ಕರ್ನಾಟಕ ಟೇಕ್ವಾಂಡೋ ಸಂಸ್ಥೆಗೆ ದ್ವಿತೀಯ ಸ್ಥಾನ

ವಿಜಯಪುರ : ಜೂ.27:ದಿನಾಂಕ : 23-06-2023 ರಿಂದ 25-06-2023 ರವರೆಗೆ ಬೆಂಗಳೂರಿನ ಶ್ರೀ ಸಾಯಿ ಪ್ಯಾಲೇಸ್, ಕನ್‍ವೆನಶ್ವನ್ ಹಾಲ್ , ತಿರುಮಲ ಶೆಟ್ಟಿ ಹಾಲ್ , ಹೊಸಕೇಟೆ ತಾಲೂಕಾ, ಬೆಂಗಳೂರು ರೂರಲ್ ನಡೆದ ಆಫೀಶಿಯಲ್ ಟೇಕ್ವಾಂಡೊ ಚಾಂಪಿಯನ್‍ಶಿಪ್ ನಲ್ಲಿ ವಿಜಯಪುರ ಜಿಲ್ಲೆಯ ವತಿಯಿಂದ ಕರ್ನಾಟಕ ಟೇಕ್ವಾಂಡೊ ಸಂಸ್ಥೆ (ರಿ) ಭಾಗವಹಿಸಿತ್ತು.
ಈ ಸ್ಪರ್ಧೆಯಲ್ಲಿ ಸಂಸ್ಥೆಯ ಟೇಕ್ವಾಂಡೋ ವಿದ್ಯಾರ್ಥಿಗಳಾದ ಮಹ್ಮದ ರಿಯಾನ ಮುಲ್ಲಾ (ದ್ವಿತೀಯ ಸ್ಥಾನ), ಬಿಬಿ.ಜೋಯಾ ಮುಲ್ಲಾ (ದ್ವಿತೀಯ ಸ್ಥಾನ), ಮಹೇಶ್ ತಾಳಿಕೋಟೆ, ಮಹಾದೇವ ಜಾಧವ, ಮನನ ಮೆಹ್ರಾ, ಹಾರ್ದಿಕ ರುಣವಾಲ, ಉಂಗಟಿ ಪೂರ್ಣ ವಿಜಯಕೃಷ್ಣ, ರೋಹಿತ ವಟ್ಟg, ಬಿ. ಅಸ್ಮಿತಾ ಜಟ್ ಒಟ್ಟು 9 ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ ಎಂದು ಟೇಕ್ವಾಂಡೊ ವಿಜಯಪುರ ಜಿಲ್ಲೆ ಕಾರ್ಯದರ್ಶಿಗಳಾದ ಮಹಾಂತೇಶ ತಾಳಿಕೋಟಿ ತಿಳಿಸಿದ್ದಾರೆ.