ಕರ್ತವ್ಯ ಪ್ರಜ್ಞೆ ಹೆಚ್ಚಲು ಶಿಕ್ಷಕರಿಗೆ ಸ್ಪರ್ಧೆಗಳು ಪ್ರೇರಣೆಯಾಗಲಿ-ಕನ್ನಯ್ಯ

ಕೋಲಾರ,ನ,೧೮- ಸದಾ ಕರ್ತವ್ಯದ ಒತ್ತಡದಲ್ಲಿರುವ ಶಿಕ್ಷಕರಿಗೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಅವರಲ್ಲಿ ಕರ್ತವ್ಯ ಪ್ರಜ್ಞೆ ಹೆಚ್ಚಲು ಪ್ರೇರಣೆ ನೀಡುವ ಕೆಲಸವನ್ನು ಶಿಕ್ಷಣ ಇಲಾಖೆ ಮಾಡುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ತಿಳಿಸಿದರು.
ನಗರದ ಮೆಥೋಡಿಸ್ಟ್ ಶಾಲಾ ಆವರಣದಲ್ಲಿ ನಡೆದ ಶಿಕ್ಷಕರ ಸಹಪಠ್ಯ ಚಟುವಟಿಕೆಗಳಲ್ಲಿ ವಿಜೇತ ಶಿಕ್ಷಕರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿ, ಪ್ರಥಮ ಸ್ಥಾನ ಗಳಿಸಿರುವ ಎಲ್ಲಾ ಶಿಕ್ಷಕರು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.
ಪ್ರತಿಭೆ ಯಾರೊಬ್ಬರ ಸ್ವತ್ತು ಅಲ್ಲ, ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆ ಇರುತ್ತದೆ ಎಂದ ಅವರು, ಆದರೆ ಪ್ರದರ್ಶನಕ್ಕೆ ವೇದಿಕೆ ಸಿಕ್ಕಿರುವುದಿಲ್ಲ, ಇಂದು ಅನೇಕ ಸಾಧಕ ಮಕ್ಕಳ ಬೆನ್ನಿಗೆ ಶಿಕ್ಷಕರೇ ನಿಂತು ಪ್ರೇರಣೆ ನೀಡಿ ಬೆಳೆಸಿದ್ದು, ಅನೇಕ ಮಕ್ಕಳು ರಾಜ್ಯ,ರಾಷ್ಟ್ರಮಟ್ಟದ ಸಾಧನೆಯನ್ನೂ ಮಾಡಿದ್ದಾರೆ, ಇದು ಗುರುವಿನ ಸ್ಥಾನಕ್ಕಿರುವ ಶಕ್ತಿ ಎಂದರು.
ಇಂದಿನ ಸ್ಪರ್ಧೆಯಲ್ಲಿ ಶಿಕ್ಷಕರು ತಮ್ಮಲ್ಲಿನ ಪ್ರತಿಭೆ ಪ್ರದರ್ಶಿಸಿ ಬಹುಮಾನ ಪಡೆದಿದ್ದೀರಿ, ಈ ಸಾಧನೆ ಮಕ್ಕಳಿಗೂ ಹರಿಸಿ, ಅವರಲ್ಲೂ ಸಾಧಕರನ್ನು ಹೊರತನ್ನಿ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಚೌಡಪ್ಪ, ಶಿಕ್ಷಕರಲ್ಲಿ ಅತ್ಯಂತ ಪ್ರತಿಭಾನ್ವಿತರಿದ್ದು, ಅವರಿಗೆ ವೇದಿಕೆ ಸಿಕ್ಕಿಲ್ಲಿ, ಕಳೆದ ೨ ವರ್ಷಗಳಿಂದ ಕೋವಿಡ್ ಮಾರಿ ಇದಕ್ಕೆ ಅಡ್ಡಿಯಾಗಿತ್ತು ಎಂದ ಅವರು, ಇದೀಗ ಸಿಕ್ಕಿರುವ ವೇದಿಕೆ ಸದ್ಬಳಕೆ ಮಾಡಿಕೊಳ್ಳಿ, ರಾಜ್ಯಮಟ್ಟಕ್ಕೂ ಹೋಗಿ ಸಾಧನೆ ಮಾಡಿ ಎಂದು ಕೋರಿದರು.
ನೋಡಲ್ ಅಧಿಕಾರಿ ಹಾಗೂ ಇಸಿಒ ಮುನಿರತ್ನಯ್ಯಶೆಟ್ಟಿ ಮಾತನಾಡಿ, ಸಹಪಠ್ಯಚಟುವಟಿಕೆ ತಾಲ್ಲೂಕುಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಮಾಣಪತ್ರ ಹಾಗೂ ನಗದು ಪುರಸ್ಕಾರ ನೀಡಿದ್ದು, ಪ್ರಥಮ ಬಹುಮಾನ ಪಡೆದ ಶಿಕ್ಷಕರು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದು, ದಿನಾಂಕ ಪ್ರಕಟಿಸಿದಾಗ ತಪ್ಪದೇ ಹಾಜರಾಗಿ ಅಲ್ಲಿಯೂ ಸಾಧನೆ ಮಾಡಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಶ್ವಥ್ಥನಾರಾಯಣಗೌಡ, ಇಸಿಒ ಮುನಿರತ್ನಯ್ಯಶೆಟ್ಟಿ, ಜಿಲ್ಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಶಿವಕುಮಾರ್, ತಾಲ್ಲೂಕು ಅಧ್ಯಕ್ಷ ನಾರಾಯಣರೆಡ್ಡಿ, ಎಸ್ಸಿಎಸ್ಟಿ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ನಾಗರಾಜ್, ಶಿಕ್ಷಕರಾದ ಮಂಜುನಾಥ್, ನಂದೀಶ್, ಬಿಆರ್‌ಪಿ ನಾಗರಾಜ್ ಮತ್ತಿತರರು ಹಾಜರಿದ್ದರು.
ಪ್ರೌಢಶಾಲಾ ವಿಭಾಗ-ವಿಜೇತರ ವಿವರ
ಪ್ರೌಢಶಾಲಾ ವಿಭಾಗದಲ್ಲಿ ಭಕ್ತಿಗೀತೆ-ನಂದೀಶ್, ಎನ್.ರಮಾ, ಎಂ.ರವಿ ಕ್ರಮವಾಗಿ ಪ್ರಥಮ,ದ್ವಿತೀಯ,ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಆಶುಭಾಷಣ ಸ್ಪರ್ಧೆಯಲ್ಲಿ ಸಿ.ಎಲ್.ಶ್ರೀನಿವಾಸಲು, ಸಿ.ಎಂ.ಪ್ರಕಾಶ್,ಬಿ.ಎಂ. ಚಂದ್ರಪ್ಪ, ಕ್ರಮವಾಗಿ ಪ್ರಥಮ,ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ. ಪ್ರಬಂಧ ಸ್ಪರ್ಧೆಯಲ್ಲಿ ಡಿ.ಎ.ರಾಜಣ್ಣ, ವಿಶ್ವನಾಥ್, ರಾಮಯ್ಯಶೆಟ್ಟಿ ಹಾಗೂ ಸಾಮಾನ್ಯ ಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಎಂ.ರಮೇಶ್, ಶರಣಪ್ಪ ಜಮಾದಾರ್, ಕೃಷ್ಣಮೂರ್ತಿ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.
ಸ್ಥಳದಲ್ಲೇ ಕಲಿಕೋಪಕರಣ ತಯಾರಿಕೆ ಸ್ಪರ್ಧೆಯಲ್ಲಿ ಎಸ್.ಶೈಲ, ಎಸ್.ಸುರೇಶ್‌ಕುಮಾರ್, ವಿ.ಸುಷ್ಮಾ, ರಸಪ್ರಶ್ನೆ ವಿಜ್ಞಾನದಲ್ಲಿ ಮುಜಾಹಿದ್ ಪಾಷಾ, ಸುಬ್ರಮಣಿ, ಹೇಮಂತಕುಮಾರ್ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದು, ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆಯಲ್ಲಿ ಎಂ.ಮಂಜುಳಾ, ಸೌಮ್ಯ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.
ಪ್ರಾಥಮಿಕ ಶಾಲಾ
ವಿಭಾಗ-ವಿಜೇತರು
ಭಕ್ತಿಗೀತೆ ವಿಭಾಗದಲ್ಲಿ ಎ.ವಿ.ಸೌಮ್ಯ, ವರಲಕ್ಷ್ಮಮ್ಮ, ಯಶೋಧ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ. ಆಶುಭಾಷಣ ಸ್ಪರ್ಧೆಯಲ್ಲಿ ಎಂ.ಎನ್.ಶ್ರೀನಿವಾಸ, ಟಿ.ಎಸ್.ಮಂಜುನಾಥ, ನಾರಾಯಣಸ್ವಾಮಿ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಎ.ವರಲಕ್ಷ್ಮಿ, ವಿ.ರೂಪ, ಕೆ.ಆರ್.ಕಮಲಾಕ್ಷಿ ಕ್ರಮವಾಗಿ ಪ್ರಥಮ,ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.
ಸಾಮಾನ್ಯಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿ.ಸುಮಿತ್ರ, ಬಿ.ಎನ್.ಮಂಜುನಾಥ್, ಎಂ.ವಿ.ಸುಬ್ರಮಣ್ಯಂ, ಸ್ಥಳದಲ್ಲೇ ಕಲಿಕೋಪಕರಣ ತಯಾರಿಕೆ ಸ್ಪರ್ಧೆಯಲ್ಲಿ ಹೆಚ್.ಎನ್.ನೀಲಮ್ಮ, ಕೆ.ವಿ.ಜಗನ್ನಾಥ್, ಆಜ್ರಾಭಾನು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.
ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆಯಲ್ಲಿ ಡಿ.ನೇತ್ರಾವತಿ, ವಿ.ರಮೇಶ್, ವೀಣಾಕುಮಾರ್ ಹಾಗೂ ರಸಪ್ರಶ್ನೆ ವಿಜ್ಞಾನದಲ್ಲಿ ಸಿಆರ್‌ಪಿ ಚಂದ್ರಶೇಖರ್, ಕೆ.ಎನ್.ಜಯಸುಧ, ಸಿಆರ್‌ಪಿ ಮದುಸೂಧನ್ ಕ್ರಮವಾಗಿ ಪ್ರಥಮ,ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.