ಕರ್ನಾಟಕ ಒನ್ ಸೇವಾ ಕೇಂದ್ರ ಉದ್ಘಾಟನೆ


ಬ್ಯಾಡಗಿ,ಜ.21: ಕರ್ನಾಟಕ ಒನ್ ಪೆÇೀರ್ಟಲ್ ಒಂದು ಆನ್‍ಲೈನ್ ಪ್ಲಾಟ್‍ಫಾರ್ಮ್ ಆಗಿದ್ದು, ಇದು ಒಂದೇ ಪೆÇೀರ್ಟಲ್ ಅಡಿಯಲ್ಲಿ ನಾಗರಿಕ-ಕೇಂದ್ರಿತ ಸೇವೆಗಳನ್ನು ಸುಲಭಗೊಳಿಸಲು ಕರ್ನಾಟಕ ಸರ್ಕಾರದಿಂದ ಸ್ಥಾಪಿಸಲ್ಪಟ್ಟಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ಪಟ್ಟಣದಲ್ಲಿ ನೂತನವಾಗಿ ಪ್ರಾರಂಭಿಸಿರುವ ಕರ್ನಾಟಕ ಒನ್ ಸೇವಾ ಕೇಂದ್ರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರವು ನೀಡುವ ಎಲ್ಲಾ ಸೇವೆಗಳನ್ನು ಪ್ರವೇಶಿಸಲು ಜನರು ಪೆÇೀರ್ಟಲ್‍ನಲ್ಲಿ ನೋಂದಾಯಿಸಿಕೊಳ್ಳಬಹುದು. ಈ ಸೇವೆಗಳನ್ನು ಕರ್ನಾಟಕ ಸರ್ಕಾರವು ಒದಗಿಸುವ ಸರ್ಕಾರದಿಂದ ನಾಗರಿಕರಿಗೆ (ಉ2ಅ) ಸೌಲಭ್ಯಗಳ ಅಡಿಯಲ್ಲಿ ಸಂಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸುರೇಶಗೌಡ ಪಾಟೀಲ, ಪುರಸಭಾಧ್ಯಕ್ಷೆ ಫಕ್ಕೀರಮ್ಮ ಚಲುವಾದಿ, ಉಪಾಧ್ಯಕ್ಷೆ ಮಲ್ಲಮ್ಮ ಪಾಟೀಲ, ಸದಸ್ಯರಾದ ಗಾಯತ್ರಿ ರಾಯ್ಕರ್, ಚಂದ್ರಪ್ಪ ಶೆಟ್ಟರ, ಗಿರಿಜಮ್ಮ ಪಟ್ಟಣಶೆಟ್ಟಿ, ಮುಖಂಡರಾದ ಸುರೇಶ ಯತ್ನಳ್ಳಿ, ಎಸ್.ಎನ್.ಯಮುನಕ್ಕನವರ, ನ್ಯಾಯವಾದಿಗಳಾದ ಚಂದ್ರಪ್ಪ ಕಾರಗಿ, ಪ್ರವೀಣ ಹಿರೇಮಠ, ಕೆ.ಡಿ.ಪಾಟೀಲ, ಸೇವಾ ಕೇಂದ್ರದ ಶಿಲ್ಪಾ ಕುಲಕರ್ಣಿ, ಎಸ್.ಆರ್.ಕುಲಕರ್ಣಿ, ಮಯೂರ ಪಾಟೀಲ, ಪ್ರವೀಣ ಕುಲಕರ್ಣಿ, ಪ್ರಶಾಂತ ಕುಲಕರ್ಣಿ, ಪ್ರೀಯಾ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.