ಕರ್ನಾಟಕ ಜಾನಪದ ಪರಿಷತ್ತು ಪದಾಧಿಕಾರಿಗಳ ಆಯ್ಕೆ

ರಾಯಚೂರು.ಜ.೮-ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಡಾ. ಶರಣಪ್ಪ ಆನೆಹೊಸೂರು ಅವರ ಅಧ್ಯಕ್ಷತೆಯಲ್ಲಿ ರಾಯಚೂರು ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆ ಸಭೆ ಗುರುವಾರ ಸಂಜೆ ಜರುಗಿತು.
ಬಸವರಾಜ ಸ್ವಾಮಿ (ಗೌರವಾಧ್ಯಕ್ಷ), ಲಕ್ಷ್ಮಣ ಬಾರಿಕೇರ್ (ಸಂಯೋಜಕ), ಅಲಿಬಾಬ ಜಾಲಹಳ್ಳಿ, ಶಂಕ್ರಯ್ಯ ಕೆ.ಕವಿತಾಳ, ಡಾ.ಶರಣಬಸವ ಜೋಳದಡಗಿ, ವೆಂಕಟೇಶ ಬೇವಿನಬೆಂಚಿ, ಡಾ.ಶರಣಗೌಡ ಪಾಟೀಲ, ಡಾ.ಉಮಾಕಾಂತ ದೇವರಮನಿ, ಡಾ. ವಿಜಯ ಮಹಾಂತೇಶ(ಉಪಾಧ್ಯಕ್ಷ), ಬಿ.ವಿಜಯ ರಾಜೇಂದ್ರ(ಪ್ರಧಾನ ಕಾರ್ಯದರ್ಶಿ), ಅನಿಲ ಅಪ್ರಾಳ, ವೆಂಕಟೇಶ ನವಲಿ, ಮಂಜುನಾಥ ವಟಗಲ್, ವಿರುಪಾಕಿ ರವಿ ರಾಯಚೂರಕರ್, ಹನಮಂತ ನಾಯಕ, (ಸಹಕಾರ್ಯದರ್ಶಿ), ಶಿವಾನಂದ ನರಹಟ್ಟಿ(ಕೋಶಧ್ಯಕ್ಷರು), ಮಧುಸುದನ್, ಇಸ್ಮಾಯಿಲ್ ಖಾದ್ರಿ, ಆರ್. ಬಸವರಾಜ, ರಾಮಣ್ಣ ಮ್ಯಾದಾರ, ನಿಂಗಪ್ಪ ಚಿಂಚಲಕುಂಟಿ, ಶ್ರೀನಿವಾಸ ರಾಯಚೂರಕರ್, ಮಹಾಂತೇಶ ಮುಕ್ತಿ, ಬಿ.ನರಸಿಂಹ, ವೆಂಕಟೇಶ ಹೂಗಾರ, ಡಾ.ಸಿದ್ದಪ್ಪ ಜೇಗರ್, ಈರಣ್ಣ, ನಾಗೇಶ ಫಕೀರಪ್ಪ, ಡಾ.ಆಶ್ವನ ಕುಮಾರ ಪುರವಂತ, ರಾಮಣ್ಣ ಭೋಯರ್, ಶಿವರಾಜ ಯತಗಲ್, ಅಮರೇಗೌಡ ಪಾಟೀಲ, ಸಿ.ಎನ್.ರಾಘವೇಂದ್ರ, ಎ.ಚಂದ್ರಶೇಖರ, ಮುತ್ತಣ್ಣ, ರಾಚಯ್ಯ ಸ್ವಾಮಿ, ರಾಘವೇಂದ್ರ ಆಶಾಪೂರ್,ಮಹೇಶ್, ಆನಂದ ಹೊಗಾರ, ಸತೀಶ, ಮಯುರ(ಸದಸ್ಯರ) ಆಯ್ಕೆ ಮಾಡಲಾಯಿತು.
ನಂತರ ಸಭೆಯಲ್ಲಿ ಜಿಲ್ಲಾಧ್ಯಕ್ಷ ಮಾತನಾಡುತ್ತ ಕರ್ನಾಟಕ ಜಾನಪದ ಪರಿಷತ್ತು ಕರ್ನಾಟಕ ಸರ್ಕಾರದ ಅನುದಾನಿತ ಸಂಸ್ಥೆಯಾಗಿದ್ದು, ನಮ್ಮ ಪರಿಷತ್ತಿನಿಂದ ಜಾನಪದ ಕಲೆಗಳ ಪ್ರದರ್ಶನ, ಬಡ ಕಲಾವಿದರಿಗೆ ಪ್ರೋತ್ಸಾಹದಂತ ಕೆಲಸ ಮಾಡಬೇಕು. ಕೇವಲ ಭರವಸೆ ನೀಡದೆ ಅದು ಕಾರ್ಯರೂಪಕ್ಕೆ ತರಬೇಕು ಎಂದರು.
ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಡಾ. ಅರುಣಾ ಹಿರೇಮಠ ಮಾತನಾಡುತ್ತ ಜಿಲ್ಲೆಯಲ್ಲಿ ಜಾನಪದ ವಸ್ತು ಸಂಗ್ರಾಲಯ ಮಾಡಲು ಕರ್ನಾಟಕ ಜಾನಪದ ಪರಿಷತ್ತು ಆಲೋಚನೆ ಮಾಡುತ್ತಿದೆ. ಲಾಕ್ ಡೌನ್ ಸಂದರ್ಭದಲ್ಲಿ ಜಿಲ್ಲೆಯ ಅನೇಕ ಕಲಾವಿದರಿಗೆ ನಮ್ಮ ಪರಿಷತ್ತು ಸರ್ಕಾರದಂದ ಸಹಾಯ ಧನ ಕೋಡಿಸಿದೆ. ಪರಿಷತ್ತಿನಿಂದ ದಿನಸಿ ಕಿಟ್ ವಿತರಣೆ ಮಾಡಿದೆ. ಮುಂದಿನ ದಿನಗಳಲ್ಲಿ ಕಲಾವಿದರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕಾಗಿದೆ ಎಂದರು.
ಆಯ್ಕೆಗೊಂಡ ಜಿಲ್ಲಾ ಘಟಕದ ಪದಾಧಿಕಾರಿಗಳಿಗೆ ಕರ್ನಾಟಕ ಜಾನಪದ ಪರಿಷತ್ತು ರಾಯಚೂರು ತಾಲ್ಲೂಕು ಘಟಕ ಅಧ್ಯಕ್ಷ ಬಿ.ಬಸವರಾಜ ಅವರು ಸನ್ಮಾನಿಸಿದರು.