ಕರ್ನಾಟಕ ಜನದರ್ಶನ ವೇದಿಕೆ ಪದಾಧೀಕಾರಿಗಳ ನೇಮಕ

ಕಾರಟಗಿ:ನ:09:ಕನ್ನಡ ನೆಲ ಜಲ ಭಾಷೆ ಉಳಿವುಗಾಗಿ ಕನ್ನಡಪರ ಸಂಘಟನೆಗಳು ಅಗತ್ಯವಾಗಿದೆ ಎಂದು ಕರ್ನಾಟಕ ಜನದರ್ಶನ ವೇದಿಕೆ ರಾಜ್ಯಾದ್ಯಕ್ಷ ದೇವಪ್ಪ ಮೇಣಸಗಿ ಹೇಳಿದರು.
ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ಕರ್ನಾಟಕ ಜನದರ್ಶನ ವೇದಿಕೆ ಕಾರಟಗಿ ತಾಲೂಕು ಪಧಾಧೀಕಾರಿಗಳಿಗೆ ಅದೇಶ ಪ್ರತಿ ನೀಡಿ ಮಾತನಾಡಿದರು. ಇಂದಿನ ದಿನ ಮಾನಗಳಲ್ಲಿ ಕರ್ನಾಟಕದ ನೆಲದಲ್ಲಿ ಹೊರ ರಾಜ್ಯದವರ ಅರ್ಥಿಕವಾಗಿ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದು ಕನ್ನಡ ನೆಲದ ಕನ್ನಡಿಗರು ಪರಭಾಷೆಯವರ ಕೈ ಕೆಳಗೆ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.ಮುಂದಿನ ದಿನಮಾನಗಳಲ್ಲಿ ಈ ಭಾಗದ ಯುವಕರ ಎಚ್ಚತ್ತು ಕನ್ನಡಪರ ಕೆಲಸ ಮಾಡಲು ಸೂಚಿಸಿದರು. ಜಿಲ್ಲಾ ಕಾರ್ಯದರ್ಶಿ ಅಮರೇಶ ನಾಯಕ ಪ್ರಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಕಾರ್ಯದರ್ಶಿ ಎಸ್.ಬಸವರಾಜ ನಾಯಕ ಅಧ್ಯಕ್ಷತೆ ವಹಿಸಿದ್ದರು. ಕಾರಟಗಿ ತಾಲೂಕು ಅಧ್ಯಕ್ಷರಾಗಿ ಅಮರೇಶ ಬೆಳ್ಳಿಕಟ್ಟಿ.
ಉಪಾಧ್ಯಕ್ಷ ಭೀಮರಾಜ. ಖಜಾಂಚಿ ದುರುಗೇಶ ಸಾಲೋಣಿ. ಪ್ರಧಾನ ಕಾರ್ಯದರ್ಶಿ ಮಂಜುನಾಥ ಕೆ.
ವಿಶ್ವನಾಥ.ರಮೇಶ ತಳವಾರ.ಅಮರೇಶ ಉಪ್ಪಾರ.ಸುರೇಶಬೆಳ್ಳಿಕಟ್ಟೆ.ಮಹಿಬೂಬ್.
ಸoಕೇತ್.ಪರಶುರಾಮ್.ಯಮನೂರು.ಭೀಮೇಶ್.ಪ್ರಶಾಂತ್ ಇವರನ್ನು ಸದಸ್ಯರನ್ನಾಗಿ ನೇಮಕಮಾಡಲಾಯಿತು.ಈ ಸಂದರ್ಭದಲ್ಲಿ ಪತ್ರಕರ್ತ ಜೆ.ನಾಗರಾಜ ಇವರನ್ನು ಸನ್ಮಾನಿಸಲಾಯಿತು.