ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ: ಉಪನ್ಯಾಸ

ಧಾರವಾಡ,ಮೇ26 : ಬೇರೆ ಬೇರೆ ಕಾರಣಗಳ ಮುಖಾಂತರಇಡೀ ಭಾರತವನ್ನು ಬ್ರಿಟೀಷರು ತಮ್ಮ ಸ್ವಾಧಿನದಲ್ಲಿಇಟ್ಟುಕೊಂಡಿದ್ದರು. ಅನೇಕ ದೇಶಿಯ ಸಂಸ್ಥಾನಗಳನ್ನು ಹೊಂದಿದ್ದ ಭಾರತ 19ನೇ ಶತಮಾನದಷ್ಟೊತ್ತಿಗೆ ಲಾಲ್-ಪಾಲ್-ಬಾಲ', ಮಹಾತ್ಮಾಗಾಂಧೀಜಿಯವರುಇಡೀ ಭಾರತ ಒಂದೇ ಧೋರಣೆಯ ಹಿನ್ನೆಲೆಯಲ್ಲಿ ಅಸಹಕಾರ ಚಳುವಳಿಯ ಮೂಲಕ ರಾಜಕೀಯವನ್ನು ಪ್ರವೇಶ ಮಾಡಿದರು ಎಂದು ಧಾರವಾಡ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಎಸ್. ಎಸ್. ಅಂಗಡಿ ಹೇಳಿದರು. ಅವರುಕರ್ನಾಟಕ ವಿದ್ಯಾವರ್ಧಕ ಸಂಘವು, ದಿ.ಶ್ರೀ ಚಂದಪ್ಪ ಗೋಗಿ ದತ್ತಿಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿಕರ್ನಾಟಕದಲ್ಲಿಉಪ್ಪಿನ ಸತ್ಯಾಗ್ರಹ’ ವಿಷಯಕುರಿತು ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ಸತ್ಯ, ಅಹಿಂಸೆ, ಸ್ವದೇಶಿ ವಸ್ತುಗಳ ಬಳಕೆ, ವಿದೇಶಿ ವಸ್ತುಗಳ ಬಹಿಷ್ಕಾರ ಇವುಗಳ ಮುಖಾಂತರ ಬ್ರಿಟೀಷರನ್ನು ವಿರೋಧಿಸುತ್ತಾ ಬಂದ ಸಂದರ್ಭದಲ್ಲಿ ಚೌರಿ-ಚೌರಾದಂಗೆಯಲ್ಲಿ 22 ಜನ ಪೊಲೀಸರು ಸಾವನ್ನಪ್ಪಿದಾಗ ಗಾಂಧೀಜಿಯವರು ಚಳುವಳಿಯನ್ನು ಹಿಂಪಡೆದರು. ಏಕೆಂದರೆ ಅವರಿಗೆ ಹಿಂಸಾತ್ಮಕವಾದ ಮಾರ್ಗ ಬೇಡವಾಗಿತ್ತು.ಚರಕ, ಖಾದಿಯ ಬಳಕೆ ಜನಪ್ರಿಯವಾಗಿದ್ದವು.ಸ್ವಾತಂತ್ರ್ಯ ಚಳುವಳಿಗೆ ಉಪ್ಪಿನ ಸತ್ಯಾಗ್ರಹ ಪ್ರೇರಕ ಶಕ್ತಿಯಾಗಿ ನಿಂತಿತು. ಬ್ರಿಟೀಷರು ತಂದ ಉಪ್ಪಿನಕಾಯ್ದೆಯ ಅನ್ವಯ ಉಪ್ಪನ್ನು ತಯಾರಿಸುವುದಕ್ಕೆ ನಿಷೇದ ಹೇರಿತು.ಉಪ್ಪಿನ ಮೇಲೆ ಬ್ರಿಟೀಷ ಸರಕಾರತೆರಿಗೆಯನ್ನು ಹೇರಿತು. ನಾವು ತಯಾರಿಸಿದ ಉಪ್ಪನ್ನು ನಾವೇ ಬಳಸುವಂತಿದ್ದಿಲ್ಲ. ಬ್ರಿಟೀಷ ಕಂಪನಿಗಳಿಗೆ ಮಾರಾಟ ಮಾಡಬೇಕಾಗಿತ್ತು. ಉಪ್ಪಿನಿಂದಲೇ ಕಂಪನಿಗಳಿಗೆ ತೆರಿಗೆಯಿಂದ ಲಾಭ ಬರುತ್ತಿತ್ತು. ಮೊಟ್ಟಮೊದಲು ಪಂಡಿತ ನೀಲಕಂಠ ವ್ಯಾಸಅವರುಉಪ್ಪಿನ ಮೇಲಿನ ತೆರಿಗೆಯನ್ನುರದ್ದು ಮಾಡಬೇಕೆಂದು ಹೇಳಿದರು. ಕರ್ನಾಟಕದ ಉಪ್ಪಿನ ಸತ್ಯಾಗ್ರಹದಲ್ಲಿ ಸದಾಶಿವರಾಯ ಕಾರ್ನಾಡ, ವಾಸುದೇವ, ಗಂಗಾಧರ ದೇಶಪಾಂಡೆ, ಹರ್ಡೇಕರ ಮಂಜಪ್ಪ, ಹಳ್ಳಿಕೇರಿ ಗುದ್ಲೆಪ್ಪ, ನಾರಾಯಣ ಜೋಶಿ, ಶ್ರೀನಿವಾಸ ಕೌಜಲಗಿ, ವಿಠ್ಠಲರಾವಕಾಮತ, ಹುಕ್ಕೇರಿಕರ ರಾಮರಾವ, ಶಂಕರರಾವ ಗುಲ್ವಾಡಿ, ವೀರನಗೌಡ ಪಾಟೀಲ, ಬಿಂಧು ಮಾಧವಕುರ್ಲಿ, ಆರ್.ಆರ್.ದಿವಾಕರ ಇವರೆಲ್ಲ ಭಾಗವಹಿಸಿ ಉಪ್ಪಿನ ಸತ್ಯಾಗ್ರಹ ಚಳುವಳಿಗೆ ಪ್ರೇರಕ ಶಕ್ತಿಯಾದರು. ಗಾಂಧೀಜಿಯವರಿಂದ ಹೊರಟ ದಂಡಿಯಾತ್ರಿಯಲ್ಲಿ ಕರ್ನಾಟಕ ಏಕೈಕ ವ್ಯಕ್ತಿ ಮಹಾದೇವ ಮೈಲಾರ ಅವರು ಭಾಗವಹಿಸಿದ್ದರು.
ಉಪ್ಪಿನ ಸತ್ಯಾಗ್ರಹಕ್ಕೆ ಕಾರವಾರದ ಅಂಕೋಲೆ ದಂಡಿಯಾಗಿತ್ತು. ಧಾರವಾಡದಲ್ಲಿ ಉಪ್ಪಿನ ಸತ್ಯಾಗ್ರಹದ ಕಚೇರಿಯನ್ನು ಪ್ರಾರಂಭಿಸಿ, ಚಳುವಳಿಯಲ್ಲಿ ಭಾಗವಹಿಸುವವರಿಗೆ ಹುಬ್ಬಳ್ಳಿ, ಧಾರವಾಡ, ಮಂಗಳೂರುಗಳಲ್ಲಿ ತರಬೇತಿಯನ್ನು ನೀಡಲಾಗುತ್ತಿತ್ತು. ಕರ್ನಾಟಕದಲ್ಲಿ ಪ್ರಾರಂಭವಾದ ಉಪ್ಪಿನ ಸತ್ಯಾಗ್ರಹ ಮುಂದಿನ ಚಳುವಳಿಗೆ ಕಳೆಯನ್ನು ತಂದುಕೊಟ್ಟಿತು. ಗೋವಿಂದ ಪೈ ಅವರು ಕಾಕಾ ಕಾಲೇಲಕರ ಮುಖಾಂತರ ಗಾಂಧೀಜಿಯವರಿಗೆ ಕೊಟ್ಟ ಕೋಲು ಕನ್ನಡದ ಕೋಲಾಗಿ ಪ್ರಸಿದ್ಧಿ ಪಡೆಯಿತು.
ಧಾರವಾಡ ಕ.ವಿ.ವಿ. ಇತಿಹಾಸ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಡಾ. ಈರಣ್ಣ ಪತ್ತಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ದತ್ತಿ ನಿಮಿತ್ಯ ಮಾತ್ರ. ಹಿರಿಯರನ್ನು ಸ್ಮರಿಸಿಕೊಳ್ಳುವ ಸನ್ನಿವೇಶ ಹಾಗೂ ಮೌಲಿಕ ವಿಷಯಗಳನ್ನು ತಿಳಿದುಕೊಳ್ಳುವ ಸಂದರ್ಭ ಇದರಿಂದ ಅಧಿಕವಾಗಿರುತ್ತದೆ. ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಉಪ್ಪಿನ ಸತ್ಯಾಗ್ರಹ ಒಂದು ಸಣ್ಣಘಟನೆ. ಅರಣ್ಯ ಸತ್ಯಾಗ್ರಹ, ವಿದೇಶಿ ವಸ್ತುಗಳ ಬಹಿಷ್ಕಾರಇಂತಹ ಅನೇಕ ವಿಷಯಗಳ ಹಿನ್ನೆಲೆಯಲ್ಲಿ ಗಾಂಧೀಜಿಯವರು ನಿರಂತರವಾಗಿ ಜನರಿಗೆ ಪ್ರಚೋದನೆ ನೀಡುತ್ತಾ ಬಂದಿದ್ದರು. ಸವದತ್ತಿಯಲ್ಲಿಯ ನಡೆದ ದಾಬಡೆಯವರು ಹೇಳಿದ ಸನ್ನಿವೇಶವನ್ನು ಪ್ರಸ್ತಾಪಿಸಿ ಸ್ವದೇಶಿ ವಸ್ತುಗಳ ಬಳಕೆಗಾಗಿ ಸ್ವಾತಂತ್ರ್ಯ ಹೋರಾಟಗಾರರು ಯಾವ ರೀತಿಯ ತಂತ್ರಗಳನ್ನು ಬಳಸುತ್ತಿದ್ದರು ಎಂಬುದನ್ನು ಪ್ರಸ್ತುತಪಡಿಸಿದರು.
ದತ್ತಿದಾನಿಗಳ ಪರವಾಗಿ ಹನುಮಾಕ್ಷಿ ಗೋಗಿ ಅವರು, ಉಪ್ಪು ಆಹಾರಕ್ಕೆ ರುಚಿಯನ್ನು ತಂದುಕೊಟ್ಟಿರುವಂಥದ್ದು. ಸವಳು ನೀರುಎಲ್ಲಿರುತ್ತದೆಯೋ ಅಲ್ಲಿ ಉಪ್ಪನ್ನು ತಯಾರಿಸುತ್ತಿದ್ದ ಒಂದು ಜನಾಂಗ ಇತ್ತು. ಅದನ್ನು ಉಪ್ಪಾರ ಜನಾಂಗ ಎಂದು ಗುರುತಿಸಲಾಗಿದೆ. ಅತ್ಯಂತ ಹಿಂದುಳಿದವರ ಈ ಜನಾಂಗ ಅರೆಅಲೆಮಾರಿಯಾಗಿ ಸಂಚರಿಸುತ್ತಾ ಉಪ್ಪನ್ನು ತಯಾರಿಸುತ್ತಿತ್ತು ಎಂದು ಹೇಳಿ, ಆ ಜನಾಂಗದ ಬಗ್ಗೆ ವಿವರವನ್ನು ನೀಡಿದರು.
ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಗುರು ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ವೀರಣ್ಣಒಡ್ಡೀನ ವಂದಿಸಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ವಿಶ್ವೇಶ್ವರಿ ಬ. ಹಿರೇಮಠ, ಮಹಾಂತೇಶ ನರೇಗಲ್, ಶ್ರೀನಿವಾಸ ವಾಡಪ್ಪಿ, ಸಿ.ಜಿ. ಹಿರೇಮಠ, ಪ್ರೊ.ಪಾಟೀಲ, ಎಸ್.ಸಿ.ನೀರಾವರಿ, ಪ್ರೊ.ನಾಗಭೂಷಣ ಸೇರಿದಂತೆ ಅನೇಕರು ಭಾಗವಹಿಸಿದ್ದರು.