ಕರ್ನಾಟಕದಲ್ಲಿ ಮರಾಠಾ ಪ್ರಾಧಿಕಾರ ರಚನೆ ವಿರೋಧಿಸಿ ಪ್ರತಿಭಟನೆ

ಮೈಸೂರು, ನ.17: ಕರ್ನಾಟಕದಲ್ಲಿ ಮರಾಠಾ ಪ್ರಾಧಿಕಾರ ರಚಿಸುವುದನ್ನು ವಿರೋಧಿಸಿ ಮೈಸೂರು ಕನ್ನಡ ವೇದಿಕೆ ಪ್ರತಿಭಟನೆ ನಡೆಸಿತು.
ಇಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಇತ್ತೀಚೆಗೆ ರಾಜ್ಯ ಸರ್ಕಾರಬ ಮರಾಠಾ ಪ್ರಾಧಿಕಾರ ರಚನೆಯನ್ನು ಘೋಷಿಸಿದ್ದು ಅದನ್ನು ನಾವು ಖಂಡಿಸುತ್ತೇವೆ ಎಂದರು. 1956ರ ನವೆಂಬರ್ ತಿಂಗಳಿನಲ್ಲಿ ದಕ್ಷಿಣ ಭಾರತದಲ್ಲಿ ಕನ್ನಡ ಮಾತಾಡುವ ಜನರನ್ನು ಹಾಗೂ ಹರಿದು ಹಂಚಿಹೋಗಿದ್ದ ಕನ್ನ ಡಿಗರನ್ನು ಒಂದು ಗೂಡಿಸಿ ಅಖಂಡ ಕರ್ನಾಟಕ ಎಂದು ಘೋಷಣೆ ಮಾಡಿದ ಪವಿತ್ರ ದಿನ ಸ್ವಾಭೀಮಾನಿ ಕನ್ನಡಿಗರ ನಾಡಹಬ್ಬ. ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಾರೆ. ಆಗ ಹೈದ್ರಾಬಾದ್ ಕರ್ನಾಟಕ, ಮೈಸೂರು ರಾಜ್ಯ ಮತ್ತು ಮದ್ರಾಸ್ ಪ್ರಾಂತ್ಯ ಎಂದು ವಿಂಗಡಣೆಯಾಗಿತ್ತು. ವಿಪರ್ಯಾಸವೆಂದರೆ ಮುಖ್ಯಮಂತ್ರಿಗಳು ಕನ್ನಡ ನಾಡಿನ ಇತಿಹಾಸವನ್ನು ಅರಿತಿದ್ದರೆ ಇಂಥಹ ಕೆಲಸಕ್ಕೆ ಕೈಹಾಕುತ್ತಿರಲಿಲ್ಲ. ಈಗಾಗಲೇ ಕರ್ನಾಟಕದ ಗಡಿ ಜಿಲ್ಲೆಯಾದ ಬೆಳಗಾವಿಯಲ್ಲಿ ಮರಾಠಿಗರ ಉಪಟಳ ಹೆಚ್ಚಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಬೆಳಗಾವಿಯಲ್ಲಿ ಕನ್ನಡ ಧ್ವಜವನ್ನು ಹಾರಿಸಬೇಕಾದರೆ ಆರಕ್ಷಕರ ಭದ್ರತೆಯಲ್ಲಿ ಹಾರಿಸುವುದು ಸರ್ವೇ ಸಾಮಾನ್ಯವಾಗಿದೆ. ಎಂ.ಇ.ಎಸ್ ಕಾರ್ಯಕರ್ತರ ಪುಂಡಾಟಿಕೆಗೆ ಕಡಿವಾಣ ಹಾಕಬೇಕಾದ ರಾಜ್ಯ ಸರ್ಕಾರ ಕೇವಲ ತನ್ನ ಅಧಿಕಾರಕ್ಕಾಗಿ ಕೊರೋನಾದಿಂದ ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ಬರಿದು ಮಾಡಿ ಮತ ಬ್ಯಾಂಕ್ ರಾಜಕಾರಣ ಮಾಡಲು ಕರ್ನಾಟಕದಲ್ಲಿ ಮರಾಠಿ ಪ್ರಾಧಿಕಾರವನ್ನು 50ಕೋಟಿ ರೂ.ವೆಚ್ಚದಲ್ಲಿ ಸ್ಥಾಪನೆ ಮಾಡಲು ಹೊರಟಿರುವುದು ಯಾವ ಪುರುಷಾರ್ಥಕ್ಕೆ? ಕನ್ನಡ ಪ್ರಾಧಿಕಾರವೇ ನೆಪ ಮಾತ್ರಕ್ಕೆ ಇದ್ದು ಇದರಿಂದ ಗಡಿ ಪ್ರದೇಶದಲ್ಲಿ ಕನ್ನಡ ಭಾಷೆ, ಕನ್ನಡ ಶಾಲೆಗಳುಎಷ್ಟರ ಮಟ್ಟಿಗೆ ಅಭಿವೃದ್ಧಿಯಾಗಿದೆ ಎಂಬುದೇ ಯಕ್ಷಪ್ರಶ್ನೆ ಎಂದರು.
ಈ ಸಂದರ್ಭದಲ್ಲಿ ಕನ್ನಡಕ್ಕೆ ಕಂಟಕವಾಗಿರುವ ಮರಾಠಿ ಪ್ರಾಧಿಕಾರದ ಅವಶ್ಯಕತೆ ಇದೆಯೇ? ಎಂಬುದನ್ನು ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸರ್ಕಾರ ಈ ಕೂಡಲೇ ಈ ಅವೈಜ್ಞಾನಿಕ ನಿರ್ಧಾರವನ್ನು ಕೈಬಿಟ್ಟು ಕರ್ನಾಟಕದ ಕನ್ನಡಿಗರ ಕನ್ನಡನಾಡಿನ ಮುಖ್ಯಮಂತ್ರಿಗಳು ಕನ್ನಡ ಅಭಿವೃದ್ಧಿಯ ಬಗ್ಗೆ ಚಿಂತಿಸಬೇಕೆಂದು ಆಗ್ರಹಿಸಿದೆ.
ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಬಟನೆಯಲ್ಲಿ ವೇದಿಕೆಯ ಅಧ್ಯಕ್ಷ ಎಸ್.ಗೋಪಾಲಕೃಷ್ಣ, ಮುಖಂಡರುಗಳಾದ ನಾಲಾಬೀದಿ ರವಿ, ಬೋಗಾದಿ ಸಿದ್ದೇಗೌಡ, ಗುರುಬಸಪ್ಪ, ಪ್ಯಾಲೇಸ್ ಬಾಬು, ಗೋಪಿ, ಪರಿಸರಚಂದ್ರು, ಬೀಡಾಬಾಬು, ಸುನೀಲ್, ಸ್ವಾಮಿಗೈಡ್, ಸೀಮೆಣ್ಣ ಮಾದಪ್ಪ, ಅರವಿಂದ ಮತ್ತಿತರರು ಪಾಲ್ಗೊಂಡಿದ್ದರು.