
ಭಾಲ್ಕಿ:ಆ.29:ಪೆÇಲೀಸರು ಜನರ ರಕ್ಷಣೆಗೆ ಸದಾ ಬದ್ಧರಾಗಿರಬೇಕು. ಕರ್ತವ್ಯ ನಿಷ್ಠೆ, ಉತ್ತಮ ಕಾರ್ಯನಿರ್ವಹಣೆ ಮೂಲಕ ಇಲಾಖೆಗೆ ಒಳ್ಳೆಯ ಹೆಸರು ತರಬೇಕೆಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಹೇಳಿದರು. ಪಟ್ಟಣದ ಉಪ ಪೊಲೀಸ್ ವಿಭಾಗದ ಉಪಾಧೀಕ್ಷಕರ ಕಚೇರಿಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರ ವಿತರಿಸಿ ಅವರು ಮಾತನಾಡಿದರು.
ಅಪರಾಧ ತಡೆಗೆ ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಕೂಡ ಕೈಜೋಡಿಸಿದರೇ ಸಮಾಜದಲ್ಲಿ ಅಪರಾಧ ಪ್ರಕರಣ ನಿಯಂತ್ರಿಸಲು ಸಾಧ್ಯವಾಗುತ್ತದೆ. ಅಪರಾಧ ಕಂಡು ಬಂದಲ್ಲಿ ತಕ್ಷಣ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು ಎಂದರು. ವಿವಿಧೆಡೆ ಕಳವು ಆಗಿದ್ದ ಪ್ರಕರಣಗಳನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಇದ್ದರು.
ಪ್ರಶಂಸನಾ ಪತ್ರ ವಿತರಣೆ :
ಗುಪ್ತ ಮಾಹಿತಿ ಸಂಗ್ರಹ, ಅಪರಾಧ ಪತ್ತೆ, ರಸ್ತೆಯಲ್ಲಿ ಸಂಭವಿಸಿದ ಅಪಘಾತ ಸ್ಥಳಗಳಿಗೆ ತ್ವರಿತ ಭೇಟಿ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಕರ್ತವ್ಯ ನಿರ್ವಹಿಸಿದ ಪೆÇಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಪ್ರಶಂಸನಾ ಪತ್ರ ಮತ್ತು ಬಹುಮಾನ ನೀಡಲಾಯಿತು. ಕಮಲನಗರ ಸಿಪಿಐ ರಾಮಪ್ಪ ಸಾವಳಗಿ, ಪಿಎಸ್‍ಐ ಚಂದ್ರಶೇಖರ, ಸಿಬ್ಬಂದಿಗಳಾದ ಇಮ್ರಾನ್, ಲೋಕೇಶ್, ರಜನಿಕಾಂತ್, ಪ್ರಶಾಂತ, ಅಜಯಸಿಂಗ್, ಪರಶುರಾಮ, ಶಿವಾನಂದ, ನಾಗನ್ನಾಥ, ಭಾಲ್ಕಿ ಗ್ರಾಮೀಣ ಸಿಪಿಐ ಗುರುಪಾದ ಬಿರಾದಾರ್, ಧನ್ನೂರು ಪಿಎಸ್‍ಐಗಳಾದ ವಿಶ್ವರಾಧ್ಯ, ವೀರಶೆಟ್ಟಿ ಪಾಟೀಲ್, ಸಿಬ್ಬಂದಿಗಳಾದ ಶಿವರಾಜ, ಪ್ರಶಾಂತ, ವಿಷ್ಣು, ರಮೇಶ್, ಈರಾರೆಡ್ಡಿ, ಮೇಹಕರ್ ಪಿಎಸ್‍ಐ ಶಿವಕುಮಾರ, ಸಿಬ್ಬಂದಿಗಳಾದ ಆಕಾಶ, ಗೌಸೋದ್ದಿನ್, ರೇಣುಕಪ್ಪ, ಪ್ರಕಾಶ್ ಮತ್ತು ಶಶಿಕುಮಾರ್ ಅವರನ್ನು ಎಸ್ಪಿ ಚನ್ನಬಸವಣ್ಣ ಅವರು ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದರು.