ಕರ್ನಾಟಕ ಗ್ರಾಮೀಣ ಬ್ಯಾಂಕ್‍ನ ಕಾಳಮ್ಮ ಬೀದಿ ಶಾಖೆ ವಡ್ಡರಬಂಡೆಯ ಏಷಿಯನ್ ಬಿಲ್ಡಿಂಗ್ ಗೆ ಸ್ಥಳಾಂತರ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.30: ಕರ್ನಾಟಕ ಗ್ರಾಮೀಣ ಬ್ಯಾಂಕ್ ಕಾಳಮ್ಮ ಬೀದಿ ಶಾಖೆಯನ್ನು ಅತ್ಯಂತ ಸುಸಜ್ಜಿತವಾದ ರೈತಾಪಿ ಬಂಧುಗಳಿಗೆ ಅನುಕೂಲಕರವಾದ ವಡ್ಡರಬಂಡೆಯ ಏಷಿಯನ್ ಬಿಲ್ಡಿಂಗ್‍ಗೆ  ಸ್ಥಳಾಂತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಧಾನ ಕಛೇರಿಯ ಮಹಾ ಪ್ರಬಂಧಕರಾದ  ಎ.ಎನ್.ಪ್ರಸಾದ್ ಹಾಗೂ ಪ್ರಾದೇಶಿಕ ಕಛೇರಿಯ ಪ್ರಬಂಧಕರಾದ ರಮಾನಾಥ ಆಚಾರ್ಯ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಐನಾಥ ರೆಡ್ಡಿ, ಉದ್ಘಾಟಕರಾಗಿ ವಿ. ವಿ. ಸಂಘದ  ಖಜಾಂಚಿ ಗೋನಾಳ್ ರಾಜಶೇಖರ್ ರೆಡ್ಡಿ ಭಾಗವಹಿಸಿದ್ದರು.  ಜ್ಯೋತಿ ಬೆಳಗುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದ ಗೋನಾಳ್ ರಾಜಶೇಖರಗೌಡರು ಮಾತನಾಡುತ್ತಾ, ನನ್ನ ಹುಟ್ಟೋರು ಗೋನಾಳಲ್ಲಿ ನನಗೆ ಬ್ಯಾಂಕ್ ಜೊತೆ ಆತ್ಮೀಯ ಸಂಬಂಧ ಇತ್ತು. ಹಾಗೆ ಬ್ಯಾಂಕ್ ನೌಕರರು ನಮ್ಮ ಕುಟುಂಬಗಳೊಟ್ಟಿಗೆ ತುಂಬಾನೇ ಒಡನಾಟ ಬೆಳೆಸಿಕೊಂಡಿದ್ರು.  ಕಕ್ಕಬೇವಿನಹಳ್ಳಿಯಲ್ಲಿ ಪ್ರಾರಂಭವಾದ ತುಂಗಭದ್ರಾ ಗ್ರಾಮೀಣ ಬ್ಯಾಂಕ್ ಫಲವತ್ತಾಗಿ ಬೆಳೆದು ಇಂದು ಕರ್ನಾಟಕ ಗ್ರಾಮೀಣ ಬ್ಯಾಂಕ್  ಆಗಿ ಆಗಿನ ವಿದ್ಯಾರ್ಥಿಯಾಗಿ ನೋಡಿದ ಬ್ಯಾಂಕ್ ಇಂದು ನನ್ನ ಕೈಯಲ್ಲಿ ಸ್ಥಳಾಂತರದ ಉದ್ಘಾಟನೆ ಆಗ್ತಿರೋದು ತುಂಬಾನೇ ಸಂತೋಷ. ಈ ಬ್ಯಾಂಕ್‍ನ ಬೆಳವಣಿಗೆಗೆ ನಾನು ತುಂಬು ಹೃದಯದಿಂದ ಸಹಕರಿಸುವುದಾಗಿ ಹೇಳಿದರು. ಮುಖ್ಯ ಅತಿಥಿಗಳಾದ ಜಿ.ಐನಾಥರೆಡ್ಡಿ ಮಾತನಾಡುತ್ತಾ, ನಗರದ ಗೊಬ್ಬರ, ಬೀಜ ಮತ್ತು ಕ್ರಿಮಿನಾಶಕ ವ್ಯಾಪಾರಿಗಳ ತಾಣದ ಮದ್ಯೆ ರೈತರ ಬ್ಯಾಂಕ್ ಸ್ಥಳಾಂತರಗೊಳ್ಳುತ್ತಿರೋದು ತುಂಬಾ ಪ್ರಶಂಶನೀಯ. ಇದರಿಂದ ಗೊತ್ತಾಗುತ್ತೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಮ್ಮ, ನಿಮ್ಮೆಲ್ಲರ  ಮೆಚ್ಚಿನ ಬ್ಯಾಂಕ್ ಅಂತ ಶ್ಲಾಘಿಸಿದರು. ಅಧ್ಯಕ್ಷತೆ ವಹಿಸಿದ ಎ.ಎನ್.ಪ್ರಸಾದ್ ಮಾತನಾಡಿ, ರೈತರ ಸಹಕಾರ ನೆನೆದು ಇದು ನಮ್ಮದಲ್ಲ ನಾವು ಕೇವಲ ನಿಮ್ಮಿತ ಮಾತ್ರರು. ಈ ಬ್ಯಾಂಕ್‍ನ ಬೆಳವಣಿಗೆಯ ಅಸಲಿ ಹಕ್ಕುದಾರರು ನೀವೇ ಅಂತ ರೈತ, ಕಾರ್ಮಿಕ, ಔದ್ಯೋಗಿ ಬಂದುಗಳನ್ನು ಶ್ಲ್ಯಾಘಿಸಿದರು. ಹಾಗೂ ಈ ನಮ್ಮ ಬ್ಯಾಂಕ್ ಯಾವುದೇ ರಾಷ್ತ್ರೀಕೃತ ಬ್ಯಾಂಕ್‍ಗೂ ಕಡಿಮೆ ಇಲ್ಲದೇ ದೇಶದ ಯಾವುದೇ ಮೂಲೆಗೆ ಈ ಬ್ಯಾಂಕ್‍ನಲ್ಲಿ ವ್ಯವಹಾರ ಮಾಡಬಹುದು. ವ್ಯವಹಾರದಲ್ಲಿ ನಾವು ಯಾವ ಬ್ಯಾಂಕ್‍ಗೂ ಕಡಿಮೆ ಇಲ್ಲಾ ಅಂತ ತಿಳಿಸಿದರು. ಹಾಗೆ ಅಧ್ಯಕ್ಷತೆ ವಹಿಸಿದ ಇನ್ನೋರ್ವ ಪ್ರಾದೇಶಿಕ ಪ್ರಬಂಧಕರಾದ ರಮಾನಾಥ ಆಚಾರ್ಯ ಮಾತನಾಡಿ ಬ್ಯಾಂಕ್ ಗ್ರಾಹಕರು ಸಹಕರಿಸಿ, ಈ ಹೊಸ ಹಾಗೂ ಅತ್ಯುನ್ನತ ಸೌಲಭ್ಯ ಇರುವ ಹಾಗೆ ಈ ಹೊಸ ಕಟ್ಟಡದಲ್ಲಿ ಲಾಕರ್ ವ್ಯವಸ್ಥೆ ಇರೋದಾಗಿ, ಹಾಗೆ ಬ್ಯಾಂಕಿನ ಇನ್ನಿತರ ಸೇವೆಗಳ ಉಪಯೋಗ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಖೆಯ ಮುಖ್ಯ ಪ್ರಬಂಧಕರಾದ ಮೇಘ ಮಾತನಾಡಿ ಬ್ಯಾಂಕ್ ಬೆಳೆದು ಬಂದ ದಾರಿ ಹಾಗೂ ಈ ಭಾಗದ ಜನರ ಸಹಕಾರದ ಬಗ್ಗೆ ತಿಳಿಸಿದರು, ಇನ್ನೋರ್ವ ಅಧಿಕಾರಿ ಮೊಹಮ್ಮದ್ ಆಲಿ ಮುದ್ದೇಬಿಹಾಳ್ ಕಾರ್ಯಕ್ರಮ ನಿರ್ವಹಿಸಿದರು. ತೇಜಸ್ವಿನಿ ಹಾಗೂ ಸಿಬ್ಬಂದಿ ಗ್ರಾಹಕರಿಗೆ ವಂದಿಸಿ, ಹೂಗುಚ್ಛ ನೀಡಿ ಸ್ವಾಗತಿಸಿದರು. ಪ್ರಾದೇಶಿಕ ಕಛೇರಿ ಸಿಬ್ಬಂದಿ ಪದ್ಮನಾಭ, ಗೋಪಾಲ್, ಸಲೀಮ್, ಶಿವಪ್ರಸಾದ್, ಭಗತ್‍ಸಿಂಗ್ ಮನೋಹರ್, ಉಷಾ, ಜಯಶ್ರೀ, ಅರ್ಚನಾ ಹಾಗೂ ಶಾಖೆಯ ಸಿಬ್ಬಂದಿ ಹಾಜರಿದ್ದರು.