ಕರ್ನಾಟಕ ಕಾಲೇಜಿನಲ್ಲಿ ಇಂಟರ್ನಶಿಪ್ ಸಮಾರೋಪ

ಬೀದರ್: ಜೂ.3:ಹೈ ಐಡಿಯಲ್ಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ನಗರದ ಕರ್ನಾಟಕ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ಬಿ.ಎಸ್ಸಿ ಕಂಪ್ಯೂಟರ್ ಸೈನ್ಸ್ ವಿಭಾಗದ ಆರನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಶನಿವಾರ ಇಂಟರ್ನಶಿಪ್ ಸಮಾರೋಪ ಕಾರ್ಯಕ್ರಮ ನಡೆಯಿತು.
ಇಂಟರ್ನಶಿಪ್ ಉದ್ಯಮದ ಪ್ರಾಯೋಗಿಕ ಅನುಭವ ನೀಡುತ್ತದೆ. ವಿದ್ಯಾರ್ಥಿಗಳನ್ನು ವೃತ್ತಿ ಪರ ಜಗತ್ತಿಗೆ ಸಜ್ಜುಗೊಳಿಸುತ್ತದೆ ಎಂದು ಕಾಲೇಜು ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಹಂಗರಗಿ ಹೇಳಿದರು.
ಕಲಿಕೆಯು ವಿದ್ಯಾರ್ಥಿಗಳ ಜ್ಞಾನ ವೃದ್ಧಿಸುತ್ತದೆ. ಕೌಶಲ ಜೀವನದಲ್ಲಿ ಯಶ ಕಾಣಲು ನೆರವಾಗುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ಅಣಿಗೊಳಿಸುವುದು ಇಂಟರ್ನಶಿಪ್ ಉದ್ದೇಶವಾಗಿದೆ ಎಂದು ಹೈ ಐಡಿಯಲ್ಸ್ ಟೆಕ್ನಾಲಜೀಸ್ ವ್ಯವಸ್ಥಾಪಕ ನಿರ್ದೇಶಕ ಸಚ್ಚಿದಾನಂದ ಸ್ವಾಮಿ ಚಿದ್ರೆ ಹೇಳಿದರು.
ಇಂಟರ್ನಶಿಪ್ ಪೂರೈಸಿದವರಿಗೆ ಹೈ ಐಡಿಯಲ್ಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡನಲ್ಲಿ ಉದ್ಯೋಗ ಅವಕಾಶ ಕಲ್ಪಿಸಲಾಗುವುದು. ಆಸಕ್ತರು ಉದ್ಯೋಗಕ್ಕೆ ಸೇರಿಕೊಳ್ಳಬಹುದು ಎಂದು ತಿಳಿಸಿದರು.
ಯಾವುದೇ ಕೆಲಸದಲ್ಲಿ ಯಶಸ್ವಿ ಆಗಲು ಕೌಶಲ ಹಾಗೂ ಅನುಭವ ಬಹಳ ಅವಶ್ಯಕ ಎಂದು ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಶ್ರೀಕಾಂತ ದೊಡ್ಡಮನಿ ಹೇಳಿದರು.
ಇಂಟರ್ನಶಿಪ್ ಪೂರೈಸಿದ 25 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಹೈ ಐಡಿಯಲ್ಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡನ ಗುರುರಾಜ ಕುಲಕರ್ಣಿ, ವಿದ್ಯಾಸಾಗರ್, ವೀರೇಶ ಇದ್ದರು.
ಡಾ. ಬಿ.ವಿ. ರವಿಚಂದ್ರ ನಿರೂಪಿಸಿದರು.