ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ಮಂಜೂರಾದ ಅನುದಾನವನ್ನು ದುರುಪಯೋಗ ಮಾಡಿದವರಿಗೆ ಕ್ರಮ ಕೈಗೊಳ್ಳುವಂತೆ ಆಗ್ರಹ

ವಿಜಯಪುರ, ಜು.17-ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ಮಂಜೂರಾದ ಅನುದಾನವನ್ನು ದುರುಪಯೋಗ ಪಡಿಸಿಕೊಂಡು ಸರಕಾರಕ್ಕೆ ದ್ರೋಹ ಬಗೆದ ಸಂಘ -ಸಂಸ್ಥೆಗಳ ಹಾಗೂ ಅನುದಾನ ಬಿಡುಗಡೆ ಅವ್ಯವಹಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿಗಳ ಮುಖೇನ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವಿಜಯಪುರ ಜಯ ಕರ್ನಾಟಕದ ಜಿಲ್ಲಾಧ್ಯಕ್ಷರಾದ ಮಹೇಶ ನಾಯ್ಕ ಮಾತನಾಡಿ, 2021-22ನೇ ಸಾಲಿನಲ್ಲಿ ಸುಮಾರು 200 ಕೋಟಿ ರೂ.ಗಳಷ್ಟು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ಮಂಜೂರಾದ ಅನುದಾನವು ಸಂಪೂರ್ಣವಾಗಿ ಪೋಲಾಗಿದ್ದು, ಅನುದಾನ ಬಿಡುಗಡೆಯಲ್ಲಿ ಹಾಗೂ ಅವ್ಯವಹಾರದಲ್ಲಿ ಶಾಮೀಲಾದ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕು.

2021-22ನೇ ಸಾಲಿನ ಸರ್ಕಾರದ ಅನುಮೋದಿತ ಕ್ರಿಯಾ ಯೋಜನೆಲ್ಲಿ ಗಡಿ ಭಾಗದ ಸಂಘ ಸಂಸ್ಥೆಗಳು ಶಾಲೆಗೆ ಶಾಲಾ ಕೊಠಡಿ, ಕಂಪೌಂಡ್ ನಿರ್ಮಾಣ, ಗ್ರಂಥಾಲಯ, ಸಾಂಸ್ಕøತಿಕ ಭವನ ಹಾಗೂ ಇತರೆ ಮೂಲಭೂತ ಸೌಲಭ್ಯಗಳಿಗೆ ಮಂಜೂರಾದ ಅನುದಾನವನ್ನು ಸರಿಯಾಗಿ ಬಳಕೆ ಆಗಿರುವದಿಲ್ಲ. ಅನುದಾನ ಮಂಜೂರಿಸಿಕೊಂಡ ಸಂಘ-ಸಂಸ್ಥೆಗಳು ಉದ್ದೇಶಿತ ಯೋಜನೆಗೆ ಹಣ ಬಳಕೆ ಮಾಡಿರುವದಿಲ್ಲ. ಇನ್ನು ಅನುದಾನವನ್ನು ಸರಿಯಾಗಿ ಬಳಕೆ ಮಾಡದೇ ಕೇವಲ ನೆಪಕ್ಕೆ ಮಾತ್ರ ಅರ್ಧಮುರ್ದ ಕಾಮಗಾರಿಗಳನ್ನು ಕೈಗೊಂಡು ಅನುದಾನವನ್ನು ದುರುಪಡಿಸಿಕೊಂಡರುತ್ತಾರೆ. ಇದೇ ರೀತಿ ಜಿಲ್ಲೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಇದೇ ತೆರನಾಗಿ ಅನುದಾನವನ್ನು ದುರುಪಯೋಗ ಪಡಿಸಿಕೊಂಡಿರುತ್ತಾರೆ. ಇನ್ನು ಅನುದಾನ ಬಿಡುಗಡೆಗೊಳಿಸಿದ ಅಧಿಕಾರಿಗಳು ಕಾಮಗಾರಿಗಳನ್ನು ಪರಿಶೀಲಿಸದೇ ಅವರಿಗೆ ಬೇಕಾದ ಹಾಗೆ ಅನುದಾನವನ್ನು ಬಿಡುಗಡೆಗೊಳಿಸಿ ಅವ್ಯವಹಾರ ಗೈದಿರುತ್ತಾರೆ. ಸರಕಾರಿ ಇಂಜನೀಯರರು, ಖಾಸಗಿ ಸಂಸ್ಥೆಗಳು ಸಲ್ಲಿಸಿದ ಅಂದಾಜು ಪಟ್ಟಿಗೆ ತಕ್ಕಂತೆ ಕಾಮಗಾರಿ ನಿರ್ವಹಿಸಿದ ಬಗ್ಗೆ ಸಂಸ್ಥೆಗಳಿಗೆ ಭೇಟಿ ನೀಡಿರುವದಿಲ್ಲ. ಅನುದಾನಪಡೆಯುವ ಸಂದರ್ಭದಲ್ಲಿ ಸುಳ್ಳು ದಾಖಲೆಗಳ ಮೇಲೆ ಅನುದಾನ ಪಡೆದುಕೊಂಡಿರುವದು ದೃಢಪಟ್ಟಲ್ಲಿ ಬಡ್ಡಿ ಸಮೇತ ವಾಪಸ್ಸು ಪಡೆಯುವುದು ಹಾಗೂ ಕಾನೂನು ರಿತ್ಯಾ ಶಿಸ್ತು ಕ್ರಮ ಜರುಗಿಸಿ, ದಂಡನೆಗೆ ಒಳಪಡಿಸಲು ಜಿಲ್ಲಾಧಿಕಾರಿಗಳು ಕ್ರಮ ವಹಿಸಲಾಗುವದು ಎಂದು ತಿಳುವಳಿಕೆ ನೀಡಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿರುವದಿಲ್ಲ. ಆದ್ದರಿಂದ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಬೇಕೆಂದು ಆಗ್ರಹಪಡಿಸಿದರು.

ಈ ಸಂದರ್ಭದಲ್ಲಿ ಉಪಾದ್ಯಕ್ಷರಾದ ಪಿಂಟು ಗಬ್ಬೂರ, ಕಾರ್ಯಾಧ್ಯಕ್ಷರಾದ ಸಂಗಮೇಶ ದಾಶ್ಯಾಳ, ಸಂತೋಷ ಶಹಾಪೇಟಿ, ಮಹಿಳಾ ಜಿಲ್ಲಾದ್ಯಕ್ಷರಾದ ಮೀನಾ ಕುಂದನವರ, ಜಿಲ್ಲಾ ಸಂಚಾಲಕರಾದ ಮುಕದ್ದಸ್ ಇನಾಮದಾರ, ಕಾರ್ಯಾಧ್ಯಕ್ಷೇ ಶಿವಗಂಗಾ ಕಟ್ಟಿಮನಿ, ನಗರ ಅದ್ಯಕ್ಷರಾದ ಇನಾಮಾಯಿಲ್ ಬರಗುಡಿ, ಸಂಘಟನಾ ಕಾರ್ಯದರ್ಶಿ ರಿಯಾಜ ಪಾಂಡು, ಕ್ರೀಡಾ ಘಟಕ ಅಧ್ಯಕ್ಷ ಅಮಗೊಂಡ ನಿರವಾಣಿ, ಉಮೇಶ ರುದ್ರಮುನಿ, ಕಾರ್ಮಿಕ ಘಟಕ ಸುರೇಶ ರಜಪೂತ, ಜಿಲ್ಲಾ ಕಾರ್ಯದರ್ಶಿ ವಿಜಯಸಿಂಗ ರಜಪೂತ, ರಾವತಾಯ ಆಸಂಗಿನಾಳ, ಸಾವಿತ್ರಿ ಖಂಡೇಕರ, ರೋಹಿಣಿ ಗಿರಗಾಂವಕರ, ಸುಜಾತಾ ಪೂಜಾರಿ, ಅಶ್ವಿನಿ ಸಾಳುಂಕೆ, ಲಲಿತಾ ಚವ್ಹಾಣ, ಶಾರದಾ ಪತ್ತಾರ, ವೈಶಾಲಿ ಕುಂದನಗಾರ ಇನ್ನಿತರರು ಇದ್ದರು.