ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪಿಜಿ ಕೋರ್ಸ್‍ಗಳಿಗೆ ಪ್ರವೇಶ ಪ್ರಾರಂಭ

ಕಲಬುರಗಿ:ಮೇ.2:ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು 2024-25ನೇ ಶೈಕ್ಷಣಿಕ ವರ್ಷಕ್ಕೆ ಸ್ನಾತಕೋತ್ತರ (ಪಿಜಿ) ಕೋರ್ಸ್‍ಗಳಿಗೆ ಪ್ರವೇಶ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಗೌರವಾನ್ವಿತ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು 2024-25 ರ ಪಿಜಿ ಕೋರ್ಸ್‍ಗಳ ಪ್ರವೇಶಕ್ಕಾಗಿ ಸಮರ್ಥ ಪೆÇೀರ್ಟಲ್ ಅನ್ನು ಉದ್ಘಾಟಿಸಿದರು. ವಿಶ್ವವಿದ್ಯಾನಲಯವು 29 ಪಿಜಿ ಕೋರ್ಸ್‍ಗಳನ್ನು ನಡೆಸುತ್ತಿದೆ. ಈ ಪಿಜಿ ಕೋರ್ಸ್‍ಗಳ ಪ್ರವೇಶವು CUET (PG) -2024 ಪರೀಕ್ಷೆಯ ಸ್ಕೋರ್ ಅನ್ನು ಆಧರಿಸಿವೆ. CUET (PG) -2024 ಬರೆದು ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಸಿಯುಕೆ ಸಮರ್ಥ್ ಪೆÇೀರ್ಟಲ್ (https://cukcuet.samarth.edu.in/pg/) ಮೂಲಕ ಪ್ರವೇಶಕ್ಕಾಗಿ ನೋಂದಾಯಿಸಿಕೊಳ್ಳಬಹುದು. ನೋಂದಣಿಗೆ ಕೊನೆಯ ದಿನಾಂಕ ಜೂನ್ 3, 2024 ಆಗಿರುತ್ತದೆ.
ಪ್ರವೇಶವನ್ನು ಕೇವಲ ಆನ್‍ಲೈನ್ ಮೂಲಕ ಮಾತ್ರ ನೀಡಲಾಗುತ್ತದೆ. ಪ್ರವೇಶ ಪ್ರಕ್ರಿಯೆಯ ಕುರಿತು ಹೆಚ್ಚಿನ ವಿವರಗಳಿಗಾಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವೆಬ್‍ಸೈಟ್‍ಗೆ (www.cuk.ac.in) ಗೆ ಭೇಟಿ ನೀಡಿ. ಈ ಸಂದರ್ಭದಲ್ಲಿ ಕುಲಸಚಿವ ಪೆÇ್ರ.ಆರ್.ಆರ್.ಬಿರಾದಾರ್, ಪರೀಕ್ಷಾ ನಿಯಂತ್ರಕರಾದ ಶ್ರೀ ಕೋಟ ಸಾಯಿಕೃಷ್ಣ, ಪೆÇ್ರ.ಕೆ.ಪದ್ಮಶ್ರೀ, ಪೆÇ್ರ.ಚನ್ನವೀರ ಆರ್.ಎಂ, ಡಾ.ಭರತ್ ಹಾಗೂ ಇತರ ಅಧ್ಯಾಪಕರು ಉಪಸ್ಥಿತರಿದ್ದರು.