ಕರ್ನಾಟಕ ಅತ್ಯಂತ ಸಂಪತ್ ಭರಿತ ನಾಡು

ದಾವಣಗೆರೆ.ನ.೧೬;-ಕರ್ನಾಟಕ ರಾಜ್ಯ ಅತ್ಯಂತ ಸಂಪತ್ ಭರಿತವಾದ ನಾಡು. ನಮ್ಮ ಕನ್ನಡ ನಾಡಿನಲ್ಲಿ ಸಾಹಿತ್ಯ, ಕಲೆ ವಾಸ್ತುಶಿಲ್ಪಕ್ಕೆ ಕನ್ನಡ ನಾಡನ್ನಾಳಿದ ಅನೇಕ ರಾಜವಂಶಸ್ಥರ ಕೊಡುಗೆ ಅಪಾರವಾಗಿದೆ ಎಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ. ವಾಮದೇವಪ್ಪ  ತಿಳಿಸಿದರು.ಅವರು ದಾವಣಗೆರೆ ನಗರದ ಲೋಕಿಕರೆ ರಸ್ತೆಯಲ್ಲಿರುವ ಲಲಿತಾ ಇಂಟರ್ ನ್ಯಾಷನಲ್  ಪಬ್ಲಿಕ್ ಸ್ಕೂಲ್ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ 67ನೇ ಕರ್ನಾಟಕ ರಾಜ್ಯೋತ್ಸವದ ಹಾಗೂ ಮಕ್ಕಳ ದಿನಾಚರಣೆಯ ಸಮಾರಂಭದಲ್ಲಿ  ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.ಭಾರತ ದೇಶದ ಪ್ರಥಮ ಪ್ರಧಾನ ಮಂತ್ರಿಯಾಗಿದ್ದ  ಪಂಡಿತ್ ಜವಾಹರ್ ಲಾಲ್ ನೆಹರು ಹುಟ್ಟು ಹಬ್ಬದ ಅಂಗವಾಗಿ  ಆಚರಿಸಲ್ಪಡುವ ಮಕ್ಕಳ ದಿನಾಚರಣೆಯನ್ನು ಕುರಿತು ನೆಹರುರವರ ಸ್ವತಂತ್ರ ಹೋರಾಟ ಹಾಗೂ  ನಂತರದ ದಿನಗಳಲ್ಲಿ ಭಾರತದ ಪ್ರಥಮ ಪ್ರಧಾನಮಂತ್ರಿಯಾಗಿ ದೇಶಕ್ಕೆ ಕೊಟ್ಟ ಕೊಡುಗೆಗಳನ್ನು ಸಹ ಸಂಕ್ಷಿಪ್ತವಾಗಿ ತಿಳಿಸಿದರು.ನಾಡು ನುಡಿ ಬಿಂಬಿಸುವಂತ ಅನೇಕ ಸಾಂಸ್ಕೃತಿಕ ನೃತ್ಯ ರೂಪಕಗಳನ್ನು   ವಿದ್ಯಾರ್ಥಿಗಳು ನಡೆಸಿಕೊಟ್ಟ ಎಲ್ಲರ ಮೆಚ್ಚುಗೆಗೂ ಪಾತ್ರರಾದರು.  ಕಾಲೇಜಿನ ಪ್ರಾಚಾರ್ಯರಾದ ಮಣಿಕಂಠನ್ ಅವರು ಮೂಲತಹ ಕೇರಳದ ಮಲಯಾಳಿ ಮಾತೃಭಾಷಿಕರಾಗಿದ್ದರು ಸಹ ” ಹಚ್ಚೇವು ಕನ್ನಡದ ದೀಪ” ಎಂಬ ಹಾಡು ಹೇಳುವುದರ ಮೂಲಕ ಎಲ್ಲರ ಪ್ರಶಂಸೆಗೆ  ಪಾತ್ರರಾದರು. ಪ್ರಾಸ್ತಾವಿಕವಾಗಿ ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀಮತಿ  ಎಂ ಇ ಸುಮಾ ಅವರು ನಾಡಿನ ಬಗ್ಗೆ ಅಭಿಮಾನದ ಮಾತುಗಳನ್ನು ಹಾಡಿದರು. ಅಧ್ಯಕ್ಷತೆಯನ್ನು ಸಂಸ್ಥೆ ಆಡಳಿತ ಅಧಿಕಾರಿ ಜಿ. ಪಿ ಸುರೇಶ್ ರವರು ವಹಿಸಿದ್ದರು. ಕನ್ನಡ ನಾಡನ್ನು ಕುರಿತು ವಿದ್ಯಾರ್ಥಿ ಎಂ ಲಕ್ಷ್ಮಿ  ಮಾತನಾಡಿದರು.ಕಾರ್ಯಕ್ರಮದ ಅಂತ್ಯದಲ್ಲಿ ಶಶಿ ಎಜುಕೇಶನಲ್ ಟ್ರಸ್ಟ್  ಅಧ್ಯಕ್ಷರಾದ ಈ ಆರ್ ಶಶಿಕಲಾ ಗೌರವ ಕಾರ್ಯದರ್ಶಿಗಳಾದ ಡಾ.ರವಿರಾಜ್ ಎಂ ಇ ಉಪಸ್ಥಿತರಿದ್ದರು.