ಕರ್ತವ್ಯ ಬಿಟ್ಟು ಚುನಾವಣಾ ಪ್ರಚಾರದಲ್ಲಿ ಸರ್ಕಾರಿ ಶಿಕ್ಷಕರು : ಜೈಕರವೇ

ಔರಾದ : ನ.17:ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಋತು ಆರಂಭಗೊಂಡಿದ್ದೆ, ತಾಲೂಕಿನ ಶಿಕ್ಷಕರು ಭೋದನೆ ಬಿಟ್ಟು ಚುನಾವಣಾ ಪ್ರಚಾರ ಪ್ರಚಾರದಲ್ಲಿ ತೊಡಗಿದ್ದು ದುರಂತದ ಸಂಗತಿ ಎಂದು ಜೈಕರವೇ ಆಗ್ರಹಿಸಿದೆ.

ಅನೇಕ ಶಿಕ್ಷಕರು ಪಾಠ ಮಾಡುವುದು ಮರೆತು ಪೈಪೆÇೀಟಿಯಲ್ಲಿ ಚುನಾವಣೆಗಳಲ್ಲಿ ಭಾಗವಹಿಸಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡದೆ ಚುನಾವಣೆಯಲ್ಲಿ ತೊಡಗಿಕೊಂಡು ಶಾಲೆಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಕೋವಿಡ್ ನಿಂದಾಗಿ ಎರಡು ವರ್ಷಗಳಿಂದ ಮಕ್ಕಳು ಶಿಕ್ಷಣದಿಂದ ದೂರವಾಗಿದ್ದಾರೆ. ದೀರ್ಘಕಾಲದ ನಂತರ ಶಾಲಾ ಕಾಲೇಜುಗಳು ಪ್ರಾರಂಭವಾಗಿವೆ , ಮಕ್ಕಳು ಖುಷಿ ಖುಷಿಯಿಂದ ಶಾಲೆಗೆ ಬರುತ್ತಿದ್ದಾರೆ ಆದರೆ ಶಾಲೆಯ ಶಿಕ್ಷಕರು ಶಾಲಾ ಅವಧಿ ಮುಗಿದ ಮೇಲೆ ಅವರು ಏನೇ ಮಾಡಲಿ ಆದರೆ, ಶಾಲಾ ಅವಧಿಯಲ್ಲಿ ಮಕ್ಕಳಿಗೆ ಬೋಧನೆ ಮಾಡುವುದು ಬಿಟ್ಟು ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಪ್ರಯುಕ್ತ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಈ ಎಲ್ಲ ಸಂಗತಿಗಳು ಕ್ಷೇತ್ರ ಶಿಕ್ಷಣಾಧಿಕಾರಿ ಅಧಿಕಾರಿಗಳಿಗೆ ತಿಳಿದಿದ್ದರು ಸಹ ಕಣ್ಮುಚ್ಚಿ ಕುಳಿತಿರುವುದು, ವಿಪರ್ಯಾಸ ಕೂಡಲೆ ಅಧಿಕಾರಿಗಳು ಗಮನಹರಿಸಿ ಶಾಲಾ ಅವಧಿಯಲ್ಲಿ ಅನ್ಯ ಚಟುವಟಿಕೆಗಳಲ್ಲಿ ತೊಡಗಿರುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಜೈ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಔರಾದ್ ತಹಸೀಲ್ದಾರ ಮಲಶೆಟ್ಟಿ ಚಿದ್ರೆ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು

ಈ ಸಂದರ್ಭದಲ್ಲಿ ಜೈ ಕರವೇ ಅಧ್ಯಕ್ಷ ಶರಣಪ್ಪ ಪಾಟೀಲ, ಗೋಪಾಲಸಿಂಗ ಠಾಕೂರ್, ಅನಿಲ ಜಿರೋಬೆ, ಸಂಜುಕುಮಾರ ಚಲವಾ, ಆನಂದ ದೇಶಪಾಂಡೆ, ರಮೇಶ ಪಾಟೀಲ ಸಂತಪೂರ, ನವನಾಥ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.