ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನ

ಹೊನ್ನಾಳಿ.ಮೇ.೨; ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನವೇ ಹೊರತು ಬೇರೆ ಭಾಷೆಗಳಿಗಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತು ನಿರ್ದೇಶಕ ರಾಮೇಶ್ವರ ಚಂದ್ರೇಗೌಡ ಹೇಳಿದರು.ನ್ಯಾಮತಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿರುವ ಕನ್ನಡ ಸಾಹಿತ್ಯ ಪರಿಷತ್ತು ನಿರ್ದೇಶಕರ ಮನೆಯ ಮೇಲೆ ಶಾಶ್ವತಕನ್ನಡಧ್ವಜ ಹಾರಿಸುವ ವಿನೂತನಕಾರ್ಯಕ್ರಮಕ್ಕೆ ರಾಮೇಶ್ವರದ ಅವರ ಮನೆಯಲ್ಲಿಧ್ವಜ ಹಾರಿಸಿ ಮಾತನಾಡಿದರು.ಮಲ್ಲಿಗೇನಹಳ್ಳಿ ಜಿ. ಕುಬೇರಪ್ಪ ಹಾಗೂ ಕೆಂಚಿಕೊಪ್ಪದ ಎಂ.ಲೋಕೇಶ್ವರಯ್ಯಅವರ ಮನೆಯ ಮೇಲೂ ಸಹಾ ಕನ್ನಡಧ್ವಜವನ್ನು ಹಾರಿಸಲಾಯಿತು.ಈ ಸಂದರ್ಭದಲ್ಲಿಕನ್ನಡ ಸಾಹಿತ್ಯ ಪರಿಷತ್ತುಅಧ್ಯಕ್ಷ ಡಿ.ಎಂ.ಹಾಲಾರಾಧ್ಯ, ನಿಕಟಪೂರ್ವಅಧ್ಯಕ್ಷ ಜಿ. ನಿಜಲಿಂಗಪ್ಪ, ಕಾರ್ಯದರ್ಶಿ ಎಸ್.ಜಿ.ಬಸವರಾಜಪ್ಪ, ಕೋಶಾಧ್ಯಕ್ಷ ಎಂ. ಬಸವರಾಜಪ್ಪ, ನಿರ್ದೇಶಕರಾದಚಂದನ್‌ಜAಗ್ಲೀ, ಅಜೀವ ಸದಸ್ಯರಾದಕೆಂಚಿಕೊಪ್ಪ ಜಿ. ಶಂಕ್ರಪ್ಪ, ರಾಮೇಶ್ವರ ನಾಗರಾಜ, ಶಾಂತಕುಮಾರ,ತೀರ್ಥಪ್ಪ, ಶಶಿಕಲಾ, ಸರ್ವಮಂಗಳಾ, ಉಷಾ,ಗ್ರಾಮ ಪಂಚಾಯಿತಿ ಸದಸ್ಯಜಿ.ಎಚ್.ಗಿರೀಶಇದ್ದರು. ಬಂಡಿಈಶ್ವರಪ್ಪ ಸ್ವಾಗತಿಸಿದರು, ಜಿ. ತೀರ್ಥಲಿಂಗಪ್ಪ ವಂದಿಸಿದರು.Attachments area