ಕರ್ನಾಟಕ ಕ್ಷತ್ರಿಯ ಒಕ್ಕೂಟ ತಾಲೂಕು ಸಮಿತಿ ರಚನೆ

ಲಿಂಗಸುಗೂರು,ಜ.೧೩- ಪಟ್ಟಣದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಕ್ಷತ್ರಿಯ ಒಕ್ಕೂಟದಿಂದ ಕ್ಷತ್ರಿಯ ಸಮಾಜದಲ್ಲಿ ೩೬ ಪಂಗಡಗಳಿದ್ದು, ಅವೆಲ್ಲಾವನ್ನು ಒಂದುಗೂಡಿಸಿ ಸಂಘಟಿಸುವ ಉದ್ದೇಶದಿಂದ ವಿವಿಧ ಭಾಗಗಳಲ್ಲಿ ಕಾರ್ಯಗಳಲ್ಲಿ ಹರಿದು ಹಂಚಿ ಹೋಗಿದ್ದು, ಕ್ಷತ್ರಿಯರು ಅವರೆಲ್ಲಾರನ್ನು ಒಂದೇ ವೇದಿಕೆ ಅಡಿಯಲ್ಲಿ ಒಗ್ಗೂಡಿಸುವುದೇ ಕ್ಷತ್ರಿಯ ಒಕ್ಕೂಟದ ಉದ್ದೇಶವಾಗಿದೆ.
ರಾಜ್ಯ ನಾಯಕರ ಸಮ್ಮತಿ ಮೇರೆಗೆ ತಾಲೂಕು ಕ್ಷತ್ರಿಯ ಒಕ್ಕೂಟ ರಚನೆ ಮಾಡಿದ್ದು, ತಾಲೂಕು ಸಮಿತಿಯ ಪದಾಧಿಕಾರಿಗಳಾದ ಗೌರವ ಅಧ್ಯಕ್ಷರಾಗಿ ದಶರಥಸಿಂಗ ತಾಲೂಕು ಅಧ್ಯಕ್ಷರಾಗಿ ಸತ್ಯನಾರಾಯಣಸಿಂಗ ಮಹಿಳಾ ಘಟಕದ ತಾಲೂಕು ಅಧ್ಯಕ್ಷರಾಗಿ ಶೋಭಾ ಕಾಟವ ಉಪಾಧ್ಯಕ್ಷರಾಗಿ ೫ ಜನ ವಾಸು ಶ್ರೀನಿವಾಸ ರಾಯಬಾಗಿ, ಕಿಶನರಾವು ಚವ್ಹಾಣ, ರಾಘವ, ದೇವಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ದುರ್ಗಸಿಂಗ, ಖಜಾಂಚಿಯಾಗಿ ರವಿಕುಮಾರ್ ಸುಗಂಧಿ, ಸಂಘಟನಾ ಕಾರ್ಯದರ್ಶಿಯಾಗಿ ೭ ಜನರು ವಿಜಯ, ಚಂದಪ್ಪ, ಕಟ್ಟಿಮನಿ, ಲಕ್ಷ್ಮಣ, ತುಕಾರಾಮ ಇಂಗಳೇ, ಮಾರುತಿ, ಆನಂದ ಸುಗಂದಿ, ಮದನ ಮೋಹನ ವಾಸ್ತವ, ನೇಮಕ ಮಾಡಲಾಗಿದೆ ಎಂದು ಸತ್ಯನಾರಾಯಣಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಈ ಸಂದರ್ಭದಲ್ಲಿ ನಾರಾಯಣ ಸಿಂಗ ಸಿದ್ದಪ್ಪ, ರವಿಕುಮಾರ, ಆನಂದ ಉಪಸ್ಥಿತರಿದ್ದರು.