ಕರ್ನಾಟಕಕ್ಕೆ ಜಂಪ್‍ರೋಪ್‍ನಲ್ಲಿ ಸಮಗ್ರ ಪಶಸ್ತಿ
ಡೆಮೋ ಕಫ್ ಮಧ್ಯಪ್ರದೇಶಕ್ಕೆ


ಸಂಜೆವಾಣಿ ವಾರ್ತೆ
ಹೊಸಪೇಟೆ ಆ1: 19ನೇ ರಾಷ್ಟ್ರೀಯ ಜಂಪ್‍ರೋಪ್, 18ನೇ ಫೆಡರೇಷನ್ ಕಫ್ ಹಾಗೂ ವಿಶ್ವದಾಖಲೆಯ ಕ್ರೀಡಾಕೂಟದಲ್ಲಿ ಕರ್ನಾಟಕ ಸಮಗ್ರ ಪ್ರಶಸ್ತಿಯನ್ನು ಪಡೆಯುವ ಮೂಲಕ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ.
ಹೊಸಪೇಟೆಯ ಸಾಲಿ ಲೀಲಾರಂಗ ಮಂದಿರದಲ್ಲಿ ಮೂರುದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ ದೇಶದ 150 ಕ್ರೀಡಾಪಟುಗಳಿಂದ ನಿರಂತರ 36 ತಾಸುಗಳ ಡಬಲ್ ಡಚ್ ಇವೆಂಟ್‍ನಲ್ಲಿ ಹಳೆದ 24 ತಾಸುಗಳ ದಾಖಲೆಯನ್ನು ಮುರಿಯುವ ಮೂಲಕ ಹೊಸ  ವಿಶ್ವದಾಖಲೆಯನ್ನು ಬರೆದಿರುವುದ ಒಂದ ಕಡೆಯಾದರೆ, ಕೋವಿಡ್‍ನ 3 ವರ್ಷಗಳ ನಂತರ ಮೊದಲ ಬಾರಿ ನಡೆದ ಕ್ರೀಡಾಕೂಟದ 14 ಇವೇಂಟ್‍ಗಳಲ್ಲಿ ಬಂಗಾರ, ಬೆಳ್ಳಿ ಮತ್ತು ರಜತದ 66 ಪದಕಗಳನ್ನು ಪಡೆಯುವ ಮೂಲಕ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. 55 ಪದಕಗಳನ್ನು ಪಡೆದ ಮಹರಾಷ್ಟ್ರ ದ್ವಿತೀಯಸ್ಥಾನವನ್ನು ಪಡೆದಿದೆ. ಹಾಗೆ 43 ಪದಕಗಳನ್ನು ಪಡೆದ ಹರಿಯಾಣ 3 ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ.
ಆದರೆ ಮತ್ತೊಂದಡೆ ವೈಯುಕ್ತಿಕ ಸ್ಪರ್ಧೆಯ ಹೊರತಾಗಿ ನಡೆಯುವ ಗುಂಪು ಸ್ಪರ್ಧೆಯಾದ ಡೆಮೋ ಪ್ರದರ್ಶನದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಮಧ್ಯಪ್ರದೇಶ ಮೊದಲ ಸ್ಥಾನವನ್ನು ಪಡೆದರೆ ಹರಿಯಾಣ ದ್ವೀತಿಯ ಹಾಗೂ ಆಸ್ಮಾ ತೃತ್ತಿಯ ಸ್ಥಾನವನ್ನು ಪಡೆದುಕೊಂಡಿದೆ.
ಸಂಜೆ ಸುದೀರ್ಘ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾಜಿ ಶಾಸಕ ಎಚ್.ಆರ್.ಗವಿಯಪ್ಪ, ಆಯೋಜಕ ವಿಕಾಸ ಸಂಸ್ಥೆಯ ಅಧ್ಯಕ್ಷರು ಆಗಿರುವ ಕರ್ನಾಟಕ ಜಂಪ್‍ರೋಪ್ ಅಸೋಶಿಯೇಷನ್ ಅಧ್ಯಕ್ಷ ವಿಶ್ವನಾಥ ಹಿರೇಮಠ, ಇವೇಂಟ್ ಮುಖ್ಯಸ್ಥ ಅನಂತ ಜೋಶಿ, ಫೆಡರೇಷನ್ ಸಹ ಕಾರ್ಯದರ್ಶಿ ಸಾಜೀದ್ ಖಾನ್, ಎಲ್ಲಾ ರಾಜ್ಯಗಳ ಕಾರ್ಯದರ್ಶಿಗಳು ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಜಾಕ್ ಟೇಲರ್  ವಿಕಾಸ ಬ್ಯಾಂಕ್ ನಿರ್ದೇಶಕರು ಪಾಲ್ಗೊಂಡು ಬಹುಮಾನ ವಿತರಿಸಿದರು.