ಕರ್ನಾಟಕ ಪ್ರಜಾಶಕ್ತಿ ಸಮಿತಿ ಹೋರಾಟಕ್ಕೆ ಮಣಿದ ಅಧಿಕಾರಿಗಳು -ಕಾಮಗಾರಿ ಪ್ರಾರಂಭ

ಸಿರವಾರ.ಜು.೧೮- ಜಲಜೀವನ ಮಿಷನ್ ಯೋಜನೆಯಲ್ಲಿ ಕೈಗೊಂಡಿರುವ ಕಾಮಗಾರಿಗಳು ಕಳಪೆಯಾಗಿವೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕೈಗೊಳಬೇಕು.
ಕಾಮಗಾರಿಯನ್ನು ಅಂದಾಜು ಪತ್ರಿಕೆಯಲ್ಲಿರುವ ಮಾಡಬೇಕು ಎಂದು ಅರೋಪಿಸಿ ಕರ್ನಾಟಕ ಪ್ರಜಾಶಕ್ತಿ ಸಮಿತಿ ೨೭-೦೬-೨೨ ರಿಂದ ೩೦-೦೬-೨೨ ರ ವರೆಗೂ ಮಾಡಿದ ಹೋರಾಟಕ್ಕೆ ಅಧಿಕಾರಿಗಳು ಸ್ಪಂದಿಸಿ ಕಾಮಗಾರಿಂiiನ್ನು ಪ್ರಾರಂಭಿಸಿರುವುದಕ್ಕೆ ಸಮಿತಿ ತಾಲೂಕ ಅಧ್ಯಕ್ಷ ಸೂರಿ ಹುಸೇನಪ ನಾಯಕ ಅಭಿನಂದನೆ ತಿಳಿಸಿದ್ದಾರೆ.
ಸಿರವಾರ ತಾಲೂಕಿನ ನವಲಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಮರಾಟ ಗ್ರಾಮದಲ್ಲಿ ೨೦೨೧-೨೨ ನೇ ಸಾಲಿನ ಜೆಜೆಎಂ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಅಧಿಕಾರಿಗಳ ನಿರ್ಲಕ್ಷ್ಯ ಗುತ್ತೆದಾರರ ಹಣದಾಸೇಗೆ ಅರೆ ಬರೆ ಕಾಮಗಾರಿಯನ್ನು ಮಾಡಲಾಗಿತು. ಅದನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಸಹ ನಿರ್ಲಕ್ಷ್ಯ ಮಾಡಿದ ಪರಿಣಾಮ ಕಳೆದ ತಿಂಗಳು ೪ ದಿನಗಳ ಕಾಲ ಸಿರವಾರ ತಾ.ಪಂ ಮುಂದೆ ನಮ್ಮ ಸಂಘಟನೆಯಿಂದ ಪ್ರತಿಭಟನೆಯನ್ನು ಮಾಡಲಾಗಿತ್ತು.
ಅದರನ್ವಯ ಅಧಿಕಾರಿಗಳು ಕಳಪೆಯಾಗಿರುವ ಕಾಮಗಾರಿಯನ್ನು ಪುನಃ ಮಾಡಲಾಗುವುದು ಎಂದು ನೀಡಿದ ಭರವಸೆಯಂತೆ ಮರಾಟ ಗ್ರಾಮದಲ್ಲಿ ಕಾಮಗಾರಿ ಪ್ರಾರಂಭಿಸಿದ್ದಾರೆ. ಅದರಂತೆ ಅತ್ತನೂರು ಗ್ರಾಮದಲ್ಲಿಯೂ ಸಹ ಉಳಿದಿರುವ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದರು.