ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ವಿರುಪಾಕ್ಷಯ್ಯ ಗೋರ್ಟಾ ಇನ್ನಿಲ್ಲ

ಬಸವಕಲ್ಯಾಣ:ಎ.27: ಹಿಂದುಸ್ತಾನಿ ಸಂಗೀತ ಕ್ಷೇತ್ರದಲ್ಲಿ ಮಹತ್ವದ ಸಾಧನೆಗೈದಿದಕ್ಕಾಗಿ 2012-13ನೇ ಸಾಲಿನ ರಾಜ್ಯ ಸರ್ಕಾರದ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪಡೆದಿದ್ದ ವಿರೂಪಾಕ್ಷಯ್ಯ ಗೋರಟಾ (96) ಭಾನುವಾರ ರಾತ್ರಿ ನಿಧನರಾದರು.

ಅವರಿಗೆ ಒಬ್ಬ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಸೋಮವಾರ ಸ್ವಗ್ರಾಮ ಹುಲಸೂರ ತಾಲ್ಲೂಕಿನ ಗೋರಟಾದಲ್ಲಿ ಅಂತ್ಯಕ್ರಿಯೆ ನಡೆಯಿತು.

ಸಾಹಿತಿ, ನಾಟಕಕಾರ, ರಂಗಭೂಮಿ ಕಲಾವಿದ ಆಗಿದ್ದ ಅವರು,’ಹೈದರಾ ಬಾದ್ ಕರ್ನಾಟಕದ ಜಲಿಯನ ವಾಲಾಬಾಗ ಗೋರಟಾಹತ್ಯಾಕಾಂಡ’ ‘ಭುಲಾಯಿ ಪದಗಳು’, ‘ಕೋಲಾಟದ ಪದಗಳು’, ‘ರೇಣುಕ ವಿಜಯ’, ‘ಗುರು ಗಾನಪ್ರಭೆ’, ‘ಭಕ್ತಿ ಕುಸುಮಾಂಜಲಿ’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಸಂಗೀತ ರುದ್ರ ಸಂಘ ಕಟ್ಟಿ ಅನೇಕ ಕಡೆ ಸಂಗೀತಕಛೇರಿಗಳನ್ನು ನೀಡಿದ್ದಾರೆ.