ಕರ್ನಾಟಕ ಜನಸೈನ್ಯ ಜಿಲ್ಲಾ ಘಟಕ – ರಾಜ್ಯೋತ್ಸವ ಆಚರಣೆ


ರಾಯಚೂರು.ನ.೦೨- ಕನ್ನಡ ರಾಜ್ಯೋತ್ಸವದ ಅಂಗವಾಗಿ ದಿನಾಂಕ ೦೧.೧೧.೨೦೨೦ ರವಿವಾರ ರಂದು ವಾರ್ಡ ನಂ ೧೨ ಬಡಾವಣೆಯಲ್ಲಿ ಕನ್ನಡಾಂಭೆಗೆ ಪೂಜೆ ಮಾಡಿ ಧ್ವಜಾರೋಹಣ ಕಾರ್ಯಕ್ರಮವನ್ನು ಬಿ.ವೆಂಕಟೇಶ ನೆರೆವೆರಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ವೆಂಕಟೇಶ ಅರಗೋಲ್, ಉಪಾಧ್ಯಕ್ಷಾದ ನಶಾಂತ, ಕಾಯದರ್ಶಿ ಪ್ರಸಾದ್ ಭಂಡಾರಿ, ಸದಸ್ಯರುಗಳಾದ ವೆಂಕಟಸ್ವಾಮಿ ಮಲ್ಲಿಕಾರ್ಜುನ, ಬಸವರಾಜ ಕ್ಯಾದಿಗೇರಿ, ಕಲೀಂ ಫೀರ್, ರಮೇಶ ಜಗ್ಲಿ, ಕುಮಾರ, ಪರಶುರಾಮ, ಕಾರ್ಯದರ್ಶಿ ತಿರುಮಲೇಶ ಡಾ|| ಬಿ.ಆರ್. ಅಂಬೇಡ್ಕರ ಯುವ ಅಭಿವೃದ್ದಿ ಸಂಘ, ಸಂದೀಪ್ ಮುಂತಾದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.