ವರದಿ ಅರಳಿ ಕುಮಾರಸ್ವಾಮಿ
ಸಂಡೂರು :ಜು:28 ಖ್ಯಾತ ವಕೀಲರು ಪ್ರಭುದೇವರ ಜನ ಕಲ್ಯಾಣ ಸಂಸ್ಥೆಯ ಕಾರ್ಯದರ್ಶಿಗಳು ಆದ ಗುಡೇಕೋಟೆ ನಾಗರಾಜ ರವರ ಪುತ್ರ ವಿವೇಕ್ ಗುಡೆಕೋಟೆಯವರು ಖರಗ್‍ಪುರದ ಪ್ರತಿಷ್ಠಿತ ಇಂಡಿಯನ್ ಇನ್ಸ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಭೌತಿಕ ಸಂಪತ್ತು ಕಾನೂನುಗಳಲ್ಲಿ ವಿಶೇಷತೆಯೊಂದಿಗೆ ಎಲ್.ಎಲ್.ಬಿ. ಕಾರ್ಯಕ್ರಮಕ್ಕೆ ಅರ್ಹತೆ ಪಡೆದಿದ್ದಾರೆ. IIಖಿ ಖರ್ಗಾಪುರ 2023ರಲ್ಲಿ ನಡೆದ ಅಖಿಲ ಬಾರತ ಪಿ.ಜಿ./ ಎಲ್.ಎಲ್.ಬಿ ಪ್ರವೇಶ ಪರೀಕ್ಷೆಯಲ್ಲಿ ಇಡೀ ದೇಶದಲ್ಲಿ ಕೇವಲ 56 ಮಾತ್ರ ಆಯ್ಕೆಯಾಗಿದ್ದು, ಲಿಂಗಾಯತ ಸಮಾಜದ ವಿವೇಕ ಗುಡೇಕೊಟೆಯವರು ದೇಹಲಿಯಲ್ಲಿ ಕೇಂದ್ರ ನಾಗರೀಕ ಸೇವೆಗಳ ಪರೀಕ್ಷೆಗೆ ತಯಾರಿ ನಡೆಸುತ್ತಿರುವಾಗ ಅರ್ಹತೆ ಪಡೆದಿದ್ದಾರೆ.
ವಿವೇಕ್ ಗುಡೆಕೊಟೆಯವರು ಬಳ್ಳಾರಿ ಜಿಲ್ಲೆಯಿಂದ ಅರ್ಹತೆ ಪಡೆದ ಮೊದಲನೆ ವ್ಯಕ್ತಿ ಮಾತ್ರವಲ್ಲ. ಕರ್ನಾಟಕವನ್ನು ಪ್ರತಿನಿಧಿಸುವ ಎಕೈಕ ವ್ಯಕ್ತಿ ಐ.ಐ.ಟಿ. ಖರ್ಗಾಪುರವು ರಾಷ್ಟ್ರೀಯ ಮತ್ತು ಅಂತರಾಷ್ಟೀಯ ಪುರಸ್ಕಾರಗಳನ್ನು ಹೊಂದಿರುವ ಹೆಮ್ಮೆಯ ಹಳೆ ವಿದ್ಯಾರ್ಥಿಗಳ ಪರಂಪರೆಯನ್ನ ಹೊಂದಿದೆ. ಅವರಲ್ಲಿ ಸುಂದರ್ ಪಿಚೈ ಸಿ.ಇ.ಓ ಗೂಗಲ್ (ಅರುಣಾ ಸರಿನ್ (ಸಿ.ಇ.ಓ ಓಡೋಫೋನ್) ಕೆ. ರಾಧಕೃಷ್ಣನ್ ಇಸ್ಕೋ ಅಧ್ಯಕ್ಷರು ಅರವಿಂದ ಕ್ರೇಜಿವಾಲ ಐ.ಆರ್.ಎಸ್. ದೆಹಲಿ ಸಿ.ಎಂ.) ಅಡ್ವಕೇಟ್ ಜೆ. ಶಾಯಿ ದೀಪಕ್ ಭಾರತದ ಸುಪ್ರಿಮ್ ಕೋರ್ಟ್) ಅನೇಕರಲ್ಲಿ ಕೆಲವೊಮ್ಮೆ ಹೆಸರಿಸುವುದಾದರೆ ಗುಡೇಕೊಟೆ ವಿವೇಕ್ ಒಬ್ಬರಾಗಿದ್ದಾರೆ.