ಕರ್ನಾಟಕದಲ್ಲಿ ಕಾಂಗ್ರೆಸ್ ಧೂಳಿ ಪಟ

ಮಸ್ಕಿ.ನ.೧೩- ಬಿಜೆಪಿ ಅಲೆಯಲ್ಲಿ ಕರ್ನಾಟದಲ್ಲಿ ಕಾಂಗ್ರೆಸ್ ಧೋಳಿ ಪಟ ಆಗಿದೆ ಮುಂಬರುವ ಉಪ ಚುನಾವಣೆ ಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ವಿಜಯದ ಪತಾಕೆ ಹಾರಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ರವಿ ಕುಮಾರ್ ಹೇಳಿದರು .
ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಶುಕ್ರವಾರ ಮಾತನಾಡಿದರು. ಎತ್ತು ಕೆರೆಗೆ ಎಮ್ಮೆ ನೀರಿಗೆ ಎಂಬ ಪರಿಸ್ಥಿತಿ ಕಾಂಗ್ರೆಸ್ ಮುಖಂಡರಿಗೆ ಬಂದಿದೆ ಕಾಡಾ ಅಧ್ಯಕ್ಷ ಸ್ಥಾನ ಕೊಟ್ಟರು ಬಸನಗೌಡ ತುರ್ವಿಹಾಳ ಪಕ್ಷಕ್ಕೆ ದ್ರೋಹ ಮಾಡಿ ಕಾಂಗ್ರೆಸ್ ಸೇರಿದ್ದಾರೆ ಉಪ ಚುನಾವಣೆಯಲ್ಲಿ ಪ್ರತಾಪಗೌಡರ ಗೆಲುವು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಕ್ಷೇತ್ರದ ಉಪ ಚುನಾವಣೆ ಘೋಷಣೆಗೆ ಮೊದಲು ಈ ಭಾಗದ ರೈತರ ಬಹು ದಿನದ ಬೇಡಿಕೆ ಎನ್ ಆರ್ ಬಿಸಿ ೫ಎ. ಶಾಖಾ ಕಾಲುವೆ ಅನುಷ್ಟಾನ ಗೊಳಿಸುವಂತೆ ಮುಖ್ಯ ಮಂತ್ರಿ ಯಡಿಯೂರಪ್ಪ ಅವರಿಗೆ ಒತ್ತಾಯಿಸಿಲು ರೈತರ ನಿಯೋಗ ಬೆಂಗಳೂರಿಗೆ ಕರೆದೊಯ್ಯುವೆ ರೈತರು ಆತಂಕ ಪಡಬೇಕಾಗಿಲ್ಲ ರಾಜ್ಯದಲ್ಲಿ ಬಿಜೆಪಿ ಮತ್ತು ಸರಕಾರ ಜೋಡೆತ್ತು ಗಳಾಗಿ ಕೆಲಸ ಮಾಡುತ್ತಿವೆ ಜನ ಪರ ಆಡಳಿತ ಕಂಡು ಆರ್ ಆರ್. ನಗರ ಮತ್ತು ಶಿರಾ ವಿಧಾನ ಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿದೆ ಎಂದು ರವಿ ಕುಮಾರ್ ಹೇಳಿದರು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್,ಬಿಜೆಪಿ ಜಿಲ್ಲಾಧ್ಯಕ್ಷ ರಮಾನಂದ ಯಾದವ, ಮಾಜಿ ಶಾಸಕ ಮಾನಪ್ಪ ವಜ್ಜಲ್, ಮಂಡಲ ಅಧ್ಯಕ್ಷ ಶಿವ ಪುತ್ರ ಅರಳಿ ಹಳ್ಳಿ ಸೇರಿದಂತೆ ಅನೇಕ ಮುಖಂಡರಿದ್ದರು.