ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸ


ಲಕ್ಷ್ಮೇಶ್ವರ,ಜ.12: ದೇಶ ಸುತ್ತು ಕೋಶ ಓದು ಎಂಬ ಮಾತಿನಂತೆ ಶೈಕ್ಷಣಿಕ ಪ್ರವಾಸಗಳು ವಿದ್ಯಾರ್ಥಿ ಜೀವನದ ಪ್ರಮುಖ ಜ್ಞಾನದ ಆಕರಗಳಾಗಿವೆ. ಅಧ್ಯಯನದ ಜೊತೆಗೆ ಸ್ಥಳ ಭೇಟಿ ವಿದ್ಯಾರ್ಥಿಗಳಿಗೆ ಜ್ಞಾನದ ಸ್ಪಷ್ಟತೆಗೆ ದಾರಿ ಮಾಡಿ ಕೊಡುತ್ತವೆ” ಎಂದು ಲಕ್ಷ್ಮೇಶ್ವರ ತಹಸಿಲ್ದಾರ ವಾಸುದೇವಸ್ವಾಮಿ ಅಭಿಪ್ರಾಯಪಟ್ಟರು. ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಶಿರಹಟ್ಟಿ ವತಿಯಿಂದ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ “ಕರ್ನಾಟಕ ದರ್ಶನ” ಉಚಿತ ಶೈಕ್ಷಣಿಕ ಪ್ರವಾಸಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ. ಮುಂದಿನಮನಿ “ಉಚಿತ ಪ್ರವಾಸದ ಯೋಜನೆಯಿಂದ ಕಡು ಬಡತನದ ಹಿನ್ನೆಲೆಯ ವಿಧ್ಯಾರ್ಥಿಗಳು ಸಹ ಪ್ರವಾಸದ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಸರಕಾರದ ಈ ಯೋಜನೆಯಿಂದ ಬಹಳಷ್ಟು ಮಕ್ಕಳಿಗೆ ಅವರ ಜ್ಞಾನದ ವಿಸ್ತಾರಕ್ಕೆ ಸಹಕಾರಿಯಾಗಿದೆ” ಎಂದರು.
ಪ್ರವಾಸದ ಕಿಟ್ ವಿತರಿಸಿ ಮಾತನಾಡಿದ ಸಿ.ಪಿ.ಐ ನಾಗರಾಜ ಮಾಡಳ್ಳಿ “ಪ್ರವಾಸದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸುರಕ್ಷತೆಯ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಗೈಡ್ ಶಿಕ್ಷಕರ ಮಾರ್ಗದರ್ಶನದನವನ್ನು ಪಾಲಿಸಬೇಕು” ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಪುರಸಭಾ ಸದಸ್ಯರುಗಳಾದ ಪ್ರವೀಣ ಬಾಳಿಕಾಯಿ ಹಾಗೂ ಬಸವರಾಜ ಓದುನವರ “ಸರಕಾರದ ಈ ಯೋಜನೆಯಿಂದ ಅರ್ಹ ವಿಧ್ಯಾರ್ಥಿಗಳ ಜ್ಞಾನಾರ್ಜನೆಗೆ ಅನುಕೂಲವಾಗಿದೆ” ಎಂದು ಅಭಿಪ್ರಾಯಪಟ್ಟರು.
ದೈಹಿಕ ಶಿಕ್ಷಣ ಪರಿವೀಕ್ಷಕ ಎಮ್ ಎಮ್.ಹವಳದ, ಶಿಕ್ಷಣ ಸಂಯೋಜಕ ಹರೀಶ್.ಎಸ್,
ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಸ
ಆನಂದ ಮುಳಗುಂದ, ಪಧಾಧಿಕಾರಿಗಳಾದ ಎಚ್.ಎಂ.ಗುತ್ತಲ, ಎಸ್.ಡಿ.ಲಮಾಣಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರುಗಳಾದ
ಶ್ರೀಮತಿ ಎಲ್.ಎನ್.ನಂದೆಣ್ಣವರ,
ಡಿ.ಡಿ.ಲಮಾಣಿ, ಪದಾಧಿಕಾರಿಗಳಾದ ಗೀತಾ ಹಳ್ಯಾಳ,ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಶಿವಣ್ಣ ಇಟಗಿ, ಸದಸ್ಯರಾದ ಬಸವರಾಜ ಕುರಿ, ಸಿದ್ದರಾಮೇಶ್ವರ ಪ್ರೌಢಶಾಲೆಯ ಅಧ್ಯಕ್ಷರಾದ ಬಸವರಾಜ ಮುದಗಲ್, ಮುಖ್ಯೋಪಾಧ್ಯಾಯ ಎಚ್.ಬಿ.ಸಣ್ಣಮನಿ, ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲರಾದ ಡಿ.ಸಿ.ನರೇಗಲ್,ಎನ್.ಸಿ.ಕೆ.ಪಾಟೀಲ, ಶಿಕ್ಷಕರಾದ ಎಂ.ಡಿ.ತಳ್ಳಳ್ಳಿ,
ಡಿ.ಸಿ.ಪತ್ತಾರ,ಎಚ್.ಡಿ.ನಿಂಗರೆಡ್ಡಿ, ಸಿ.ಆರ್.ಪಿ ಗಳಾದ ಸತೀಶ ಬೋಮಲೆ,ಎನ್.ಎ.ಮುಲ್ಲಾ, ಗಿರೀಶ ನೇಕಾರ, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು,
ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಬಿ.ಇಡಿ ಪ್ರಶಿಕ್ಷಣಾರ್ಥಿಗಳು, ಪೆÇೀಷಕರು, ಸ.ಮಾ.ಪ್ರಾ.ಶಾಲೆ ನಂ.4 ರ ಶಿಕ್ಷಕರು ಹಾಜರಿದ್ದರು.
ಪ್ರೌಢಶಾಲಾ ವಿಭಾಗದ ಬಿ.ಆರ್.ಪಿ ಈಶ್ವರ ಮೆಡ್ಲೇರಿ ನಿರೂಪಿಸಿದರು. ಸಿ.ಆರ್.ಪಿ ಉಮೇಶ ನೇಕಾರ ವಂದಿಸಿದರು.
ಎಲ್ಲಾ ಮಕ್ಕಳಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.