ಕರ್ತೃ ಗದ್ದಿಗೆ ನೂತನ ಲಿಂಗ ಪ್ರತಿಷ್ಠಾಪನೆ

ಚಿಂಚೋಳಿ,ಸೆ.24- ಪಟ್ಟಣದ ಶ್ರೀ ಮಹಾಂತೇಶ್ವರ ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಾರಕೂಡ ಹಾಗೂ ಚಿಂಚೋಳಿ ಶ್ರೀಮಠದ ಪೀಠಾಧಿತಿಗಳಾದ ಪರಮ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ತಮ್ಮ ಅಮೃತ ಹಸ್ತದಿಂದ ಶ್ರೀ ಗುರು ಗಂಗಾಧರೇಶ್ವರ ಪ್ರಭುಗಳ ಗವಿ ಹಾಗೂ ಕರ್ತೃ ಗದ್ದಿಗೆಯ ಮೇಲೆ ನೂತನ ಲಿಂಗ ಪ್ರತಿಷ್ಠಾಪಿಸಿದರು.
ಸಂಗಪ್ಪ ಪಾಲಾಮೂರ್, ಶಾಂತವೀರ ಸುಂಕದ, ಸೋಮಯ್ಯ ಸ್ವಾಮಿ, ನಾಗೇಶ ಪಾಳಮೂರ, ನೀಲಕಂಠ ಸೀಳಿನ್, ವೀರೇಂದ್ರ ಜಾಬಶೆಟ್ಟಿ, ಶರಣಗೌಡ ಸುಂಕದ, ಮುಂತಾದವರು ಉಪಸ್ಥಿತರಿದ್ದರು.