ಕರ್ನಾಟಕ ಕಾಲೇಜಿನಲ್ಲಿ ಹಿಂದಿ ದಿನಾಚರಣೆ

ಬೀದರ್: ಜ.31:ಕರ್ನಾಟಕ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿಶ್ವ ಹಿಂದಿ ದಿವಸದ ಆಚರಣೆ .
ಕರಾಶಿ ಸಂಸ್ಥೆಯ ಕರ್ನಾಟಕ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬೀದರ್ ದಿನಾಂಕ 30. 01. 2024 ರಂದು ಹಿಂದಿ ವಿಭಾಗದ ವತಿಯಿಂದ ವಿಶೇಷ ವ್ಯಾಖ್ಯಾನವನ್ನು ಆಯೋಜಿಸುವುದರ ಮೂಲಕ ವಿಶ್ವ ಹಿಂದಿ ದಿವಸ್ ಆಚರಿಸಲಾಯಿತು .
ಮುಖ್ಯ ಅತಿಥಿಗಳಾದ ಡಾ. ಅಂಬುಜಾ ಮಳಕೇಡಕರ್ ಸಹಾಯಕ ಪ್ರಾಧ್ಯಾಪಕರು ಹಿಂದಿ ವಿಭಾಗ ಅಲ್ ಶರಾಯ್ ಮಹಿಳಾ ವಿಜ್ಞಾನ ಮಹಾವಿದ್ಯಾಲಯ ಕಲ್ಬುರ್ಗಿ ಇವರು ತಮ್ಮ ವಿಶೇಷ ಉಪನ್ಯಾಸಮಾಲೆಯಲ್ಲಿ ಪ್ರಪಂಚದಾದ್ಯಂತ ಹಿಂದಿ ಭಾಷೆಯ ಬಳಕೆಯ ಕುರಿತು ಹಾಗೂ ಭಾರತದ ರಾಜ್ಯ ಭಾಷೆ ಯಾಗಿರುವ ಹಿಂದಿ ಭಾಷೆಯು ನಮ್ಮ ದೇಶದ ವೈವಿಧ್ಯತೆಯ ಸಂಕೇತವಾಗಿದೆ. ಅದನ್ನು ನಾವು ಕಲಿಯಬೇಕು, ಸದುಪಯೋಗಪಡಿಸಿಕೊಳ್ಳಬೇಕು ಮತ್ತು ಸಂರಕ್ಷಿಸಬೇಕು .ಹಿಂದಿ ಭಾಷೆಯ ಸರಿಯಾದ ಜ್ಞಾನವು ನಮ್ಮ ದೇಶದ ಸಂಸ್ಕøತಿ, ಪರಂಪರೆ ಮತ್ತು ಮೌಲ್ಯಗಳನ್ನು ಕಲಿಯಲು ಸಹಾಯ ಮಾಡುತ್ತದೆ ಎಂಬುದನ್ನು ಕುರಿತು ವಿಮರ್ಶಾತ್ಮಕವಾಗಿ ವಿವರಿಸಿದರು. ಜೊತೆಗೆ ವಿದ್ಯಾರ್ಥಿಗಳನ್ನು ಹಿಂದಿಯಲ್ಲಿ ಕವನವನ್ನು ರಚಿಸಲು ಉತ್ತೇಜಿಸುವುದರ ಮೂಲಕ ಕವನವನ್ನು ರಚಿಸುವ ವಿವಿಧ ಮತ್ತು ನವೀನ ಶೈಲಿಯನ್ನು ತಿಳಿಸಿಕೊಟ್ಟರು . ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಪೆÇ್ರಫೆಸರ್ ಅನಿಲಕುಮಾರ್ ಚಿಕ್ಕಮಣೂರ ಅಧ್ಯಕ್ಷ ಸ್ಥಾನ ವಹಿಸಿದರು . ಕಲಾನಿಕಾಯದ ಸಂಯೋಜಕರು ಮತ್ತು ಮಾಣಿಕ್ಯ ವಿಭಾಗದ ಮುಖ್ಯಸ್ಥರು ಆಗಿರುವಂತಹ ಡಾ. ಶಶಿಧರ್ ಪಾಟೀಲ್ ರವರು ಗೌರವ ಅತಿಥಿ ಸ್ಥಾನವನ್ನು ಅಲಂಕರಿಸಿದರು ಹಿಂದಿ ವಿಭಾಗದ ಮುಖ್ಯಸ್ಥರು ಮತ್ತು ಕಾರ್ಯಕ್ರಮದ ಆಯೋಜಕರು ಆದ ಡಾ. ಗೀತಾ ಪೆÇೀಸ್ತೆ ಯವರು ಸ್ವಾಗತಿಸಿದರು , ಡಾ. ಸಿರಾಜುದ್ದೀನ್ ಸಹಾಯಕ ಪ್ರಾಧ್ಯಾಪಕರು ಹಿಂದಿ ವಿಭಾಗ ವಂದಿಸಿದರು, ಬಿಎ ತೃತೀಯ ಸೆಮಿಸ್ಟರ್ನ ವಿದ್ಯಾರ್ಥಿ ಶ್ರೀ ಪವನ್ ಕುಮಾರ್ ನಿರೂಪಿಸಿದರು . ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು