ಕರ್ನಾಟಕಕ್ಕೆ 2970 ಕೋಟಿ ಸೇರಿ 30 ಸಾವಿರ ಕೋಟಿ ಜಿಎಸ್ ಟಿ ಪರಿಹಾರ ಬಿಡುಗಡೆ

ನವದೆಹಲಿ, ಮಾ. 30- ಪ್ರಸಕ್ತ ಹಣಕಾಸು ವರ್ಷ ಅಂತ್ಯವಾಗಲಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ‌ 30 ಸಾವಿರ ಕೋಟಿ ರೂಪಾಯಿ ಜಿಎಸ್ ಟಿ ಪರಿಹಾರ ಬಿಡುಗಡೆ ಮಾಡಿದೆ.

ಇದರ ಜೊತೆಗೆ ಅಡಾಕ್ ಪರಿಹಾರ ಮೊತ್ತವಾಗಿ 28 ಸಾವಿರ ಕೋಟಿ ರೂಪಾಯಿಗಳ ಪರಿಹಾರ ರೂಪದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ಜಿಎಸ್ಟಿ ಪರಿಹಾರ ದಲ್ಲಿ ಕರ್ನಾಟಕಕ್ಕೆ 2970 ಕೋಟಿ ರೂಪಾಯಿ ಕೇಂದ್ರ ಸರಕಾರ ಬಿಡುಗಡೆ ಮಾಡಿದೆ. ಉಳಿದಂತೆ ಎಲ್ಲ ರಾಜ್ಯಗಳಿಗೂ ಆಯಾ ರಾಜ್ಯಗಳಲ್ಲಿ ಸಂಗ್ರಹವಾದ ಸರಕು ಮತ್ತು ಸೇವಾ ತೆರಿಗೆ ಆಧಾರದ ಮೇಲೆ ಜಿ ಎಸ್ ಟಿ ಪರಿಹಾರ ಬಿಡುಗಡೆ ಮಾಡಲಾಗಿದೆ

ಹೊಸದಾಗಿ ಬಿಡುಗಡೆ ಮಾಡಿರುವ 30 ಸಾವಿರ ಕೋಟಿ ರೂಪಾಯಿ ಜಿಎಸ್ ಟಿ ಪರಿಹಾರ ಸೇರಿದಂತೆ ಕೇಂದ್ರ ಸರ್ಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೂ 70 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.

ಸರಕು ಮತ್ತು ಸೇವಾ ಮಂಡಳಿಯ ಶಿಫಾರಸ್ಸಿನ ಮೇರೆಗೆ ಜಿಎಸ್ಟಿ ಪರಿಹಾರ ಬಿಡುಗಡೆ ಮಾಡಲಾಗಿದೆ

ಸಾಲದ ರೂಪದಲ್ಲಿ ಇದುವರೆಗೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ 1,10,208 ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

2021ರ ಮರ್ಚ್ ಅಂತ್ಯಕ್ಕೆ ಕೊನೆಗೊಂಡಂತೆ ಅಡಾಕ್ ಪರಿಹಾರ ಬತ್ತಿಯಾಗಿ ಕೇಂದ್ರ ಜಿಎಸ್ಟಿ ಮತ್ತು ರಾಜ್ಯದ ಜಿಎಸ್ಟಿ ಪರಿಹಾರವಾಗಿ ಒಟ್ಟಾರೆ 28 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.