ಕರ್ನಾಟಕ ಪ್ರಜಾ ಸಂಘ ಸಿದ್ದಾಂತ ಚರ್ಚೆ

ಕೋಲಾರ,ಆ.೨೨:ಕರ್ನಾಟಕ ಪ್ರಜಾ ಸಂಘದ ವತಿಯಿಂದ ನಡೆದ ಪೂರ್ವಭಾವಿ ಸಭೆಯನ್ನು ರಾಜ್ಯಾಧ್ಯಕ್ಷ ಹೆಚ್.ಎನ್.ಮೂರ್ತಿ ರವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದು, ಸಭೆಯಲ್ಲಿ ಸಂಘದ ತತ್ವ ಸಿದ್ಧಾಂತಗಳ ಬಗ್ಗೆ ಚರ್ಚಿಸಲಾಯಿತು.
ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಂ.ಆರ್ ಯುವರಾಜ್ ಮಾತನಾಡಿ ಸಂಘದ ರೂಪರೇಷೆಗಳು ಮತ್ತು ನಡವಳಿಕೆಗಳನ್ನು ತಿಳಿಸಿಕೊಟ್ಟರು. ಸಮಾಜದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಸಂವಿಧಾನಿಕವಾಗಿ ಹೇಗೆ ಹೋರಾಟಗಳನ್ನು ರೂಪಿಸಬೇಕು ಹಾಗೂ ನ್ಯಾಯಯುತ ಕಾನೂನು ಹೋರಾಟಕ್ಕೆ ನಮ್ಮ ಸಂಘಟನೆಯು ಬದ್ಧವಾಗಿದ್ದು, ಅದರಂತೆ ಸಂಘಟನೆಯ ಕಾರ್ಯಕರ್ತರು ಕಾನೂನು ಪರ ಹೋರಾಟಕ್ಕೆ ದೈರ್ಯದಿಂದ ಮುನ್ನುಗ್ಗಬೇಕೆಂದು ತಿಳಿಸಿದರು.
ಸಭೆಯಲ್ಲಿ ರಾಜ್ಯ ಸಮಿತಿಯ ಗೌರವಾಧ್ಯಕ್ಷ ಗಾಂಧಿನಗರ ಸಿ.ವೆಂಕಟೇಶ್, ಉಪಾಧ್ಯಕ್ಷ ಹುಣಸನಹಳ್ಳಿ ವೆಂಕಟೇಶ್, ಖಜಾಂಚಿ ಸಂಪತ್‌ಕುಮಾರ್, ಸದಸ್ಯರಾದ ಗದ್ದೆಕಣ್ಣೂರು ಮುನಿಯಪ್ಪ.ಎನ್, ಶಿಳ್ಳಂಗೆರೆ ಆನಂದ್, ಗಾಂಧಿನಗರ ರಾಮಚಂದ್ರ, ಗಾಂಧಿನಗರ ಶ್ರೀಕಾಂತ್, ಅರಹಳ್ಳಿ ಜಗದೀಶ್, ವೆಂಕಟೇಶ್, ಸಂಘದ ಎಲ್ಲಾ ಕಾರ್ಯಕರ್ತರು ಭಾಗವಹಿಸಿದ್ದರು.