ಕರ್ನಾಟಕ ಚಲನಚಿತ್ರ ಅಕಾಡೆಮಿ ನೂತನ ಅಧ್ಯಕ್ಷರಾಗಿ ಸಾಧುಕೋಕಿಲ ನೇಮಕ

ಸಂಜಯ್ ನಾಗ್,ಹಾಸನ

ಬೆಂಗಳೂರು:ಕರ್ನಾಟಕ ಚಲನಚಿತ್ರ ಅಕಾಡೆಮಿ ನೂತನ ಅಧ್ಯಕ್ಷರಾಗಿ ಹಾಸ್ಯನಟ,ಸಂಗೀತ ನಿರ್ದೇಶಕ ಸಾಧುಕೋಕಿಲ ಅವರನ್ನು ನೇಮಕ ಮಾಡಿ ಇಂದು ಸರ್ಕಾರ ಆದೇಶ ಹೊರಡಿಸಿದೆ.

ಸರ್ಕಾರ ವಿವಿಧ 44 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕದ ಆದೇಶ ಹೊರಡಿಸಿದೆ. ಸಿನೆಮಾ ಕ್ಷೇತ್ರದಲ್ಲಿ ನಟ,ನಿರ್ದೇಶಕ,ಸಂಗೀತ ನಿರ್ದೇಶಕರಾಗಿ ಗಣನೀಯವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ ಸಾಧುಕೋಕಿಲ. ಅವರ ಕಲಾ ಸೇವೆ ಪರಿಗಣಿಸಿ ಅಧ್ಯಕ್ಷರಾಗಿ 2ವರ್ಷದ ಅವಧಿಗೆ ನೇಮಕ ಮಾಡಿದೆ.

ಇದಲ್ಲದೆ ಕಾಂಗ್ರೆಸ್ ಪಕ್ಷ ಸಂಘಟನೆ, ಪ್ರಚಾರ ಕಾರ್ಯಗಳಲ್ಲೂ ಸಕ್ರಿಯರಾಗಿ ಪಾಲ್ಗೊಂಡು ಸಿ.ಎಂ.ಸಿದ್ದರಾಮಯ್ಯನವರಿಗೆ ಆಪ್ತವಲಯದಲ್ಲಿ ಸಾಧುಕೋಕಿಲ ಗುರುತಿಸಿಕೊಂಡಿದ್ದರು.ಇದೀಗ, ಇಂದಿನಿಂದ 15ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭಗೊಳ್ಳಲಿದ್ದು ಇಂದೇ ಅಧ್ಯಕ್ಷರಾಗಿ ನೇಮಕ ಆದೇಶ ಹೊರಬಿದ್ದಿದೆ.