ಕರ್ನಾಟಕ ಜಾನಪದ ಪರಿಷತ್ತಿನಿಂದ ಆಹಾರ ಕಿಟ್ ವಿತರಣೆ

ಕುಕನೂರ ಜೂ 05 : ಕರ್ನಾಟಕ ಜಾನಪದ ಪರಿಷತ್ ಕುಕನೂರ ತಾಲೂಕ ಘಟಕ ಮತ್ತು ಗೊರ್ಲೆಕೊಪ್ಪದ ಕಟ್ಟಿ ಬಸವಲಿಂಗೇಶ್ವರ ಕರಡಿ ಮಜಲು, ಮಹಿಳಾ ವೀರಗಾಸೆ ಕಲಾವಿದರಿಂದ ಕೊರೊನಾ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೇಯರಿಗೆ ಮತ್ತು ಕುಕನೂರಿನ ಪತ್ರಿಕಾ ವರದಿಗಾರರಿಗೆ ಸೋಮವಾರ ದಿವಸ ಪಟ್ಟಣದ ಎ.ಪಿ.ಎಂ.ಸಿ ಆವರಣದಲ್ಲಿ ದಿನಸಿ ಆಹಾರ ಕಿಟ್‍ಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭವನ್ನು ಉದ್ದೇಶಿಸಿ ಮಾತನಾಡಿದ ಚನ್ನಪ್ಪಗೌಡ್ರ ಮಾಲಿಪಾಟೀಲರು ಮಹಾಮಾರಿ ಕೊರೊನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಸರ್ಕಾರ ವಿಧಿಸಿರುವ ಲಾಕ್‍ಡೌನ್‍ನಿಂದ ಆಶಾ ಕಾರ್ಯಕರ್ತೇಯರು ಮತ್ತು ಪತ್ರಿಕಾ ವರದಿಗಾರರು ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇಂಥಹ ಸಂದರ್ಭದಲ್ಲಿ ಆಹಾರ ಕಿಟ್‍ಗಳನ್ನು ವಿತರಿಸುತ್ತಿರುವುದು ಪುಣ್ಯದ ಕೆಲಸವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಜಾನಪದ ಪರಿಷತ್‍ನ ಕುಕನೂರ ತಾಲೂಕ ಘಟಕದ ಅಧ್ಯಕ್ಷ ಶರಣಯ್ಯ ಇಟಗಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಕೊಡ್ಲಿ, ವೀರಯ್ಯ ಶಿರೂರಮಠ, ಸಿದ್ದಯ್ಯ ಲಕ್ಕುಂಡಿಮಠ, ವಿರುಪನಗೌಡ ಪೊಲೀಸ ಪಾಟೀಲ, ರೈತ ಸಂಘದ ತಾಲೂಕ ಉಪಾಧ್ಯಕ್ಷ ಗಣಪ್ಪ ಪೂಜಾರ, ಕಟ್ಟಿ ಬಸಯ್ಯ ಲಿಂಗಾಪೂರ, ವೀರಯ್ಯ ಹಿರೇಮಠ, ಶಾಂತವೀರಯ್ಯ ಜುಲ್ಪಿ, ಸೌಭಾಗ್ಯ ವಿರುಪಾಪುರ, ಶಶಿಕಲಾ ಲಿಂಗಾಪುರ, ಸಾವಿತ್ರಿಕ ಗುನ್ನಳ್ಳಿ, ಬಸಯ್ಯ ಲಿಂಗಾಪುರ, ಕೊಟ್ರಪ್ಪ ತೋಟದ, ಕುಕನೂರ ಠಾಣೆಯ ಎ.ಎಸ್.ಐ ಮಲ್ಲೇಶಪ್ಪ, ಆಶಾ ಕಾರ್ಯಕರ್ತೇಯಾದ ಅನ್ನಪೂರ್ಣಾ ಬಡಿಗೇರ, ಶರಣಮ್ಮ ಗೋಡೆಕಾರ, ವಿಜಯಲಕ್ಷ್ಮೀ ಗೊರ್ಪಡೆ, ವಕೀಲರಾದ ಬಸವರಾಜ ಜಂಗ್ಲಿ, ಶರಣಯ್ಯ ಮಾಲಿಪಾಟೀಲ, ಈರಣ್ಣ ಗುರಿಕಾರ, ಪತ್ರಕರ್ತ ರುದ್ರಪ್ಪ ಬಂಡಾರಿ ಮತ್ತಿತರರು ಪಾಲ್ಗೊಂಡಿದ್ದರು