬ್ಯಾಂಕ್, ಲಿ.ವ್ಯವಸ್ಥಾಪಕರಾದ ಬಸವರಾಜ್ ಹೇಳಿದರು.ದಾವಣಗೆರೆ ತಾಲ್ಲೂಕಿನ ಅಣಜಿ ಗ್ರಾಮದ ಕರ್ನಾಟಕ ಬ್ಯಾಂಕ್, ಲಿ.ಆವರಣದಲ್ಲಿ ಹಮ್ಮಿಕೊಂಡಿದ್ದ 39ನೇ ವರ್ಷ ತುಂಬಿ, 40 ನೇ ವರ್ಷಕ್ಕೆ ಪಾದರ್ಪಣೆ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಅಣಜಿ ಗ್ರಾಮದಲ್ಲಿ ಡಿ.17 ರ 1981 ರಂದು ಪ್ರಾರಂಭವಾದ ಕರ್ನಾಟಕ ಬ್ಯಾಂಕ್  ಈ ವ್ಯಾಪ್ತಿಗೆ ಬರುವ ಅಣಜಿ, ಹೆಮ್ಮನಬೇತೂರು, ಹುಲಿಕಟ್ಟೆ, ಕುರುಡಿ, ಕಿತ್ತೂರು, ದ್ಯಾಮವ್ವನಹಳ್ಳಿ, ಚಿಕ್ಕವ್ವನಾಕ್ತಿಹಳ್ಳಿ ಸೇರಿದಂತೆ ಈ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳ ಗ್ರಾಹಕರ ಸಹಕಾರದಿಂದ 16338 ಖಾತೆದಾರರನ್ನು ಹೊಂದಿದ್ದು, 17 ಕೋಟಿ 86 ಲಕ್ಷರೂ. ಠೇವಣಿಯನ್ನು ಹೊಂದಿದೆ. ರೈತರಿಗೆ ಬೆಳೆ ಸಾಲ, ದೀರ್ಘಾವದಿ ಸಾಲ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ಶಿಕ್ಷಣ ಸಾಲದ ನೆರವು, ಗೃಹ, ವಾಹನ ಸೇರಿದಂತೆ ಒಟ್ಟು 28 ಕೋಟಿ 94 ಲಕ್ಷ ರೂ.ಗಳನ್ನು ಪ್ರಸ್ತುತ ವರ್ಷ ನೀಡಲಾಗಿದೆ ಎಂದವರು ಮಾಹಿತಿ ನೀಡಿದರು.ಶ್ರೀನಿವಾಸ್‌ರಾವ್ ಮಾತನಾಡಿ ಕರ್ನಾಟಕ ಬ್ಯಾಂಕ್ ಉನ್ನತ ಮಟ್ಟಕ್ಕೆ ಬೆಳೆಯಲು ಗ್ರಾಹಕರ ಸಹಕಾರವೆ ಮುಖ್ಯವಾಗಿದೆ. ಗ್ರಾಹಕರು ಹಾಗೂ ಬ್ಯಾಂಕುಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಅಣಜಿ ಗ್ರಾಮದಲ್ಲಿ ಕರ್ನಾಟಕ ಬ್ಯಾಂಕ್ 40 ನೇ ವರ್ಷಕ್ಕೆ ಪಾದಾರ್ಪಣೆಯಾಗಿರುವುದು ಸಂತಸವಾಗಿದ್ದು, ರೈತರು ಸೇರಿದಂತೆ ಲ್ಲಾ ಗ್ರಾಹಕಾರಿಗೂ ಇನ್ನು ಅಗತ್ಯ ಸೇವೆಗಳನ್ನು ಒದಗಿಸಲಿಎಂದು ಶುಭ ಹಾರೈಸಿದರು.  ಈ ಸಂದರ್ಭದಲ್ಲಿ ಅಣಜಿ ಬ್ಯಾಂಕ್ ಲಿ. ಉಪ ವ್ಯವಸ್ಥಾಪಕಾರಾದ ಸುದೀಪ್ ಮರಕಳ, ಸಿಬ್ಬಂಧಿಗಳಾದ ವಿಶ್ವನಾಥ್ ಹಿರೇಮಠ್, ಕಿರಣ್,ರಾಕೇಶ್, ಶರಣ್,ರೈತ ಮುಖಂಡರಾದ ಜಿ.ಟಿ.ಶಿವಕುಮಾರ್,ಜಿ.ಎಸ್.ಶಂಭುಲಿAಗಪ್ಪ, ಎಸ್.ಎಸ್.ತಿಪ್ಪೇಸ್ವಾಮಿ, ಚಿದಾನಂದ ಜಿ.ಎಸ್., ವಿಶ್ವನಾಥ್, ಜಿಎಸ್.ಚೇತನ್‌ಗೌಡ್ರು ಸೇರಿದಂತೆ ಇತರರು ಉಪಸ್ಥಿತರಿದ್ದರು.