ಕರ್ನಾಟಕ ಜನ ಕಲ್ಯಾಣ ರಕ್ಷಣಾ ವೇದಿಕೆಯಿಂದ ಸಾಮೂಹಿಕ ವಿವಾಹ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.07: ನಗರದ ಕರ್ನಾಟಕ ಜನ ಕಲ್ಯಾಣ ರಕ್ಷಣಾ ವೇದಿಕೆಯಿಂದ ವಾಜಪೇಯಿ ಬಡಾವಣೆಯ ವೀರಶೈವ ವಿದ್ಯಾವರ್ಧಕ ಸಂಘದ ಆವರಣದಲ್ಲಿ ನಿನ್ನೆ  10 ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆಯಿತು.
ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವಾತ್ಪಾದರು
ಕಾರ್ಯಕ್ರಮದ  ಸಾನಿಧ್ಯವಹಿಸಿದ್ದರು.
ಹರಗಿನಡೋಣಿ ಶ್ರೀ ಗಳು ನೇತೃತ್ವ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಗುರು ಬಸವರಾಜ ನೆರವೇರಿಸಿದರೆ,  ಉಪಾಧ್ಯಕ್ ಜಾನೆಕುಂಟೆ ಬಸವರಾಜ  ಅಧ್ಯಕ್ಷತೆವಹಿಸಿದ್ದರು. ಕಾರ್ಯದರ್ಶಿ ಡಾ ಅರವಿಂದ ಪಾಟೀಲ್, ಆಡಳಿತಾಧಿಕಾರಿ ಸಿದ್ದಮಲ್ಲನಗೌಡ, ಗುತ್ತಿಗೆದಾರ ಸಿದ್ರಾಮನಗೌಡ ಮಸೀದಿಪುರ,  ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಜೆ. ಎಮ್ ಬಸವರಾಜ ಸ್ವಾಮಿ,ಜಿಲ್ಲಾಧ್ಯಕ್ಷ ಕೊಳೂರು ಚಂದ್ರಶೇಖರಗೌಡ, ಗೌರವ ಅಧ್ಯಕ್ಷ ಬಿ. ಎಂ. ಎರ್ರಿಸ್ವಾಮಿ, ಎಚ್. ಕೆ. ಗೌರಶಂಕರ ಸ್ವಾಮಿ, ಜೆ.ಎಮ್. ಮಂಜುನಾಥ್ ಸ್ವಾಮಿ, ವೇದಿಕೆಯ ಪ್ರಧಾನ ಕಾರ್ಯದರ್ಶಿ ಜೆ. ಡಿ. ದೊಡ್ಡಬಸಪ್ಪ,ಯಲ್ಲಪ್ಪ ಭಾಗವಹಿಸಿದ್ದರು. 3 ಜೋಡಿಗಳು ಧಾಪಂತ್ಯ ಜೀವನಕ್ಕೆ ಕಾಲಿಟ್ಟರು.