ಕರ್ನಾಟಕ ಬಂದ್‌ಗೆ ಬೆಂಬಲವಿಲ್ಲ: ನಾರಾಯಣಗೌಡ

ಬೆಂಗಳೂರು,ಸೆ.೨೭- ವಿವಿಧ ಕನ್ನಡ ಪರ ಸಂಘಟನೆಗಳು ಇದೇ ೨೯ ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ರಕ್ಷಣಾ ವೇದಿಕೆ ಬೆಂಬಲ ನೀಡಲಿಲ್ಲ, ಹಿಂದೆಯೂ ನೀಡಿಲ್ಲ, ಮುಂದೆಯೂ ನೀಡುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾದ್ಯಕ್ಷ ಟಿ.ಎ ನಾರಾಯಣಗೌಡ ಹೇಳಿದ್ದಾರೆ.
ಯಾವುದೇ ಹೋರಾಟ ತಾರ್ಕಿಕ ಅಂತ್ಯಕ್ಕೆ ಬರಬೇಕು. ಆರಂಭದ ಅಸ್ತ್ರವಾಗಬಾರದು. ಅವರು ಬಂದ್‌ಗೆ ಕರೆ ಕೊಡಲಾಗುತ್ತಿದೆ. ಬಂದ್‌ಗೆ ಬೆಲೆ ಇಲ್ಲದಂತಾಗಿದೆ. ಕಾವೇರಿ ವಿಚಾರ ಇಂದು ನಿನ್ನೆಯಲ್ಲ. ಸಾವಿರಾರು ವರ್ಷದ ಇತಿಹಾಸವಿದೆ. ಹೀಗಾಗಿ ಕರ್ನಾಟಕ ಬಂದ್‌ಗೆ ಬೆಂಬಲವಿಲ್ಲ ಎಂದಿದ್ಧಾರೆ
ನಾಲ್ವರು ಕೃಷ್ಣರಾಜ ಒಡೆಯರ್ ಮನೆಯಲ್ಲಿದ್ದ ಚಿನ್ನ ಅಡವಿಟ್ಟು ಕೆಆರ್‌ಎಸ್ ಕಟ್ಟಿದ್ದರು. ಆದರೆ ರಾಜಕಾರಣಿಗಳು ರಾಜಕೀಯ ತೆವಲಿಗಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಎರಡೂ ರಾಜ್ಯಗಳ ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಸಮಸ್ಯೆ ಬಗೆ ಹರಿಸಿಕೊಳ್ಳಲು ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ದೇಶ ದೇಶಗಳನ್ನು ಒಂದು ಮಾಡಲು ಮದ್ಯಸ್ಥಿಕೆ ವಹಿಸುತ್ತಿದ್ದಾರೆ. ಮೊದಲು ರಾಜ್ಯ ರಾಜ್ಯಗಳ ನಡುವೆ ಇರುವ ಸಮಸ್ಯೆ ಬಗೆಹರಿಸಿ, ಅದನ್ನು ಬಿಟ್ಟು ದಕ್ಷಿಣ ರಾಜ್ಯಗಳು ಕಿತ್ತಾಡಿಕೊಳ್ಳಿ ಎಂದು ಆಟ ನೋಡುತ್ತಿದ್ದಾರೆ. ಇಂತಹ ಪ್ರಧಾನಿ ನರೇಂದ್ರ ಮೋದಿ ಅವರ ವರ್ತನೆ ಸರಿಯಲ್ಲ. ರಾಜ್ಯಗಳ ನಡುವೆ ಸಾಮರಸ್ಯ ತರುವ ಉದ್ದೇಶ ಇದ್ದರೆ ಮೊದಲು ಕಾವೇರಿ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದು ಆಗ್ರಹಿಸಿದ್ದಾರೆ.

ವಾಟಾಳ್‌ಗೆ ಸೂಕ್ತ ಸ್ಥಾನ ನೀಡಿ
ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರಿಗೆ ಸೂಕ್ತ ಸ್ಥಾನ ಮಾನ ನೀಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಗೌಡ ವಿವಿಧ ಪಕ್ಷಗಳನ್ನು ಆಗ್ರಹಿಸಿದ್ದಾರೆ.
ವಿಧಾನಪರಿಷತ್, ರಾಜ್ಯಸಭೆಗೆ ಕಳುಹಿಸಿ, ಕನ್ನಡ ಹೋರಾಟಗಾರರು, ರೈತರು, ದಲಿತ ಸಂಘಟನೆಗಳ ನಾಯಕರನ್ನು ಕಳುಹಿಸಿ, ಬರೀ ರಾಜಕಾರಣಿಗಳು ದುಡ್ಡು ಇರುವವರಿಗೆ ಅವಕಾಶ ಮಾಡಿಕೊಡುತ್ತೀರಾ ಎಂದು ವಾಗ್ದಾಳಿ ನಡೆಸಿದ್ದಾರೆ.