ಕರ್ನಾಟಕ ನಾದ-ನೃತ್ಯ-ನಾಟಕಗಳ ನಾಡು, ಶ್ರೀಮಂತಿಕೆಯ ಬೀಡು: ಸಚಿವ ಪಾಟೀಲ


ಗದಗ, ನ.2 : ಕರ್ನಾಟಕ ನಾದ-ನೃತ್ಯ-ನಾಟಕಗಳ ನಾಡು, ಶ್ರೀಮಂತಿಕೆಯ ಬೀಡು. ರಾಜ್ಯದ ನಕ್ಷೆಯಲ್ಲಿ ಗದಗ ಜಿಲ್ಲೆಗೆ ವಿಶಿಷ್ಟ ಸ್ಥಾನವಿದ್ದು, ನಾಜೂಕಾದ ಕುಸುರಿ ಕಲೆ ಹೊಂದಿದ, ಪ್ರವಾಸಿಗರನ್ನು ಬೆರಗುಗೊಳಿಸುವ ವೀರನಾರಾಯಣ-ತ್ರಿಕೋಟೇಶ್ವರ ದೇವಾಲಯಗಳು, ಲಕ್ಕುಂಡಿ ಜಿನಾಲಯಗಳು, ದಾನ ಚಿಂತಾಮಣಿ ಅತ್ತಿಮಬ್ಬೆ ಸ್ಮಾರಕಗಳು, ಶಿಲ್ಪಕಲೆ ಮೈ-ಮನಗಳನ್ನು ಹಗುರಾಗಿಸುವ ಪಂ. ಪುಟ್ಟರಾಜ ಗವಾಯಿಗಳವರ ಆಶ್ರಮದ ಮಧುರ ಸಂಗೀತದ ಗುಂಜಾರವ ಕರ್ಣಾನಂದವನ್ನು ಉಂಟು ಮಾಡುತ್ತದೆ ಎಂದು ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರು ಹೆಮ್ಮೆಯಿಂದ ಹೇಳಿದರು.
ಜಿಲ್ಲಾಡಳಿತದಿಂದ ಗದಗನ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ 65 ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಸಾರ್ವಜನಿಕ ಧ್ವಜಾರೋಹಣವನ್ನು ನೆರವೇರಿಸಿ, ನೆರೆದ ಎಲ್ಲ ಜನಪ್ರತಿನಿಧಿಗಳಿಗೆ, ನೌಕರರಿಗೆ, ಕನ್ನಡಾಭಿಮಾನಿಗಳಿಗೆ ರಾಜ್ಯೋತ್ಸವ ಶುಭಾಶಯಗಳನ್ನು ಕೋರಿ ಸಚಿವರು ಮಾತನಾಡಿದರು. ಕನ್ನಡ ನಾಡು ಸುಂದರ ಬೀಡು. ಕನ್ನಡ ನುಡಿ ಸುಸಂಸ್ಕøತಿಯ ಸಂಕೇತ. ಸುಮಾರು 2000 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ನಾಡಿನ ಕನ್ನಡ ಭಾಷೆ ಪ್ರಾಚೀನವಾದದ್ದು. ಕ್ರಿಸ್ತ ಪೂರ್ವ 230 ರಲ್ಲಿ ನಿರ್ಮಿಸಿದ ಸಾಮ್ರಾಟ ಅಶೋಕನ ಶಿಲಾ ಶಾಸನದಲ್ಲಿ ಕನ್ನಡ ಶಬ್ದಗಳಿರುವುದನ್ನು ಭಾಷಾ ತಜ್ಞರು ಗುರುತಿಸಿದ್ದಾರೆ. 1-2 ನೇ ಶತಮಾನದಲ್ಲಿ ಬರೆದ ಗ್ರೀಕ್ ನಾಟಕಗಳಲ್ಲಿ ಕನ್ನಡ ಶಬ್ದಗಳ ಉಲ್ಲೇಖವಿದೆ. ಈ ಎಲ್ಲ ದಾಖಲೆಗಳ ಹಿನ್ನೆಯ ಮೇರೆಗೆ 2008 ರ ಅಕ್ಟೋಬರ್ 31 ರಂದು ಭಾರತ ಸರ್ಕಾರವು ಕನ್ನಡ ಭಾಷೆಯನ್ನು ಶಾಸ್ತ್ರೀಯ ಭಾಷೆಯೆಂದು ಘೋಷಿಸಿದೆ ಎಂದರು.
ಗದುಗಿನ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟಕ್ಕೇರಿಸಿದ ಹೂಯಿಲಗೋಳ ನಾರಾಯಣರಾಯರು, ಡಾ. ಎಂ ಎಸ್ ಸುಂಕಾಪುರ, ಪೆÇ್ರೀ ಕೀರ್ತಿನಾಥ ಕುರ್ತಕೋಟಿ, ಡಾ. ಚನ್ನವೀರ ಕಣವಿ. ಡಾ ಎನ್.ಕೆ. ಕುಲಕರ್ಣಿ, ಮಾಧವ ಕುಲಕರ್ಣಿ ಡಾ. ಎಚ್. ಎನ್. ಹೂಗಾರ, ಭಾರತ ರತ್ನ ಪುರಸ್ಕøತ ಹಿಂದುಸ್ಥಾನಿ ಗಾಯಕ ಪಂಡಿತ್ ಭೀಮಸೇನ ಜೋಶಿಯವರು, ಕ್ರಿಕೆಟಿಗ ಸುನಿಲ ಜೋಶಿ ಇವರೆಲ್ಲ ಗದುಗಿನ ಹೆಮ್ಮೆಯಾಗಿದ್ದಾರೆ. ಅಲ್ಲದೇ, ಜಿಲ್ಲೆ ವೈವಿಧ್ಯಮಯ ಶ್ರೀಮಂತಿಕೆಯನ್ನು ತನ್ನ ಮುಡಿಗೇರಿಸಿಕೊಂಡಿದ್ದು, ಗದಗ ಪರಿಸರಕ್ಕೆ ಸೇರಿದ ಪುಲಿಗೆರೆ ತಿರುಳ್ಗನ್ನಡದ ಪ್ರದೇಶವೆಂದು ಕ್ರಿಸ್ತಶಕ 10 ನೇ ಶತಮಾನದ ಮಹಾಕವಿ ಪಂಪನ ಪ್ರಶಂಸೆಯಾಗಿದೆ. ಹಾಗೂ ಲಕ್ಕುಂಡಿಯನ್ನು ಧಾರ್ಮಿಕ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ದಾನ ಚಿಂತಾಮಣಿ ಎಂಬ ಬಿರುದಿಗೆ ಪಾತ್ರಳಾದ ಅತ್ತಿಮಬ್ಬೆ ರನ್ನ ಕವಿಗೆ ಆಶ್ರಯ ನೀಡಿದ್ದಳು. ಪೆÇನ್ನ ಕವಿಯ ಶಾಂತಿಪುರಾಣದ 1000 ಪ್ರತಿಗಳನ್ನು ಬರೆಯಿಸಿ ದಾನ ಮಾಡಿದ ರೋಚಕ ಸಂಗತಿ ಈ ಗದುಗಿನ ನಾಡು-ನುಡಿ ನೆಲಕ್ಕೆ ಹೆಮ್ಮೆ ತಂದಿದೆ ಎಂದು ಅವರು ಹೇಳಿದರು.
1924 ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೇಸ್ ಅಧಿವೇಶನದಲ್ಲಿ ಗದುಗಿನ ಹೂಯಿಲಗೋಳ ನಾರಾಯಣರಾಯರು ಮಹಾತ್ಮಾ ಗಾಂಧಿಜಿಯವರ ಸಮ್ಮುಖದಲ್ಲಿ ಉದಯವಾಗಲಿ ಚಲುವ ಕನ್ನಡ ನಾಡು ಎಂಬ ಗೀತೆಯನ್ನು ರಚಿಸಿ ಸ್ವತ: ರಾಗ ಬದ್ಧವಾಗಿ ಹಾಡಿ ನೆರೆದ ಸಭಿಕರ ಮೈಮನಗಳಲ್ಲಿ ರೋಮಾಂಚನವಾಗಿ ಕನ್ನಡಿಗರ ನರ-ನಾಡಿಗಳಲ್ಲಿ ಸಮ್ಮಿಳಿತವಾಯಿತು. ಕನ್ನಡಿಗರಲ್ಲಿ ಕನ್ನಡದ ಬಗೆಗೆ ಶ್ರಧ್ಧೆ, ಗೌರವ, ಭಕ್ತಿಯ ಹೊಳೆಯನ್ನು ಹರಿಸುವಲ್ಲಿ ಈ ಗೀತೆ ಮುನ್ನಡಿ ಬರೆಯಿತು ಎಂದು ಹೆಮ್ಮೆಯಿಂದ ಹೇಳಿದರು.
ಇದಕ್ಕೂ ಮುನ್ನ ನಗರದ ಮುನ್ಸಿಪಲ್ ಕಾಲೇಜು ಆವರಣದಲ್ಲಿ ತಾಯಿ ಭುವನೇಶ್ವರಿ ಪ್ರತಿಮೆಗೆ ಸಚಿವರು, ಗಣ್ಯರು ಪುಷ್ಪನ ನಮನ ಸಲ್ಲಿಸಿ ಗೌರವ ಸಮರ್ಪಿಸಿದರು. ಶಾಸಕರಾದ ಎಚ್.ಕೆ.ಪಾಟೀಲ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ ಅದ್ಯಕ್ಷ ರಾಜೂಗೌಡ ಕೆಂಚನಗೌಡ್ರ, ಉಪಾಧ್ಯಕ್ಷೆ ಶ್ರೀಮತಿ ಶೋಭಾ ಮೇಟಿ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ ಕೆ., ಜಿಲ್ಲಾ ಪೆÇೀಲಿಸ್ ವರಿಷ್ಠಾಧಿಕಾರಿ ಯತೀಶ್ ಎನ್., ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್, ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ ಎಂ., ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಗಣ್ಯರು, ಸಾರ್ವಜನಿಕರು, ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪಂಡಿತ ಪುಟ್ಟರಾಜು ಗವಾಯಿ ಸಂಗೀತ ಶಾಲೆ ವಿಧ್ಯಾರ್ಥಿಗಳು ನಾಡಗೀತೆ ಪ್ರಚುರಪಡಿಸಿದರು. ಪೆÇ್ರ. ದತ್ತಪ್ರಸನ್ನ ಪಾಟೀಲ ಹಾಗೂ ಪೆÇ್ರೀ. ಲಕ್ಷ್ಮೀದೇವಿ ಗವಾಯಿ ಕಾರ್ಯಕ್ರಮ ನಿರೂಪಿಸಿದರು.
ಂಣಣಚಿಛಿhmeಟಿಣs ಚಿಡಿeಚಿ