ಕರ್ನಾಟಕ ಛಾಯಾರತ್ನ ಪ್ರಶಸ್ತಿಗೆ ಆಯ್ಕೆ

ದಾವಣಗೆರೆ. ಜೂ.೧೯; ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ ಜೂ.೨೩ ರಿಂದ ೨೫ ರವರೆಗೆ ನಡೆಯುವ ಪೋಟೋ ಟುಡೆ ಸಮಾರಂಭದಲ್ಲಿ ದಾವಣಗೆರೆಯ ಛಾಯಾಗ್ರಾಹಕರಾದ ಎಂ.ಮನು ಹಾಗೂ ಎಸ್ ರಾಜಶೇಖರ್ ಅವರಿಗೆ ಕರ್ನಾಟಕ ಛಾಯಾರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ವಿಶ್ವ ಮಾನವ ಕಟ್ಟಡ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎಸ್.ಎಲ್ ಆನಂದಪ್ಪ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕ ವಿಡಿಯೋ ಮತ್ತು ಫೋಟೋ ಅಸೋಸಿಯೇಷನ್  ಹಾಗೂ ಬೈಸೇಲ್ ಇಂಟ್ರಾಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಅಲ್ಬಮ್ ಮತ್ತು ಡಿಜಿಟಲ್ ಇಮೇಜಿಂಗ್ ಪ್ರದರ್ಶನ ಸಹಯೋಗದಲ್ಲಿ ನಡೆಯುತ್ತಿರುವ ಫೋಟೊ ಟುಡೆ ಕಾರ್ಯಕ್ರಮ ಹಾಗೂ ವಸ್ತುಪ್ರದರ್ಶನದಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ.  ಈ ಸಮಾರಂಭದಲ್ಲಿ ಕ್ಯಾನಾನ್ ನಿಕಾನ್,ಪ್ಯಾನಸಾನಿಕ್,ಸೋನಿ .  ಸೇರಿದಂತೆ ಛಾಯಾಗ್ರಹಣ ಕ್ಷೇತ್ರದ ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕಂಪನಿಗಳು ಭಾಗವಹಿಸಲಿವೆ ಎಂದರು.ಜೂ.೨೩ ರಂದು ಬೆಳಗ್ಗೆ ೧೦.೩೦ ಕ್ಕೆ ನಡೆಯುವ ಸಮಾರಂಭದಲ್ಲಿ ಕರ್ನಾಟಕ ಛಾಯಾರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಎಂ.ಮನು,ಎಸ್ ರಾಜಶೇಖರ ಕೊಂಡಜ್ಜಿ,ಬಿ.ಮಂಜುನಾಥ್, ಕೋಟಿಹಾಳ್ ಸಿದ್ದೇಶ್,ಎನ್‌.ಕೆ. ಕೊಟ್ರೇಶ್ ಉಪಸ್ಥಿತರಿದ್ದರು.ಸುದ್ದಿಗೋಷ್ಠಿಯಲ್ಲಿ, ಪ್ರಶಸ್ತಿಗೆ ಪಾತ್ರರಾಗಿರುವ ಎಂ. ಮನು, ಎಸ್. ರಾಜಶೇಖರ್, ಬಿ. ಮಂಜುನಾಥ್, ಕೋಟಿಹಾಳ್ ಸಿದ್ದೇಶ್, ಎನ್.ಕೆ. ಕೊಟ್ರೇಶ್, ಎ. ನಾಗರಾಜ್, ಅಕ್ಬರ್, ಆಜಾದ್, ನಾಗೇಂದ್ರ ಉಪಸ್ಥಿತರಿದ್ದರು.