ಕರ್ನಾಟಕಕ್ಕೆ ಕುಮಾರಣ್ಣ, ಕೆ.ಆರ್.ಪೇಟೆಗೆ ಮಂಜಣ್ಣ, ಕಾರ್ಯಕ್ರಮಕ್ಕೆ ಚಾಲನೆ

ಕೆ.ಆರ್.ಪೇಟೆ. ಜ.12:- ರಾಜ್ಯದ ನೀರಾವರಿ ಯೋಜನೆಗಳಿಗೆ ಹಣ ನೀಡಲಿಲ್ಲ ಎಂಬ ಕಾರಣಕ್ಕಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಹೆಚ್.ಡಿ.ದೇವೇಗೌಡರಂಥಹ ದಿಗ್ಗಜರನ್ನು ಹೊಂದಿರುವ ಜೆಡಿಎಸ್ ಪ್ರಾದೇಶಿಕ ಪಕ್ಷಕ್ಕೆ ತಾವೆಲ್ಲರೂ ಆಶೀರ್ವಾದ ಮಾಡಬೇಕು ಎಂದು ಜೆಡಿಎಸ್ ಅಭ್ಯರ್ಥಿ ಹೆಚ್.ಟಿ. ಮಂಜು ತಿಳಿಸಿದರು.
ಅವರು ತಾಲೂಕಿನ ಬೂಕನಕೆರೆ ಹೋಬಳಿಯ ಬಿ.ಜಿ.ಹೊಸಕೊಪ್ಪಲು ಗ್ರಾಮದಲ್ಲಿ ಶ್ರೀಲಕ್ಷ್ಮಿದೇವಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಕರ್ನಾಟಕಕ್ಕೆ ಕುಮಾರಣ್ಣ, ಕೆ.ಆರ್.ಪೇಟೆಗೆ ಮಂಜಣ್ಣ, ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರೈತರ ಬದುಕನ್ನು ಹಸನುಗೊಳಿಸಲು ತೊಂಭತ್ತು ವರ್ಷವಾದರೂ ಸದಾ ರೈತಮುಖಿ ಚಿಂತನೆಗಳನ್ನು ಜಾರಿಗೊಳಿಸಲು ದೇವೇಗೌಡ ಅಪ್ಪಾಜಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಹೇಮಾವತಿ ನದಿ ನೀರು ಈ ಭಾಗಕ್ಕೆ ಹರಿಯಲು ಪ್ರಮುಖ ಕಾರಣಕರ್ತರೆ ನೀರಾವರಿ ಪಿತಾಮಹ ದೇವೇಗೌಡ ಅವರು ದೂರದೃಷ್ಟಿಯುಳ್ಳ ರಾಜಕಾರಣಿ. ಅವರಂತೆ ಅವರ ಸುಪುತ್ರ ಮಾಜಿ ಸಿಎಂ.ಕುಮಾರಣ್ಣ ರೈತರ ಸಾಲಮನ್ನಾ, ರೈತರ ಆತ್ಮಹತ್ಯೆ ತಡೆಯಲು ದಿಟ್ಟಕ್ರಮಗಳು, ವಿಧವೆಯರಿಗೆ, ವೃದ್ದರಿಗೆ, ಅಂಗವಿಕಲರಿಗೆ ಮಾಶಾಸನ ಜಾರಿಗೊಳಿಸುವುದು, ಶಾಲಾ ಕಟ್ಟಡಗಳ ನಿರ್ಮಾಣ, ತಾಂತ್ರಿಕ ಕಾಲೇಜುಗಳು, ವಿದ್ಯುತ್ ಉಪವಿದ್ಯುತ್ ಕೇಂದ್ರಗಳು, ಗ್ರಾಮ ವಾಸ್ತವ್ಯ ಸೇರಿದಂತೆ ಹತ್ತಾರು ಜನಪ್ರಿಯ ಕಾರ್ಯಕ್ರಮಗಳನ್ನು ನೀಡಿದ ಕುಮಾರಣ್ಣ ಮತ್ತೆ ನಮ್ಮ ನಾಡಿಗೆ ಮುಖ್ಯಮಂತ್ರಿ ಆಗಬೇಕು ಅದಕ್ಕಾಗಿ ನಿಮ್ಮೆಲ್ಲರ ಸಹಕಾರಬೇಕು.
ಕುಮಾರಣ್ಣನವರ ಮನೆಗೆ ಪ್ರತಿದಿನ ರಾಜ್ಯದ ವಿವಿಧ ಮೂಲೆಗಳಿಂದ ಬರುವ ಸಾವಿರಾರು ಬಡಜನರ ರೈತರ, ಕಷ್ಟಸುಖಗಳನ್ನು ನೋಡಿ ಈ ಸಮಸ್ಯೆಗಳಿಂದ ರೈತರನ್ನು ಪಾರುಮಾಡಲು ಪಂಚರತ್ನ ಕಾರ್ಯಕ್ರಮವನ್ನು ಅನುμÁ್ಠನಗೊಳಿಸಲಾಗುತ್ತಿದೆ. ಅದಕ್ಕಾಗಿ ನೀವೆಲ್ಲರೂ ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ತಿಳಿಸಿದರು. ಇದೇ ವೇಳೆ ಬೂಕನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮೇಗೌಡನ ಕೊಪ್ಪಲು, ಮೋದೂರು, ಬಿ.ಬಾಚಹಳ್ಳಿ, ಶೀಳನೆರೆಕೊಪ್ಪಲು, ವಿಜಯಹೊಸಹಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳ ಮನೆಮನೆ ಬೇಟಿ ಮಾಡಿ ರೈತರಿಗೆ ಪಂಚರತ್ನ ಕಾರ್ಯಕ್ರಮದ ಮಹತ್ವಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕುರುಬಹಳ್ಳಿನಾಗೇಶ್, ಎಂಡಿಸಿಸಿ ಬ್ಯಾಂಕ್ ಉಪಾದ್ಯಕ್ಷ ಅಶೋಕ್, ಜಿಲ್ಲಾ ಹಿರಿಯ ಉಪಾದ್ಯಕ್ಷ ನಾಗೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಮು, ಕಾರ್ಯಾಧ್ಯಕ್ಷ ರಾಜೇಗೌಡ, ಮನ್ಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್, ಜೆಡಿಎಸ್ ಮುಖಂಡ ಹುಲ್ಲೇಗೌಡ, ತಾಪಂ ಮಾಜಿ ಸದಸ್ಯ ಮೋಹನ್, ಬೂಕನಕೆರೆ ಹೋಬಳಿ ಘಟಕದ ಅಧ್ಯಕ್ಷ ನಂದೀಶ್, ಯುವಘಟಕದ ಅಧ್ಯಕ್ಷ ಮಂಜು, ಟಿಎಪಿಸಿಎಂಎಸ್ ನಿರ್ದೇಶಕ ಬಲದೇವ್, ಎಪಿಎಂಸಿ ಮಾಜಿ ನಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ಪಾಪಣ್ಣ, ರಮೇಶ್, ಚಂದ್ರಣ್ಣ, ಸೇರಿದಂತೆ ಹಲವರು ಹಾಜರಿದ್ದರು.