ಕರ್ನಾಟಕ ಧನ ವಿನಿಯೋಗ ಅಂಗೀಕಾರ

ಬೆಂಗಳೂರು, ಮಾ. ೨೪- ರಾಜ್ಯದ ಸಂಚಿತ ನಿಧಿಯಿಂದ ೨೦೨೧-೨೨ನೇ ಸಾಲಿನ ಹಣಕಾಸು ವರ್ಷಕ್ಕಾಗಿ ಎರಡು ಕೋಟಿ ಐವತ್ತೆರಡು ಲಕ್ಷದ ಮೂವತ್ತೊಂಬತ್ತು ಸಾವಿರದ ಒಂದುನೂರ ತೊಂಭತ್ತೇಳು ಲಕ್ಷದ ಎಂಭತ್ತಾರು ಸಾವಿರ (೨,೫೨,೩೯,೧೯೭.೮೬ ಲಕ್ಷ) ರೂಪಾಯಿಗಳಿಗೆ ಮೀರದಷ್ಟು ಮೊಬಲಗನ್ನು ಸಂದಾಯ ಮಾಡಲು ಅವಕಾಶ ನೀಡುವ ಕರ್ನಾಟಕ ಧನ ವಿನಿಯೋಗ ವಿಧೇಯಕ ಸಂಖ್ಯೆ ೧ ಕ್ಕೆ ವಿಧಾನಸಭೆಯಲ್ಲಿಂದು ಒಪ್ಪಿಗೆ ನೀಡಲಾಯಿತು.
ಮುಖ್ಯಮಂತ್ರಿ ಯಡಿಯೂರಪ್ಪನವರು ೨೦೨೧-೨೨ನೇ ಹಣಕಾಸು ವರ್ಷದ ಸೇವೆಗಳಿಗಾಗಿ ರಾಜ್ಯದ ಸಂಚಿತ ನಿಧಿಯಿಂದ ಮತ್ತು ಅದರೊಳಗಿಂದ ಕೆಲವು ಮೊತ್ತ ಸಂದಾಯ ಮತ್ತು ವಿನಿಯೋಗಕ್ಕಾಗಿ ಅಧಿಕಾರ ನೀಡಲು ಈ ವಿಧೇಯಕ ಮಂಡಿಸಲಾಗಿದೆ ಎಂದರು.
ಈ ವಿಧೇಯಕಕ್ಕೆ ಸದನ ಧ್ವನಿಮತದಿಂದ ಅಂಗೀಕಾರ ನೀಡಿತು.