ಕಲಬುರಗಿ: ಸೆ. 27: ಜಿಲ್ಲೆಯ ಕಾರ್ ಟ್ಯಾಕ್ಸಿ ಚಾಲಕರು ಪ್ರವಾಸಿಗರ, ಗ್ರಾಹಕರ, ಸ್ನೇಹಿಯಾಗಿ ಸೇವೆಸಲ್ಲಿಸುತ್ತಾ ಸ್ಥಳಿಯ ಐತಿಹಾಸಿಕ ಸ್ಥಳಗಳ ಸ್ಮಾರಕಗಳ ತೋರಿಸುತ್ತಿದ್ದಿರಿ ಈ ಭಾಗದ ಪ್ರವಾಸೋದ್ಯಮ ಅಭಿವೃದ್ದಿಗೆ ನಿಮ್ಮ ಸೇವೆ ಗೌರವಾಗಿದೆ ಈ ನೆಲೆಯಲ್ಲಿ ಪ್ರತಿಯೊಬ್ಬ ಡ್ರೈವರ್ ಸ್ಥಳಿಯ ಐತಿಹಾಸಿಕ ಸ್ಥಳಗಳ ಅರಿವು-ಮಾಹಿತಿ ಹಾಗೂ ಹೇಳುವ ಕಲೆಯನ್ನು ಅಳವಡಿಸಿಕೊಳ್ಳಬೇಕೆಂದು ಸ್ಟೇಷನ ಬಜಾರ ಪೋಲಿಸ ಠಾಣೆಯ ಎಎಸ್‍ಐ ಫಜಲ್ ರಹೆಮಾನ ಅವರು ಮಾತನಾಡಿದರು.
ಕಲಬುರಗಿ ನಗರದ ಕರ್ನಾಟಕ ಚಾಲಕರ ಒಕ್ಕೂಟ (ರಿ) ಕಲಬುರಗಿ ವತಿಯಿಂದ ಇಂದು ಬುಧುವಾರ ವಿಶ್ವ ಪ್ರವಾಸೋದ್ಯಮ ದಿನಾಚರಣೆ ನಿಮಿತ್ಯ ಪ್ರವಾಸೋದ್ಯಮ ಮತ್ತು ಹಸಿರು ಬಂಡವಾಳ ಹೂಡಿಕೆಗಳ ಕುರಿತು ಕಾರ್ಯಕ್ರಮವನ್ನು ಕೊಠಾರಿ ಭವನ ಕಾರ್ ಟ್ಯಾಕ್ಸಿ ಸ್ಟಾಂಡಿನಲ್ಲಿ ಛಾಯಾಚಿತ್ರಕಾರ ನಾರಾಯಣ ಎಂ ಜೋಶಿ ಅವರು ಸೆರೆಹಿಡಿದ ಐತಿಹಾಸಿಕ ಸ್ಮಾರಕಗಳ ಛಾಯಾಚಿತ್ರ ಪ್ರದರ್ಶನ-ಸಂಕ್ಷೀಪ್ತ ವಿವರ ಡ್ರೈವರಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಶರಣಬಸವ ವಿಶ್ವವಿದ್ಯಾಲಯ ಪ್ರವಾಸೋದ್ಯಮ ವಿಭಾಗ ಸಹಾಯಕ ಪ್ರದ್ಯಾಪಕ ದೀಲಿಪಕುಮಾರ ಪಾಟೀಲ್ ಮಾತನಾಡಿ ಕಲಬುರಗಿ ಜಿಲ್ಲೆಯ ನಮಗೆ ಎಷ್ಟುಗೊತ್ತು-ಐತಿಹಾಸಿಕ ಸ್ಮಾರಕಗಳ-ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದ- ಸಂಚಾರಿ ನಿಯಮಗಳು ಪ್ರವಾಸಿ-ಗ್ರಾಹಕರು ಮತ್ತು ಚಾಲಕರ ನಿತಿ ನಿಯಮಗಳ ಅರಿವು ಮೊಡಿಸಿದರು.
ಈ ವೇದಿಕೆಯಲ್ಲಿ ಯುವ ಮುಖಂಡ ಶರನಗೌಡ ಅಲಮ್‍ಪ್ರಭು ಪಾಟೀಲ, ಕರ್ನಾಟಕ ಚಾಲಕರ ಒಕ್ಕೂಟ (ರಿ) ಜಿಲ್ಲಾಧ್ಯಕ್ಷ ಚಂದ್ರಶೇಖರ, ಉಪಾಧ್ಯಾಕ್ಷ ಸುಶೀಲ, ಗೌರವಾಧ್ಯಕ್ಷ ಭಿಮರಾಯ ದೊರೆ, ರಾಷ್ಟ್ರೀಯ ವಾಹನ ಮಾಲಿಕರ ಸಂಘ (ಕರ್ನಾಟಕ) ಅಧ್ಯಕ್ಷ ರವಿ ರೆಡ್ಡಿ, ಬಿ.ಎಂ ರಾವೂರ, ರಮಾಕಾಂತ ಕೆ, ಜಗದೀಶ ಗುತ್ತೆದಾರ, ಮಂಜುನಾಥ ಬಬಲಾದ, ವಿಶ್ವನಾಥ ಪಾಟೀಲ, ಶರಣು ಜಮಾದರ, ಧರೆಪ್ಪ ಇಂಡಿ, ಅಕ್ಷಯ ಸೇರಿದಂತೆ ನೂರಾರು ಡ್ರೈವರಗಳು ಉಪಸ್ಥಿತರಿದ್ದರು.