ಕರ್ತೃ ಗದ್ದುಗೆ ಪುನರ್ ಪ್ರತಿಷ್ಠಾಪನಾ ಸಂಪ್ರೋಕ್ಷಣ ವಿಧಿವಿಧಾನ

ಅಮ್ಮಿನಬಾವಿ,ಮಾ26 : ಗ್ರಾಮದ ಐತಿಹಾಸಿಕ ಪಂಚಗೃಹ ಹಿರೇಮಠದಲ್ಲಿ ಸ್ಥಳಾಂತರಗೊಂಡ ನೂತನ ಕರ್ತೃ ಗದ್ದುಗೆಯ ಪುನರ್ ಪ್ರತಿಷ್ಠಾಪನಾ ಸಂಪೆÇ್ರೀಕ್ಷಣ ವಿಧಿ-ವಿಧಾನವು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಶ್ರೀಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ಜರುಗಿತು.
ವೇದೋಕ್ತ ಮಂತ್ರ ಪಠಣದ ಮಧ್ಯೆ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಹಾಗೂ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಜಗದ್ಗುರುಗಳ ಪಾದಪೂಜೆ ನೆರವೇರಿಸಿ ಪಾದೋದಕವನ್ನೂ ಸಹ ಸಂಪೆÇ್ರೀಕ್ಷಣೆ ಮಾಡಲಾಯಿತು.
ಕಳೆದ ಸುಮಾರು 4 ದಶಕಗಳಿಂದ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳ ಜೊತೆಗೆ ಒಡನಾಟವಿದ್ದು, ರಂಭಾಪುರಿ ಜಗದ್ಗುರು ಪೀಠದ ಖಾಸಾ ಶಾಖಾಮಠವಾಗಿರುವ ಅಮ್ಮಿನಬಾವಿ ಪಂಚಗೃಹ ಹಿರೇಮಠಕ್ಕೆ ಸುಮಾರು ಸಾವಿರ ವರ್ಷಗಳ ಚಾರಿತ್ರಿಕ ಘನತೆ ಇದೆ ಎಂದು ರಂಭಾಪುರಿ ಪೀಠದ ಶ್ರೀಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಮೆಚ್ಚಿಗೆ ವ್ಯಕ್ತಪಡಿಸಿದರು.
90 ವಸಂತಗಳನ್ನು ಕಂಡಿರುವ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳನ್ನು ಹಾಗೂ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳನ್ನು ರಂಭಾಪುರಿ ಜಗದ್ಗುರುಗಳು ಶಾಲು ಹೊದಿಸಿ ಮಂತ್ರಾಕ್ಷತೆ ದಯಪಾಲಿಸಿ ಆಶೀರ್ವದಿಸಿದರು.
ಹುಬ್ಬಳ್ಳಿ ತಾಲೂಕು ಸುಳ್ಳದ ಪಂಚಗೃಹ ಹಿರೇಮಠದ ಶ್ರೀಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ಹಾಗೂ ಹಲಗೂರು ಬೃಹನ್ಮಠದ ಶ್ರೀರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಇದ್ದರು.