ಕರ್ನಾಟಕದ ಅಂಬೇಡ್ಕರ್ ಬಿ.ಬಸವಲಿಂಗಪ್ಪನವರ ಕೊಡುಗೆ ಅವಿಸ್ಮರಣೀಯ

ಕಲಬುರಗಿ:ಎ.21: ಡಾ.ಬಾಬಾಸಾಹೇಬ್ ಅಂಬೇಡರ್ ಅವರು ದೀನ-ದಲಿತ ಶೋಷಿತ ವರ್ಗದವರಿಗೆ ಶ್ರಮಿಸುವ ಮೂಲಕ ಅಚ್ಚಳಿಯದೇ ಉಳಿದಿದ್ದಾರೆ. ಅವರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಕರ್ನಾಟಕದಲ್ಲಿ ಶೋಷಿತ ಸಮುದಾಯಕ್ಕೆ ಸ್ವಾಭಿಮಾನದ ಬದುಕು ಕಲ್ಪಿಸಿಕೊಡಲು ನಿರಂತರವಾಗಿ ಶ್ರಮಿಸುವ ಮೂಲಕ ಬಿ.ಬಸವಲಿಂಗಪ್ಪನವರು ಕರ್ನಾಟಕದ ಅಂಬೇಡ್ಕರ್ ಎಂದು ಖ್ಯಾತಿ ಪಡೆದಿದ್ದಾರೆ. ಅವರು ನೀಡಿರುವ ಕೊಡುಗೆ ಅವಿಸ್ಮ್ಮರಣೀಯವಾಗಿದ್ದು, ದಲಿತ ಮುದಾಯ ಎಂದಿಗೂ ಕೂಡಾ ಮರೆಯುವಂತಿಲ್ಲವೆಂದು ಸಮಾಜ ಸೇವಕ ಸುನೀಲಕುಮಾರ ವಂಟಿ ಅಭಿಮತ ವ್ಯಕ್ತಪಡಿಸಿದರು.

ನಗರದ ಜಗತ್ ಬಡಾವಣೆಯ ಭೀಮ ನಗರದಲ್ಲಿ ‘ಜೈ ಭೀಮ ಸೇನೆ ಸಮಾಜ ಸೇವಾ ಬಳಗ’ದಿಂದ ಬುಧವಾರ ಸರಳವಾಗಿ ಜರುಗಿದ ‘ಬಿ.ಬಸವಲಿಂಗಪ್ಪನವರ ಜನ್ಮಶತಮಾನೋತ್ಸವ ಆಚರಣೆ’ಯಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.

   ಪೌರಾಡಳಿತ ಸಚಿವರಾಗಿ ಮಲಹೊರುವ ಪದ್ಧತಿಯನ್ನು ನಿಷೇಧಿಸುವ ಕ್ರಾಂತಿಕಾರಕ ಕಾರ್ಯವನ್ನು ಮಾಡಿದ್ದಾರೆ. ಭೂಸುಧಾರಣೆ, ಭೂ ರಹಿತರಿಗೆ ಭೂಮಿ ಹಂಚಿಕೆ, ಪರಿಷ್ಟರ ಭೂಮಿ ರದ್ದತಿ ಕಾನೂನು, ಜೀತಮುಕ್ತಿ ಕಾನೂನು ಸೇರಿದಂತೆ ಅನೇಕ ಜನಪರ ಕಾರ್ಯಗಳನ್ನು ಮಾಡಿದ್ದಾರೆ. ದಲಿತರಲ್ಲಿ ವೈಚಾರಿಕತೆ ಮೂಡಿಸುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಅವರ ಮಾರ್ಗದಲ್ಲಿ ದಲಿತ ವರ್ಗ ಸಾಗಬೇಕಾಗಿದೆಯೆಂದು ಮಾರ್ಮಿಕವಾಗಿ ನುಡಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಸುಭಾಚ ಫರತಾಬಾದ, ಜಗದೀಶ ವಳಕೇರಿ, ಎಚ್.ಬಿ.ಪಾಟೀಲ, ಬಸವರಾಜ ಎಸ್.ಪುರಾಣೆ, ಸಂಬಣ್ಣ ಪುಟಗಿ, ನಾಗೇಶ ಸರಡಗಿ, ಅಂಬಣ್ಣ ಕೊಲ್ಲೂರ್, ಈಶ್ವರ ಫರತಾಬಾದ, ಜ್ಞಾನಪ್ರಕಾಶ ಮೂಲಭಾರತಿ, ಸಂದೀಪ ಭರಣಿ, ವಿಕ್ಕಿ ಭಾಸ್ಕರ್, ರಾಜೇಂದ್ರ ವಂಟಿ, ಜಗನಾಥ ವಂಟಿ, ಸಿದ್ದಾರ್ಥ ಸಂಕಾ, ಗೌತಮ, ಶುಭಂ, ಸತೀಷ, ಅಗರ್ ಹುಬಳಿ, ಮೌನೇಶ, ಅನೀಲಕುಮಾರ ಮೈಸಲಗಿ ಇದ್ದರು.