
ದಾವಣಗೆರೆ.ಮಾ.೧೨: ಕರ್ನಾಟಕ ಗೃಹ ಮಂಡಳಿ ಯಿಂದ ನಿರ್ಮಾಣಗೊಂಡಿರುವ ತುಂಗಭದ್ರಾ ಬಡಾವಣೆಯಲ್ಲಿ 10 ಕೋಟಿ ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿ ಬಹಳ ಲೋಪದಿಂದ ಕೂಡಿದೆಎಂದು ನ್ಯಾಯವಾದಿ ಕೆ.ಎಂ. ಮಲ್ಲಿಕಾರ್ಜುನ್ ದೂರಿದರು.ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ತುಂಗಭದ್ರಾ ಬಡಾವಣೆಯನ್ನು 2021 ರ ಜೂ. 23 ರಂದು ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಲಾಯಿತು. 10 ಕೋಟಿ ಅನುದಾನ ದಡಿ ಕುಡಿಯುವ ನೀರು, ಒಳ ಚರಂಡಿ, ಬೀದಿದೀಪ ಕಾಮಗಾರಿ ಲೋಪದೋಷ ದಿಂದ ಕೂಡಿರುವ ಬಗ್ಗೆ ಸಂಸದರು, ಶಾಸಕರು ಹಾಗೂ ಮಹಾನಗರ ಪಾಲಿಕೆ ಸದಸ್ಯರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.ತುಂಗಭದ್ರಾ ಬಡಾವಣೆಯ ಎ ಬ್ಲಾಕ್ ನ ಎಂಟನೇ ಮುಖ್ಯ ರಸ್ತೆ ಮತ್ತು 9 ನೇ ಅಡ್ಡ ರಸ್ತೆಯಲ್ಲಿ 22ಕ್ಕೂ ಹೆಚ್ಚು ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಗಳವರ ಮನೆಗಳಿವೆ. ಉದ್ದೇಶಪೂರ್ವಕವಾಗಿ ಬೀದಿದೀಪ, ಕುಡಿಯುವ ನೀರು, ಒಳ ಚರಂಡಿ ಕಾಮಗಾರಿ ಲೋಪ ಮಾಡಿದ್ದಾರೆ. ಹಾಗಾಗಿ ಸಂಬಂಧಿತ ಅಧಿಕಾರಿಗಳು ಕಳಪೆ ಕಾಮಗಾರಿ ಬಗ್ಗೆ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳ ಬೇಕು ಎಂದು ನಾಗರಿಕ ಹಿತ ರಕ್ಷಣಾ ಸಮಿತಿ ಅಧ್ಯಕ್ಷರೂ ಆಗಿರುವ ಮಲ್ಲಿಕಾರ್ಜುನ್ ಒತ್ತಾಯಿಸಿದರು.ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಬಹಳಷ್ಟು ಅನ್ಯಾಯ ಮಾಡಲಾಗುವುದ ಖಂಡಿಸಿ ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವುದೇ ಇಲ್ಲ ಎಂದು ತಿಳಿಸಿದರು. ಸಮಿತಿ ಕಾರ್ಯದರ್ಶಿ ಮಲ್ಲಿಕಾರ್ಜುನ ರೆಡ್ಡಿ ಸುದ್ದಿಗೋಷ್ಠಿ ಯಲ್ಲಿದ್ದರು.