ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಬಡ ಮಕ್ಕಳಿಗೆ ಬಟ್ಟೆ ವಿತರಣೆ.

ಚಿತ್ರದುರ್ಗ.ಮಾ.೧೨: ಕೈಗಾರಿಕರಣದಲ್ಲಿ ಅತಿ ಹೆಚ್ಚು ಬಟ್ಟೆಗಳು ಉತ್ಪಾದನೆಯಾಗಿ ಅವು ಮಾರಾಟವಾಗದೆ ಹಾಗೆ ಉಳಿದವುಗಳನ್ನ, ವ್ಯರ್ಥ ಮಾಡದೇ ವ್ಯಾಪಾರಸ್ಥರು, ಶ್ರೀಮಂತರು ಬಡ ಮಕ್ಕಳಿಗೆ, ಬಡ ಜನರಿಗೆ ವಿತರಿಸಬಹುದು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಡಾ ಎಚ್ ಕೆ ಎಸ್ ಸ್ವಾಮಿಯವರು ಕರೆ ನೀಡಿದರು.ಅವರು ಚಿತ್ರದುರ್ಗ ನಗರದ ಸಿ.ಕೆ.ಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ರೋಟರಾಕ್ಟ ವತಿಯಿಂದ ಹಮ್ಮಿಕೊಂಡಿದ್ದ ಬಟ್ಟೆ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಬಹಳಷ್ಟು ಬಾರಿ ಅತಿ ಹೆಚ್ಚು ಉತ್ಪಾದನೆ ಮಾಡಿದಂತಹ ವಸ್ತುಗಳು, ವ್ಯರ್ಥವಾಗಿ ಭೂಮಿಯಲ್ಲಿ ನಾಶ ಮಾಡುವುದಕ್ಕಿಂತ ಅವುಗಳನ್ನು ಬಡವರಿಗೆ ಇಲ್ಲದವರಿಗೆ ನೀಡುವುದರಿಂದ ಭೂಮಿಯ ಮೇಲಿರುವ ಅಸಮಾನತೆ, ಬಡತನವನ್ನ ಸರಳವಾಗಿ ನಿವಾರಿಸಬಹುದು ಎಂದರು.ಭೂಮಿಯಲ್ಲಿರುವ ಸಂಪನ್ಮೂಲಗಳನೆಲ್ಲ ಶ್ರೀಮಂತರು ಮುಷ್ಟಿಯಲ್ಲಿ ಹಿಡಿದಿಟ್ಟುಕೊಂಡಿರುವುದರಿಂದ ಬಡವರಿಗೆ ಅವುಗಳನ್ನ ಅನುಭವಿಸುವ, ಬಳಸುವ ಭಾಗ್ಯವನ್ನು ಕಳೆದುಕೊಂಡಿರುತ್ತಾರೆ, ಹಾಗಾಗಿ ಶ್ರೀಮಂತರು ಮನಸ್ಸು ಮಾಡಿದರೆ ಭೂಮಿಯ ಮೇಲಿರುವ ಎಲ್ಲಾ ಬಡವರನ್ನು ಸಹ, ಒಂದಷ್ಟು ಉತ್ತಮ ಮಟ್ಟಕ್ಕೆ ತರಲು ಅನುಕೂಲಕರವಾಗುವುದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಲಕ್ಷ್ಮಿ, ಸಹ ಶಿಕ್ಷಕರಾದ ಧನಲಕ್ಷ್ಮಿ, ಮಂಜುಳಾ ಹಾಗೂ ರೋಟರಾಕ್ಟ ಹಾಗೂ ಸರ್ಕಾರಿ ವಿಜ್ಞಾನ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿನಿ ಎಚ್ ಎಸ್ ರಚನಾ ಇನ್ನಿತರರು ಭಾಗವಹಿಸಿದ್ದರು.