
ಬಳ್ಳಾರಿ,ಏ.23- ವಿಶ್ವಗುರು ಬಸವಣ್ಣನವರ 890ನೇ ಜಯಂತಿ ಅಂಗವಾಗಿ ಬಳ್ಳಾರಿ ನಗರದ ಮೋತಿ ವೃತ್ತದಲ್ಲಿನ ಬಸವಣ್ಣನವರ ಪ್ರತಿಮೆಗೆ ಹೂವಿನ ಹಾರ ಹಾಕಿ ಗೌರವಿಸಲಾಯಿತು. ಬಸವಣ್ಣನವರ ಭಾವಚಿತ್ರವಿಟ್ಟು ದೀಪಾ ಹಚ್ಚಿ ಹೂವುಗಳನ್ನು ನಮಿಸುವುದಾದಿಂದ ಮನುಷ್ಯನ ಜೀವನ ಸಾರ್ಥಕತೆ ಆಗುವುದಿಲ್ಲ ಬದಲಾಗಿ ಬಸವಣ್ಣನ ನವರ ವಚನ ತತ್ವ ಸಿದ್ಧಾಂತಗಳನ್ನು ನಾಗರಿಕರು ಎಲ್ಲರೂ ಓದಿ ಅರ್ಥೈಸಿಕೊಂಡು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಮಾತ್ರ ಬಸವಣ್ಣನವರಿಗೆ ನಾವು ಗೌರವವನ್ನು ಕೊಟ್ಟಂತಾಗುತ್ತದೆ ಎಂದು ಕೆ.ಶಂಕರ್ ನಂದಿಹಾಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೇಳಿದರು. ಜಿಲ್ಲಾಧ್ಯಕ್ಷ ಧರ್ಮಣ್ಣ ನಗರ ಘಟಕ ಅಧ್ಯಕ್ಷ ಮಧುರಾಜ್ ಬಿ ಗೋನಾಳ, 17ನೇ ವಾರ್ಡಿನ ಅಧ್ಯಕ್ಷ ಚಂದ್ರಶೇಖರ್ ಬಿಗೋನಾಳ್ ಹಾಗೂ ಇನ್ನಿತರ ಭಾಗವಹಿಸಿದ್ದರು