ಕರ್ನಾಟಕ ಪ್ರವೇಶಿಸಿದ ಸೆಲ್ವನ್ ಸೈಕಲ್ ಯಾತ್ರೆ

(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಜ13: ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥವಾಗಿ ತಮಿಳುನಾಡಿನ ಅಭಿಮಾನಿ ಮುತ್ತು ಸೆಲ್ವನ್ 2021ರ ಡಿಸೆಂಬರ್ 21ರಂದು ಸೈಕಲನ್ ಏರಿ ಜಾಗತಿಕ ದಾಖಲೆ ನಿರ್ಮಿಸುವ ಗುರಿ ಹೊಂದಿ ಪ್ರವಾಸಕ್ಕೆ ಹೊರಟಿದ್ದು ಈಗ ಅವರು ಕರ್ನಾಟಕವನ್ನು ಪ್ರವೇಶಿಸಿದ್ದಾರೆ.
ಒಟ್ಟು 34,300 ಕಿಲೋ ಮೀಟರ ಸೈಕಲ್ ಮೇಲೆ ಪ್ರವಾಸ ಮಾಡಿ ಅಪ್ಪುವಿನ ಸ್ಮರಣೆಯನ್ನು ಜಗತ್ತಿಗೆ ಪಸರಿಸುವ ಗುರಿ ಹೊಂದಿ ಈಗಾಗಲೇ ರೂ.20,400 ಕಿಲೋಮೀಟರ್ ಸೈಕಲ್ ಯಾತ್ರೆಯನ್ನು ಮುಗಿಸಿದ್ದು ಜೊತೆಗೆ 2,49800 ಸಸಿ ನೆಡುವ ಮಹತ್ತರ ಗುರಿಯನ್ನು ಹೊಂದಿದ್ದಾರೆ.
ಅವರ ಈ ಕಾರ್ಯಕ್ಕೆ ರಾಜ್ಯಗಳ ಅರಣ್ಯ ಇಲಾಖೆಯವರು ಕೈಜೋಡಿಸುತ್ತಿದ್ದು ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರಣ್ಯ ಇಲಾಖೆಗೆ ಸಸಿ ನೀಡುವಂತೆ ಆದೇಶ ಮಾಡಿದ್ದಾರೆ ಎಂಬುದನ್ನು ಮುತ್ತು ಶೆಲ್ವನ್ ಹಚ್ಚಿಕೊಂಡರು.
ಈಗಾಗಲೇ ತಮಿಳುನಾಡು ಆಂಧ್ರ ತೆಲಂಗಾಣ ಮಧ್ಯಪ್ರದೇಶ ಲಡಾಕ್ ಕಾರ್ಗಿಲ್ ಜಮ್ಮು ಕಾಶ್ಮೀರ ಹರಿಯಾಣ ರಾಜಸ್ಥಾನ ಗುಜರಾತ ಮಹಾರಾಷ್ಟ್ರ ಕೇರಳ ಪಾಂಡಿಚೇರಿ ಚತ್ತೀಸ್ಗಡ ಒಡಿಸ್ಸಾ ಪಶ್ಚಿಮಬಂಗಾಳ ಅಸ್ಸಾಂ ಬಿಹಾರ ಮಿಜೋರಾಮ ಮೇಘಾಲಯ ನಾಗಾಲ್ಯಾಂಡ್ ಮಣಿಪುರ ಬಾಂಗ್ಲಾ ನೇಪಾಳ ಸೇರಿದಂತೆ ಒಟ್ಟು 752 ದಿನಗಳ ಸೈಕಲ್ ಯಾತ್ರೆಯನ್ನು ಮಾಡಿ ದೆಹಲಿಯ ಇಂಡಿಯಾ ಗೇಟ್ ಬಳಿ ತಮ್ಮ ಪ್ರವಾಸಕ್ಕೆ ಅಂತಿಮ ಸ್ವರೂಪ ನೀಡಲಿದ್ದು ನಂತರ 2025 ರ ಜನವರಿ 15ರಂದು ಬೆಂಗಳೂರಿನ ಅಪ್ಪು ಸ್ಮಾರಕದ ಬಳಿ ಜಾಗತಿಕ ದಾಖಲೆಯೊಂದಿಗೆ ತಮ್ಮ ಸೈಕಲ್ ಯಾತ್ರೆಯನ್ನು ಪೂರ್ಣಗೊಳಿಸಲಿದ್ದೇವೆ ಎಂದು ಹೇಳಿದರು.
ಮುತ್ತು ಸೆಲ್ವನ್ ಶುಕ್ರವಾರ ಲಕ್ಷ್ಮೇಶ್ವರಕ್ಕೆ ಬಂದಾಗ ಪುರಸಭೆಯ ಮುಖ್ಯ ಅಧಿಕಾರಿ ಶಂಕರ್ ಹುಲ್ಲಮ್ಮನವರ ನೇತೃತ್ವದಲ್ಲಿ ಪುರಸಭೆಯ ಸದಸ್ಯರು ಸಿಬ್ಬಂದಿ ವರ್ಗದವರು ಅವರಿಗೆ ಶಾಲು ಹೊದಿಸಿ ಗೌರವ ಸಲ್ಲಿಸಿ ಬಿಳ್ಕೊಟ್ಟರು.
ಸೆಲ್ವನ್ ಮಹಾರಾಷ್ಟ್ರ ಕರ್ನಾಟಕದ ಪೆÇಲೀಸರ ಸಹಾಯ ಸಹಕಾರವನ್ನು ಅತ್ಯಂತ ಖುಷಿಯಿಂದ ನೆನಪಿಸಿಕೊಂಡರು ನೆರೆದಿದ್ದ ಜನತೆ ಅವರ ಸಾಹಸ ಕಾರ್ಯಕ್ಕೆ ಮತ್ತು ಅಶ್ವಿನಿ ಪುನೀತ್ ರಾಜಕುಮಾರ್ ಅವರು ನೀಡಿರುವ ಗಂಧದ ಗುಡಿ ಚಿತ್ರದ ಟಿ ಶರ್ಟ್ ನೋಡಿ ಅಪ್ಪು ಅಭಿಮಾನಿಗಳು ಸಂತಸ ಪಟ್ಟರು.