ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕರಿಯರ ಗೌರವ ಧನಕ್ಕೆ ಆಗ್ರಹ

ತುಮಕೂರು, ನ. ೭- ಕರ್ನಾಟಕ ಪಬ್ಲಿಕ್ ಶಾಲೆಯ ಪೂರ್ವ ಪ್ರಾಥಮಿಕ ಶಿಕ್ಷಕಿಯರಿಗೆ ಮತ್ತು ಆಯಾಗಳಿಗೆ ಗೌರವಧನ ನೀಡುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಬೇಕು ಎಂದು ಶಿಕ್ಷಣ ಸಚಿವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
೨೦೧೯-೨೦ನೇ ಸಾಲಿನಲ್ಲಿ ಎಲ್.ಕೆ.ಜಿ. ತರಗತಿಗೆ ಶಿಕ್ಷಕಿಯರು ಮತ್ತು ಆಯಾಗಳು ಆಯ್ಕೆಯಾಗಿದ್ದು, ಸರ್ಕಾರದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಿ ಯಶ್ವಸ್ವಿಯಾಗಿದ್ದಲ್ಲದೇ, ಪ್ರಸಕ್ತ ಸಾಲಿನಲ್ಲಿ ಯು.ಕೆ.ಜಿ. ಶಿಕ್ಷಕಿಯರಾಗಿ ಮುಂದುವರೆಸಲು ಸರ್ಕಾರ ಆದೇಶ ಮಾಡಿದ್ದು, ಸರ್ಕಾರಿ ಆದೇಶದ ಸಂಖ್ಯೆ:ಇಡಿ-೦೭ ಎಂ.ಎಂ.ಎಸ್ -೨೦೧೯ ಬೆಂಗಳೂರು ೨. ಆಯುಕ್ತರ ಕಛೇರಿ ಸುತ್ತೋಲೆ ಸಂ.ಎಂ -೨ / ಆದಾ / ಜನಿ / ಕೆ.ಪಿ.ಎಸ್ / ೯೧ / ೨೦೧೯-೨೦ ೩. ಈ ಕಛೇರಿಯ ಸುತ್ತೋಲೆ ಸಂಖ್ಯೆ : ಎಸ್.ಎಸ್.ಕೆ / ಕ್ಯೂಎ / ಪರ್ -ಪ್ರೈಮರಿ / ೨-೨೦೧೯-೨೦ ದಿನಾಂಕ : ೧೩/೦೮/೨೦೧೯ ದಿನಾಂಕ : ೧೭-೦೮-೨೦೧೯ , ದಿನಾಂಕ : ೨೮-೦೮-೨೦೧೯ , ಈ ಆದೇಶದಂತೆ ಇದೇ ಸಾಲಿನ ೨೦೨೦-೨೧ ಸಾಲಿಗೆ ಯು.ಕೆಜಿ ಗೆ ಇದೇ ಶಿಕ್ಷಕಿಯರನ್ನು ಮುಂದುವರೆಸಲು ಆದೇಶವಾಗಿರುತ್ತದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.
ಸದರಿ ಆದೇಶದಲ್ಲಿ ೨೦೨೦-೨೧ ಸಾಲಿನ ಅನುದಾನವು ಸಹ ಬಿಡುಗಡೆಯಾಗಿದೆ ಹಾಗೂ ಬಿಡುಗಡೆಯಾದ ಅನುದಾನವನ್ನು ಶಾಲೆಯು ಆರಂಭದ ನಂತರ ಗೌರವಧನವನ್ನು ನೀಡುವುದೆಂದು ಸುತ್ತೋಲೆಯಲ್ಲಿ ತಿಳಿಸಿರುತ್ತದೆ. ಇದರಿಂದಾಗಿ ನಾವುಗಳು ಇಲ್ಲಿಯವರೆಗೂ ಎಲ್ಲ ಶಾಲಾ ಚಟುವಟಿಕೆಗಳಲ್ಲಿ ಭಾಗವಹಿಸಿದ್ದು, ಕೋವಿಡ್ -೧೯ ಹಿನ್ನೆಲೆಯಲ್ಲಿ ಶಾಲೆಗಳು ಪ್ರಾರಂಭವಾಗದೇ ಇರುವುದರಿಂದ ನಮಗೆ ಕಳೆದ ೭ ತಿಂಗಳಿಂದ ಯಾವುದೇ ಗೌರವಧನವಿಲ್ಲದೇ ನಮ್ಮ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಅಲ್ಲದೆ ಈಗಾಗಲೇ ಗೌರವಧನ ನಮ್ಮ ಕೆ.ಪಿ.ಎಸ್ ಶಾಲೆಗಳ ಖಾತೆಗೆ ಬಂದು ತಲುಪಿದೆ ಆದರು ನಮಗೆ ಸಿಗುವಂತೆ ಸರ್ಕಾರ ಆದೇಶ ನೀಡಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಶಿಕ್ಷಣ ಸಚಿವರು ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಬಿಡುಗಡೆಯಾದ ಗೌರವಧನವನ್ನು ನಮಗೆ ತಲುಪಿಸುವಂತೆ ಮಾಡಬೇಕಾಗಿ ಎಲ್ಲಾ ಶಿಕ್ಷಕಿಯರು ಮತ್ತು ಆಯಾಗಳು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ನಾಗರತ್ನ, ಶಿವರಾಜ್, ಕಮಲ, ಹೇಮಲತಾ, ರಶ್ಮಿ, ಶಾಂತಮ್ಮ, ಕೌತಮಾರನಹಳ್ಳಿ ಯೋಗೀಶ್, ರಾಮಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.