ಕರ್ನಾಟಕದಲ್ಲಿ ಹಿಂದೂಗಳ ಹತ್ಯೆಗೆ ಖಂಡನೆ, ಹಿಂದೂಗಳ ರಕ್ಷಣೆಗೆ ಆಗ್ರಹ

(ಸಂಜೆವಾಣಿ ವಾರ್ತೆ)
ವಿಜಯಪುರ :ಜು.15: ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಬೆನ್ನಲ್ಲೇ ಹಿಂದೂ ಕಾರ್ಯಕರ್ತರ ಮೇಲೆ ವಿವಿಧ ರೀತಿಯ ಆಕ್ರಮಣಗಳು ಹೆಚ್ಚಾಗಿವೆ. ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿ ಅವರಿಗೆ ಥಳಿಸುವುದು ಮತ್ತು ಭಯ ನಿರ್ಮಾಣ ಮಾಡುವ ಪ್ರಕ್ರಿಯೆ ನಡೆಯುತ್ತಿವೆ, ಜೈನ ಮುನಿ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರು ಮತ್ತು ಯುವ ಬ್ರಿಗೇಡ್ ನ ಶ್ರೀ. ವೇಣುಗೋಪಾಲ ಇವರ ಹತ್ಯೆ, ಸೇರಿದಂತೆ ಇನ್ನೂ ಹಲವಾರು ಘಟನೆಗಳು ಹಿಂದೂ ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದೆ. ಅಷ್ಟೇ ಅಲ್ಲದೆ ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ಪ್ರತಿ ರವಿವಾರ ನಡೆಯುತ್ತಿದ್ದ ನಾಗರಕಟ್ಟೆಯ ಪೂಜೆಗೆ ಪೆÇಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಬಕ್ರೀದ್ ಸಮಯದಲ್ಲಿ ಬಾದಾಮಿ, ಶಿಕಾರಿಪುರ, ಶಿರಸಿ ಸೇರಿದಂತೆ ಹಲವೆಡೆ ಅಕ್ರಮವಾಗಿ ಗೋಹತ್ಯೆ ಮಾಡಿ, ಗೋವಿನ ಎಲಬುಗಳನ್ನು ದೇವಸ್ಥಾನ, ಹಿಂದೂ ಮನೆಗಳ ಎದುರು ಎಸೆದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿದ್ದಾರೆ, ಹಾಗಾಗಿ ಹಿಂದೂ ಕಾರ್ಯಕರ್ತರಿಗೆ, ಹಿಂದೂ ಧರ್ಮಕ್ಕೆ ಹೋರಾಟ ಮಾಡುವವರಿಗೆ ರಕ್ಷಣೆ ನೀಡಬೇಕು, ಹಿಂದೂಗಳ ಮೇಲೆ ಆಕ್ರಮಣ ಮಾಡುವವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಮತ್ತು ಹಿಂದೂ ಪರಸಂಘಟನೆ ವತಿಯಿಂದ ವಿಜಯಪುರದ ಜಿಲ್ಲಾಧಿಕಾರಿಗಳಾದ ಟಿ. ಬೂಬಾಲನ್ ಇವರ ಮೂಲಕ ಮಾನ್ಯ ರಾಜ್ಯಪಾಲರಿಗೆ ಮನವಿಯನ್ನೂ ಸಲ್ಲಿಸಲಾಯಿತು.
ಮತ್ತು ಈ ಸಂದರ್ಭದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ವಕ್ಫ್ ಬೋರ್ಡ್ ತನ್ನ ಕಾನೂನನ್ನು ದುರುಪಯೋಗ ಪಡಿಸಿಕೊಂಡು ಸರಕಾರಿ ಮತ್ತು ಖಾಸಗಿ ಜಮೀನುಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದೆ. ಆ ಮೂಲಕ ದೇಶದಲ್ಲಿ 8 ಲಕ್ಷ ಎಕರೆ ಜಮೀನನ್ನು ಕಬಳಿಸಿದೆ. ಇದೊಂದು ದೊಡ್ಡ ‘ಲ್ಯಾಂಡ್ ಜಿಹಾದ್’ ಆಗಿದೆ. ಹಾಗಾಗಿ ಈ ಕಾನೂನನ್ನು ರದ್ದುಗೊಳಿಸಿ ಜಮೀನಿನ ನಿಜವಾದ ಮಾಲೀಕರಿಗೆ ಅದರ ಅಧಿಕಾರವನ್ನು ನೀಡಬೇಕು. ದೇಶದಲ್ಲಿ ‘ಸಮಾನ ನಾಗರಿಕ ಕಾನೂನು’ ಜಾರಿಗೆ ತರುವ ಮೂಲಕ ಅಲ್ಪಸಂಖ್ಯಾತರ ಹೆಸರಿನಲ್ಲಿ ಜಾರಿಯಲ್ಲಿರುವ ಎಲ್ಲಾ ವಿಶೇಷ ಸೌಲಭ್ಯಗಳು, ಕಾನೂನುಗಳು, ಆಯೋಗಗಳು, ಮಂಡಳಿಗಳು, ಸರಕಾರಿ ಇಲಾಖೆಗಳನ್ನು ರದ್ದುಪಡಿಸಬೇಕು ಮತ್ತು ಎಲ್ಲರಿಗೂ ಸಮಾನ ನಡವಳಿಕೆ ಸಿಗುವಂತಾಗಬೇಕು. ಈ ಬೇಡಿಕೆಗಳನ್ನು ಅಂಗೀಕರಿಸದಿದ್ದರೆ ‘ವಕ್ಫ್ ಕಾನೂನು’ ವಿರುದ್ಧ ಪ್ರಬಲ ಚಳವಳಿ ನಡೆಸಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಸಲಾಯಿತು.
ಈ ಸಂದರ್ಭದಲ್ಲಿ ಜೈನ್ ಸಮಾಜದ ಉಪಾಧ್ಯಕ್ಷರಾದ ಶ್ರೀ. ಮಾನಿಕ ತೋಸನಿವಾಲ, ಶ್ರೀ ಶಾಮ್ ಸುಂದರ್, ವೇದ ವೇದಾಂತ ಸಮಿತಿಯ, ಶ್ರೀ. ಪ್ರಕಾಶ ಠಾಕೂರ, ಶ್ರೀ. ಸುಭಾಷ ಕತ್ರಿ , ಶ್ರೀ ಸಂಗನಗೌಡ ಬಾ ಪಾಟೀಲ, ಡಾ. ಶ್ರೀ. ರಮೇಶ ಬಿರಾದಾರ, ಶ್ರೀ. ಜಯಂತ ಮುತ್ತಗಿಕರ, ಶ್ರೀ. ಬಿಳಿಯನಸಿದ್ಧ ಒಡಿಯರ, ಮತ್ತು ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕರಾದ ಶ್ರೀ. ವೆಂಕಟರಮಣ ನಾಯಕ, ಶ್ರೀ ಮಲ್ಲಿಕಾರ್ಜುನ್ ಬೊಮ್ಮರೆಡ್ಡಿ , ಶ್ರೀ ಲಕ್ಷ್ಮಣ ಇಂಗಳೇ, ಹಾಗೂ ಸೌ. ಕವಿತಾ ಕೋಲಾರ್, ಶ್ರೀಮತಿ. ಗಂಗಾ ವಠಾರ ಇವರು ಉಪಸ್ಥಿತರಿದ್ದರು.